hdb workshop ಹುಬ್ಬಳ್ಳಿಯಲ್ಲಿ ಏರ್ಪಡಿಸಿದ್ದ ಡ್ರೈವ್​ ಎಚ್​ಡಿಬಿ ಕಾರ್ಯಾಗಾರದಲ್ಲಿ ಕೆಸಿಸಿಐ ಅಧ್ಯಕ್ಷ ಜಿ.ಕೆ. ಆದಪ್ಪಗೌಡರ, ಶಂಕರಣ್ಣ ಮುನವಳ್ಳಿ, ಸಂಜಯ್​ ಅಲಮೇಲಕರ, ಉದಯ ರೇವಣಕರ ಇತರರು ಪಾಲ್ಗೊಂಡಿದ್ದರು. 
ಧಾರವಾಡ

hdb workshop ಇವಿ ಕೈಗಾರಿಕಾ ಸರಪಳಿಗೆ ಉಕದಲ್ಲಿ ಹೊಸ ಅವಕಾಶ

ಪ್ರಮುಖ ಮುಖ್ಯಾಂಶಗಳು

  • ಡ್ರೈವ್ ಎಚ್​ಡಿಬಿ ಕಾರ್ಯಾಗಾರದಲ್ಲಿ ತಜ್ಞರ ಅಭಿಮತ

ಹುಬ್ಬಳ್ಳಿ: hdb workshop ಇಲೆಕ್ಟ್ರಿಕ್​ ವಾಹನ (ಇವಿ)

ಕ್ಷೇತ್ರ

ವು ಹೊಸ ಕೈಗಾರಿಕೆ, ತಂತ್ರಜ್ಞಾನ, ಪೂರೈಕೆ ಸರಪಳಿ ಹಾಗೂ ಹೊಸದಾಗಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಉದ್ಯಮ ವಲಯದ ಪರಿವರ್ತನೆಯಾಗಿದೆ ಎಂದು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಜಿ.ಕೆ. ಆದಪ್ಪಗೌಡರ ಅಭಿಪ್ರಾಯಪಟ್ಟರು.

ನಗರದಲ್ಲಿ ಹುಬ್ಬಳ್ಳಿ- ಧಾರವಾಡ- ಬೆಳಗಾವಿ ಪ್ರದೇಶವನ್ನು ಇಲೆಕ್ಟ್ರಿಕ್​ ವಾಹನಗಳ ಉತ್ಪಾದನೆ ಮತ್ತು ಪೂರೈಕೆ ಸರಪಳಿಯ ಪ್ರಮುಖ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ಏರ್ಪಡಿಸಿದ್ದ "ಡ್ರೈವ್ ಎಚ್​ಡಿಬಿ- ಡೆವಲಪಿಂಗ್​ ರೀಜನಲ್​ ಇಂಡಸ್ಟ್ರೀಯಲ್​ ವ್ಯಾಲ್ಯೂ ಚೈನ್ಸ್​ ಫಾರ್​ ಇಲೆಕ್ಟ್ರಿಕ್​ ವೆಹಿಕಲ್ಸ್​' ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಕ್ಷೇ

ತ್ರವನ್ನು ಕೇವಲ ಭವಿಷ್ಯದ ಸಾರಿಗೆ ವ್ಯವಸ್ಥೆಯಾಗಿ ನೋಡದೆ, ಉತ್ತರ ಕರ್ನಾಟಕದ ಕೈಗಾರಿಕಾ ಅಭಿವೃದ್ಧಿಗೆ ದೊರೆತಿರುವ ದೊಡ್ಡ ಅವಕಾಶವಾಗಿ ನೋಡಬೇಕಾಗಿದೆ. ಹುಬ್ಬಳ್ಳಿ- ಧಾರವಾಡ- ಬೆಳಗಾವಿ ಪ್ರದೇಶವನ್ನು (ಎಚ್​ಡಿಬಿ) ಇವಿ ಉತ್ಪಾದನೆ ಮತ್ತು ಘಟಕಗಳ ಪೂರೈಕೆಯ ಪ್ರಮುಖ ಕೇಂದ್ರವನ್ನಾಗಿ ರೂಪಿಸುವ ಸಾಮರ್ಥ್ಯ ಇಲ್ಲಿದೆ. ಸ್ಥಳಿಯ ಎಂಎಸ್​ಎಂಇಗಳು ಮತ್ತು ಯುವ ಉದ್ಯಮಿಗಳು ಈ ಹೊಸ ಅವಕಾಶವನ್ನು ಬಳಸಿಕೊಳ್ಳಬೇಕು ಎಂದರು.

ಅತಿಥಿಗಳಾಗಿದ್ದ ಸಂಸ್ಥೆಯ ಮಾಜಿ ಅಧ್ಯಕ್ಷ ಶಂಕರಣ್ಣ ಮುನವಳ್ಳಿ ಅವರು, ಇವಿ

ಕ್ಷೇ

ತ್ರದಲ್ಲಿ ಬ್ಯಾಟರಿ, ಮೋಟಾರ್​, ಕಂಟ್ರೋಲರ್​, ಚಾರ್ಜರ್​, ಪವರ್​ ಇಲೆಕ್ಟ್ರಾನಿಕ್ಸ್​, ವಯರಿಂಗ್​ ಹಾರ್ನೆಸ್​, ಸೆನ್ಸರ್​ಗಳು, ಹಾಗೂ ವಿವಿಧ ಆಟೋಮೊಬೈಲ್​

