hanuman ಹುಬ್ಬಳ್ಳಿಯಲ್ಲಿ ಭಾನುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಹೆಬ್ಬಳ್ಳಿ ಶ್ರೀಕ್ಷೇತ್ರದ ದತ್ತಾವಧೂತ ಗುರುಗಳು. 
ಧಾರವಾಡ

hanuman ಭಗವಂತ ಒಳಗಿದ್ದರೆ ಮಾತ್ರ ಮನುಷ್ಯ ಪರಿಪೂರ್ಣ

ಪ್ರಮುಖ ಮುಖ್ಯಾಂಶಗಳು

  • ಮಾರುತಿ ಮಂದಿರ ಅರ್ಚಕರ ಸಮಾವೇಶದಲ್ಲಿ ಹೆಬ್ಬಳ್ಳಿ ಶ್ರೀ ದತ್ತಾವಧೂತ ಗುರುಗಳು
ಹುಬ್ಬಳ್ಳಿ: hanuman ಮನುಷ್ಯನ ದೇಹವನ್ನು ಭಗವಂತನು ಹೇಗೆ ರಚನೆ ಮಾಡಿದ್ದಾನೆಂದರೆ, ಆತ ಒಳಗೆ ಇದ್ದರೆ ದೇಹಕ್ಕೆ ಪೂರ್ಣತೆ ಬರುತ್ತದೆ. ಇಲ್ಲದಿದ್ದರೆ ಇಲ್ಲ, ಆತ ಒಳಗಿದ್ದರೆ ಮಾತ್ರ ದೇಹಕ್ಕೆ ಯಾವುದೇ ಕೊರತೆ ಇದ್ದರೂ ನೀಗಿ ಪೂರ್ಣತೆ ತಾನಾಗಿಯೇ ಬರುತ್ತದೆ ಎಂದು ಹೆಬ್ಬಳ್ಳಿ ಶ್ರೀಕ್ಷೇತ್ರದ ಶ್ರೀ ದತ್ತಾವಧೂತ ಗುರುಗಳು ಹೇಳಿದರು.
ಇಲ್ಲಿಯ ಗೋಕುಲ ರಸ್ತೆ ನಾನಕಿ ಕನ್ವೆನ್ಶನ್​ ಹಾಲ್​ನಲ್ಲಿ ಭಾನುವಾರ ಶ್ರೀ ಮಾರುತಿ ಅರ್ಚಕ ಸೇವಾ ಸಮಿತಿ ದತ್ತಾವಧೂತ ಸೇವಾ ಸಂಘ, ನಾಮಸಾಧಕ ಸಮಿತಿ ಹಾಗೂ ಆಯೀಸಾಹೇಬ ಮಹಿಳಾ ಮಂಡಳ ಇವುಗಳ ಸಂಯುಕ್ತಾಶ್ರಯದಲ್ಲಿ ಇದೇ ಮೊದಲ ಬಾರಿ ಏರ್ಪಡಿಸಿದ್ದ ಮಹಾನಗರದ ಮಾರುತಿ ಮಂದಿರಗಳ ಅರ್ಚಕರ ಬೃಹತ್​ ಸಮಾವೇಶ ಹಾಗೂ ಸತ್ಕಾರ ಸಮಾರಂಭ ಉದ್ದೇಶಿಸಿ ಅವರು ಮಾತನಾಡಿದರು.
ಮನುಷ್ಯ ಜೀವನ ಹೊರಗಿನ ಪ್ರಪಂಚದ ಆಡಂಬರದಿಂದ ಎಷ್ಟೇ ತುಂಬಿಕೊಂಡರೂ ಪೂರ್ಣತೆಯ ಅನುಭವ ಬರುವುದಿಲ್ಲ. ನಮ್ಮೊಳಗೆ ಪೂರ್ಣತೆ ಬರಬೇಕಾದರೆ ಅವನ ಸ್ಮರಣೆಯೊಂದೇ ಮಾರ್ಗವಾಗಿದೆ. ಜಗತ್ತಿನಲ್ಲಿ ಆತನೊಬ್ಬನೇ ಪರಿಪೂರ್ಣ ವ್ಯಕ್ತಿ ಎಂದರು.
ಮನೆಯಲ್ಲಿ ಒಬ್ಬರು ಪೂಜೆ ಮಾಡಿದಾಗ ಮನೆಯ ಎಲ್ಲ ಸದಸ್ಯರಿಗೂ ಅದರ ಫಲ ಹೇಗೆ ಸಿಗುತ್ತದೆಯೋ ಹಾಗೆ ಮಾರುತಿ ಮಂದಿರದಲ್ಲಿ ಪೂಜೆ ಮಾಡುವ ಅರ್ಚಕರಿಂದಾಗಿ ಇಡೀ ಪ್ರದೇಶಕ್ಕೆ ಹಿತ ಲಭಿಸುತ್ತದೆ. ಹಾಗಾಗಿ ಅವರಿಗೆ ಗೌರವ ಸಲ್ಲಿಸಬೇಕು ