ಜೆಎಸ್ ಎಸ್ ಬಿಎ., ಬಿ.ಕಾಂ. ಮತ್ತು ಬಿ.ಎಸ್ಸಿ ಪ್ರಥಮ ವರ್ಷದ ವಿದ್ಯಾಥಿರ್ಗಳ ಸ್ವಾಗತ ಕಾರ್ಯಕ್ರಮ ಉದ್ಘಾಟನೆ
ಧಾರವಾಡ: ವಿದ್ಯಾಥಿರ್ಗಳು ಜೀವನದಲ್ಲಿ ಸ್ಪಷ್ಟ ಗುರಿ ಹೊಂದಬೇಕು. ಮಾನವೀಯ ಮೌಲ್ಯ, ಸಂಸ್ಕಾರದೊಂದಿಗೆ ಉತ್ತಮ ವ್ಯಕ್ತಿತ್ವ ರೂಪಿಸಿಕೊಂಡು ಯಶಸ್ವಿಗಳಾಗಬೇಕು ಎಂದು ಜೆಎಸ್ಎಸ್ ಕಾರ್ಯದಶಿರ್ ಡಾ. ಅಜಿತ್ ಪ್ರಸಾದ ಹೇಳಿದರು.
ಜೆಎಸ್ಎಸ್ ಬನಶಂಕರಿ ಕಲಾ, ವಾಣಿಜ್ಯ ಮತ್ತು ಶಾಂತಿಕುಮಾರ ಗುಬ್ಬಿ ವಿಜ್ಞಾನ ಕಾಲೇಜಿನಲ್ಲಿ ಈಚೆಗೆ ಆಯೋಜಿಸಿದ್ದ ಪ್ರಸಕ್ತ ಸಾಲಿನ ಬಿ.ಎ., ಬಿ.ಕಾಂ. ಮತ್ತು ಬಿ.ಎಸ್ಸಿ ಪ್ರಥಮ ವರ್ಷದ ವಿದ್ಯಾಥಿರ್ಗಳ ಸ್ವಾಗತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಿದ್ಯಾಥಿರ್ಗಳು ಪ್ರಾಮಾಣಿಕತೆ, ನಿಷ್ಠೆ, ಸತತ ಪ್ರಯತ್ನ, ಸಕಾರಾತ್ಮಕ ಆಲೋಚನೆಗಳು ಹೊಂದಬೇಕು ಎಂದರು.
ಜೆಎಸ್ಎಸ್ ಆಡಳಿತಾಧಿಕಾರಿ ಅರಿಹಂತ ಪ್ರಸಾದ, ಪ್ರಥಮ ವರ್ಷಕ್ಕೆ ಪ್ರವೇಶ ಪಡೆದ ವಿದ್ಯಾಥಿರ್ಗಳಿಗೆ ಶುಭ ಕೋರಿದರು. ಪ್ರಾಚಾರ್ಯ ಡಾ. ವೆಂಕಟೇಶ ಮುತಾಲಿಕ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪಿಯುಸಿ ಹೆಚ್ಚು ಅಂಕ ಪಡೆದ ವಿದ್ಯಾಥಿರ್ಗಳನ್ನು ಸನ್ಮಾನಿಸಲಾಯಿತು. ಜೆಎಸ್ಎಸ್ ಮಂಜುನಾಥೇಶ್ವರ ಎಂ.ಸಿ.ಎ. ಇನ್ಸ್ಟಿಟ್ಯೂಟ್ ನಿರ್ದೇಶಕ ಡಾ. ಸೂರಜ ಜೈನ್, ಜೆಎಸ್ಎಸ್ ಐಟಿಐ ಕಾಲೇಜು ಪ್ರಾಚಾರ್ಯ ಮಹಾವೀರ ಉಪಾಧ್ಯೆ, ಜೆಎಸ್ಎಸ್ ಕಾಲೇಜಿನ ಉಪಪ್ರಾಚಾರ್ಯರಾದ ಆವಂತಿಕಾ ರೊಟ್ಟಿ, ಡಾ. ಎನ್.ಡಿ. ಕುಲಕಣಿರ್, ಡಾ. ಜಿನ್ನಪ್ಪ ಕುಂದಗೋಳ ವೇದಿಕೆಯಲ್ಲಿದ್ದರು.
ರೂಬಿನಾ ನದಾ್ ಪ್ರಾಥಿರ್ಸಿದರು. ಪ್ರವಿಣ ಕೊರ್ಲಹಳ್ಳಿ ನಿರೂಪಿಸಿದರು. ಐಕ್ಯೂಎಸಿ ಸಂಯೋಜಕ ಡಾ. ಶೌಕತ ಅಲಿ ಮೇಗಲಮನಿ ವಂದಿಸಿದರು. ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಇದ್ದರು.