ಗಳ ತಯಾರಿಕೆಯಲ್ಲಿ ಸ್ಥಳಿಯ ಎಂಎಸ್​ಎಂಇಗಳಿಗೆ ಹೆಚ್ಚಿನ ಅವಕಾಶಗಳಿವೆ. ಈ ಅವಕಾಶಗಳನ್ನು ಬಳಸಿಕೊಂಡು ಸ್ಥಳಿಯ ಕೈಗಾರಿಕೆಗಳನ್ನು ರಾಷ್ಟ್ರೀಯ ಹಾಗೂ ಜಾಗತಿಕ ಇವಿ ಪೂರೈಕೆ ಸರಪಳಿಯೊಂದಿಗೆ ಸಂಪರ್ಕಿಸುವ ಕುರಿತು ಅರಿವು ನೀಡುವ ಕಾರ್ಯಾಗಾರ ಇದಾಗಿದೆ ಎಂದರು.

ಜೆಎಸ್​ಡಬ್ಲ್ಯೂ ಸಂಸ್ಥೆಯ ಅಸೋಸಿಯೇಟ್​ ಉಪಾಧ್ಯಕ್ಷ ಸಂಜಯ್​ ಅಲಮೇಲಕರ ಮಾತನಾಡಿ, ಇಲೆಕ್ಟ್ರಿಕ್​ ವಾಹನಗಳ

ಕ್ಷೇ

ತ್ರದ ವೇಗದ ಬೆಳವಣಿಗೆಯನ್ನು ಬಳಸಿಕೊಂಡು ಉತ್ತರ ಕರ್ನಾಟಕದಲ್ಲಿ ಕೈಗಾರಿಕೆಗಳು, ಎಂಎಸ್​ಎಂಇಗಳು, ಸ್ಟಾರ್ಟ್​ಅಪ್​ಗಳು ಹಾಗೂ ಸ್ಥಳಿಯ ಪೂರೈಕೆದಾರರನ್ನು ಒಳಗೊಂಡ ಬಲಿಷ್ಠ ಪ್ರಾದೇಶಿಕ ಕೈಗಾರಿಕಾ ಸರಪಳಿಯನ್ನು ನಿರ್ಮಿಸುವ ಅಗತ್ಯವಿದೆ. ಇಲೆಕ್ಟ್ರಿಕ್​ ವಾಹನಗಳ

ಕ್ಷೇ

ತ್ರವು ಕೇವಲ ವಾಹನಗಳ ತಯಾರಿಕೆಗೆ ಸೀಮಿತವಾಗಿರದೆ, ಬ್ಯಾಟರಿ, ಇಲೆಕ್ಟ್ರಿಕ್​ ಮೋಟಾರ್​, ಪವರ್​ ಇಲೆಕ್ಟ್ರಾನಿಕ್ಸ್​, ಚಾಜಿಂರ್ಗ್​ ಮೂಲಸೌಕರ್ಯ, ಬಿಡಿಭಾಗಗಳ ಉತ್ಪಾದನೆ ಹಾಗೂ ಸಂಬಂಧಿತ ಸೇವಾ

ಕ್ಷೇ

ತ್ರಗಳಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿದೆ ಎಂದರು.

ಕೆಸಿಸಿಐ ಗೌರವ ಕಾರ್ಯದರ್ಶಿ ಉದಯ ರೇವಣಕರ ಮಾತನಾಡಿ, ಕೈಗಾರಿಕೆಗಳು, ಎಂಎಸ್​ಎಂಇಗಳು, ಸ್ಟಾರ್ಟ್​ಅಪ್​ಗಳು ಮತ್ತು ತಂತ್ರಜ್ಞಾನ ಸಂಸ್ಥೆಗಳ ನಡುವೆ ಹೊಸ ಸಹಭಾಗಿತ್ವ, ತಂತ್ರಜ್ಞಾನ ವರ್ಗಾವಣೆ, ಕೌಶಲಾಭಿವೃದ್ಧಿ ಹಾಗೂ ಪೂರೈಕೆ ಸರಪಳಿ ಸಂಪರ್ಕಗಳಿಗೆ ಕಾರ್ಯಾಗಾರವು ವೇದಿಕೆಯಾಗಿದೆ. ಇವಿ ಕೈಗಾರಿಕಾ ಮೌಲ್ಯ ಸರಪಳಿ ಮತ್ತು ಉತ್ತಮ ರೈಲ್ವೆ ಲಾಜಿಸ್ಟಿಕ್ಸ್​ ಸಂಪರ್ಕ ಎರಡೂ ಪರಸ್ಪರ ಪೂರಕವಾಗಿದ್ದು, ಇವುಗಳ ಸಮನ್ವಯದಿಂದ ಹುಬ್ಬಳ್ಳಿ- ಧಾರವಾಡ- ಬೆಳಗಾವಿ ಪ್ರದೇಶವನ್ನು ದೇಶದ ಪ್ರಮುಖ ಕೈಗಾರಿಕಾ ಹಾಗೂ ಲಾಜಿಸ್ಟಿಕ್ಸ್​ ಹಬ್​ ಆಗಿ ಅಭಿವದ್ಧಿಪಡಿಸಬಹುದು ಎಂದರು.

ಡಬ್ಲೂಆರ್​ಐ ಇಂಡಿಯಾ, ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಹಾಗೂ ಕರ್ನಾಟಕ ಡಿಜಿಟಲ್​ ಎಕಾನಮಿ ಮಿಶನ್​ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ನೂರಾರು ಪ್ರತಿನಿಧಿಗಳು ಭಾಗವಹಿಸಿದ್ದರು.