hdmc permission ಹುಬ್ಬಳ್ಳಿಯ ಮಹಾನಗರ ಪಾಲಿಕೆಯಲ್ಲಿ ಮೇಯರ್ ಜ್ಯೋತಿ ಪಾಟೀಲ್ ಅವರಿಗೆ ಮನವಿ ಸಲ್ಲಿಸಿದ ಸುರೇಶ ಕಿರೇಸೂರ.
- ಕಟ್ಟಡ ಪರವಾನಿಗೆ ಇ-ಸ್ವತ್ತು ವಿಳಂಬ
- ಜನರ ಅಲೆದಾಟ ತಪ್ಪಿಸಲು ಆಗ್ರಹ
ಹುಬ್ಬಳ್ಳಿ: hdmc permission ಮಹಾನಗರ ಪಾಲಿಕೆಯಲ್ಲಿ ಕಟ್ಟಡ ಪರವಾನಿಗೆ ಹಾಗೂ ಇ-ಸ್ವತ್ತು ಸರಿಯಾದ ಸಮಯಕ್ಕೆ ಸಿಗದೇ ನಾಗರಿಕರು ಅಲೆದಾಡುವಂತಾಗಿದೆ ಎಂದು ಇಂಡಿಯನ್ ಕಾಂಕ್ರಿಟ್ ಇನ್ಸ್ಟಿಟ್ಯೂಟ್ (ಐಸಿಐ) ಪದಾಧಿಕಾರಿಗಳು ದೂರಿದ್ದಾರೆ.
ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆ ಬಗೆ ಹರಿಸಿ ಪರಿಹಾರ ಕಂಡುಕೊಳ್ಳಬೇಕೆಂದು ಮೇಯರ್ ಜ್ಯೋತಿ ಪಾಟೀಲ್ ಅವರಿಗೆ ಐಸಿಐ ಹುಬ್ಬಳ್ಳಿ ಧಾರವಾಡ ಸೆಂಟರ್ನ ಚೇರ್ಮನ್ ಸುರೇಶ ಕಿರೇಸೂರ ಅವರು ಮನವಿ ಸಲ್ಲಿಸಿದ್ದಾರೆ.
ಸಿವಿಲ್ ಇಂಜಿನಿಯರ್ಸ್ಗಳು ಈಗಾಗಲೇ ಪಾಲಿಕೆಗೆ ಮನವಿ ಮಾಡಿದ್ದು, ಕಟ್ಟಡ ಪರವಾನಿಗೆ ಪಡೆಯಲು ಹಾಗೂ ಇ-ಸ್ವತ್ತು ಪಡೆಯಲು ಪ್ರತಿದಿನ ಮಹಾನಗರ ಪಾಲಿಕೆಗೆ ಎಡತಾಕುವುದನ್ನು ತಪ್ಪಿಸಬೇಕು ಎಂದು ಕೋರಿದ್ದಾರೆ.
ಅಧಿಕಾರಿಗಳು ಇಲ್ಲ ಸಲ್ಲದ ದಾಖಲಾತಿಗಳನ್ನು ಕೇಳುತ್ತಿದ್ದಾರೆ. ಕಟ್ಟಡ ಪರವಾನಿಗೆ ನಿಯಮಾವಳಿಗಳ ಪ್ರಕಾರ "ನಿರ್ಮಾಣ-' ಆನ್ಲೈನ್ ಮುಖಾಂತರ ಎಲ್ಲ ದಾಖಲೆಗಳನ್ನು ಸಲ್ಲಿಸಿ ಕಟ್ಟಡ ಪರವಾನಿಗೆಗೆ ಅಜಿರ್ ನೀಡಲಾಗುತ್ತದೆ. ಆದರೆ, ಅಧಿಕಾರಿಗಳು ದಾಖಲಾತಿಗಳ ಹಾರ್ಡ್ ಕಾಪಿ ಕೇಳುತ್ತಿದ್ದಾರೆ.
ಇದರಿಂದ ಆನ್ಲೈನ್ ಮಾಡಿ ಏನು ಉಪಯೋಗ? ಅಲ್ಲದೇ ವಿನಾಕಾರಣ ಸಂಬಂಧವಿಲ್ಲದ ದಾಖಲೆಗಳನ್ನು ಕೇಳಿ ಜನರನ್ನು ಅಲೆದಾಡಿಸುತ್ತಿದ್ದಾರೆ ಎಂದು ದೂರಲಾಗಿದೆ.
"ನಿರ್ಮಾಣ' ಆನ್ಲೈನ್ ಮಾಡಿದ್ದು ಜನರ ಅನುಕೂಲಕ್ಕಾಗಿ, ಇದರಿಂದ ಮಧ್ಯವತಿರ್ಗಳ ಹಾವಳಿ ತಪ್ಪಿಸಬಹುದು. ಆದರೆ, ಅಧಿಕಾರಿಗಳು ಮತ್ತೆ ದಾಖಲೆಗಳ ಹೆಸರಿನಲ್ಲಿ ಅಲೆದಾಡಿಸುತ್ತಿರುವುದು ಆನ್ಲೈನ್ ವ್ಯವಸ್ಥೆಗೆ ಬೆಲೆ ಇಲ್ಲದಂತಾಗಿದೆ.