HD development ಕೆಎಲ್​ಇ ಸಂಸ್ಥೆಯ ಮಾಜಿ ನಿರ್ದೇಶಕ ಶಂಕರಣ್ಣ ಮುನವಳ್ಳಿ. 
ಧಾರವಾಡ

HD development ಅವಳಿನಗರ ಅಭಿವೃದ್ಧಿಗೆ ಪಕ್ಷ ಭೇದ ಮರೆತು ಶ್ರಮಿಸಲಿ

ಪ್ರಮುಖ ಮುಖ್ಯಾಂಶಗಳು

  • ದೀರ್ಘಾವಧಿಯ ಮಾಸ್ಟರ್​ ಪ್ಲಾನ್​ ರೂಪಿಸಿ
  • ಕೆಸಿಸಿಐ ಮಾಜಿ ಅಧ್ಯಕ್ಷ ಶಂಕರಣ್ಣ ಮುನವಳ್ಳಿ ಸಲಹೆ

ಹುಬ್ಬಳ್ಳಿ:

HD development

ಹುಬ್ಬಳ್ಳಿಯನ್ನು ರಾಜ್ಯದ ಎರಡನೇ ರಾಜಧಾನಿ ಎಂದು ಕೇವಲ ಭಾಷಣಗಳಲ್ಲಿ ಉಲ್ಲೇಖಿಸುವುದರಿಂದ ಅಭಿವೃದ್ಧಿ ಸಾಧ್ಯವಿಲ್ಲ. ಅದಕ್ಕೆ ತಕ್ಕಂತೆ ಆಧುನಿಕ ನಗರ ಯೋಜನೆ

ಮಾಡಬೇಕೆಂದು ಕೆಎಲ್​ಇ ಸಂಸ್ಥೆಯ ಮಾಜಿ ನಿರ್ದೇಶಕ, ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಮಾಜಿ ಅಧ್ಯಕ್ಷ ಶಂಕರಣ್ಣ ಮುನವಳ್ಳಿ ಹೇಳಿದ್ದಾರೆ.

ಸುಗಮ ಸಾರಿಗೆ ವ್ಯವಸ್ಥೆ, ಪಾರ್ಕಿಂಗ್

​ ಸೌಕರ್ಯ, ಉತ್ತಮ ರಸ್ತೆಗಳು, ಸುಂದರ ಪಾದಚಾರಿ ಮಾರ್ಗಗಳು, ಸಾರ್ವಜನಿಕ ಶೌಚಾಲಯಗಳು, ಸ್ವಚ್ಛತೆ ಹಾಗೂ ಸುಸಜ್ಜಿತ ವಾಣಿಜ್ಯ ಪ್ರದೇಶಗಳನ್ನು ನಿರ್ಮಾಣ ಮಾಡಬೇಕು.

ಹುಬ್ಬಳ್ಳಿ- ಧಾರವಾಡವು ಉತ್ತರ ಕರ್ನಾಟಕದ ಆರ್ಥಿಕ ಚಟುವಟಿಕೆಯ ಪ್ರಮುಖ ಕೇಂದ್ರವಾಗಿದ್ದು, ಈ ಭಾಗದ ಅಭಿವೃದ್ಧಿ ಇಡೀ ಉತ್ತರ ಕರ್ನಾಟಕದ ಪ್ರಗತಿಗೆ ವೇಗ ನೀಡಲಿದೆ. ಆದ್ದರಿಂದ ನಗರದ ಅಭಿವೃದ್ಧಿಯನ್ನು ಕೇವಲ ಮಹಾನಗರ ಪಾಲಿಕೆಗೆ ವಹಿಸದೇ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಸಮನ್ವಯದೊಂದಿಗೆ ದೀರ್ಘಾವಧಿಯ ಮಾಸ್ಟರ್​ ಪ್ಲಾನ್​ ರೂಪಿಸಿ ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
"ಬಿಯಾಂಡ್​ ಬೆಂಗಳೂರು' ಪರಿಕಲ್ಪನೆಯಡಿ ಬೆಂಗಳೂರು ಹೊರಗಿನ ನಗರಗಳ ಕೈಗಾರಿಕೆ, ವಾಣಿಜ್ಯ, ಸ್ಟಾರ್ಟಪ್​ ಹಾಗೂ ಉದ್ಯೋಗಾವಕಾಶಗಳನ್ನು ಅಭಿವೃದ್ಧಿಪಡಿಸುವ ಉದ್ದೇಶ ಹೊಂದಲಾಗಿದೆ. ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿ- ಧಾರವಾಡಕ್ಕೆ ವಿಶೇಷ ಆದ್ಯತೆ ನೀಡಬೇಕು. ಕೈಗಾರಿಕೆ ಮತ್ತು ವ್ಯಾಪಾರ ಬೆಳೆಯಬೇಕಾದರೆ ಮೊದಲು ನಗರದ ಮೂಲಸೌಕರ್ಯ ಬಲಪಡಿಸಬೇಕು ಎಂದು ಅವರು ತಿಳಿಸಿದ್ದಾರೆ.
ಹುಬ್ಬಳ್ಳಿ- ಧಾರವಾಡದ ಅಭಿವದ್ಧಿಗೆ ಪಕ್ಷ ಭೇದ ಮರೆತು ಎಲ್ಲ ಜನಪ್ರತಿನಿಧಿಗಳು ಒಂದೇ ವೇದಿಕೆಯಲ್ಲಿ ನಿಂತು ಕೆಲಸ ಮಾಡಬೇಕಾಗಿದೆ. ನಗರಕ್ಕೆ ಅಗತ್ಯವಿರುವ ಯೋಜನೆಗಳನ್ನು ತರಲು, ಈಗಾಗಲೇ ಮಂಜೂರಾಗಿರುವ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಮತ್ತು ಭವಿಷ್ಯದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಹೊಸ ಮೂಲಸೌಕರ್ಯ ನಿಮಿರ್ಸಲು ಎಲ್ಲರೂ ಕಂಕಣಬದ್ಧರಾಗಬೇಕು ಎಂದು ಶಂಕರಣ್ಣ ಹೇಳಿದ್ದಾರೆ.
ನಗರದ ವ್ಯಾಪಾರಸ್ಥರು, ಉದ್ದಿಮೆದಾರರು, ಗ್ರಾಹಕರು, ಪಾದಚಾರಿಗಳು ಹಾಗೂ ಸಾರ್ವಜನಿಕರ ಸಮಸ್ಯೆಗಳನ್ನು ಸಮಗ್ರವಾಗಿ ಆಲಿಸಿ ವ್ಯಾಪಾರ ಸ್ನೇಹಿ ಹುಬ್ಬಳ್ಳಿ, ವಾಸಯೋಗ್ಯ ಹುಬ್ಬಳ್ಳಿ ಎಂಬ ಗುರಿಯೊಂದಿಗೆ ಮಹಾನಗರ ಪಾಲಿಕೆ, ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಕಾರ್ಯನಿರ್ವಹಿಸಬೇಕು. ಹುಬ್ಬಳ್ಳಿಯ ಆರ್ಥಿಕ ಸಾಮರ್ಥ್ಯಕ್ಕೆ ತಕ್ಕ ಮೂಲಸೌಕರ್ಯ ಕಲ್ಪಿಸಿದಾಗ ಮಾತ್ರ ನಗರವು ನಿಜವಾದ ಅರ್ಥದಲ್ಲಿ ಉತ್ತರ ಕರ್ನಾಟಕದ ವಾಣಿಜ್ಯ ರಾಜಧಾನಿಯಾಗಿ ಬೆಳೆಯಲು ಸಾಧ್ಯ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.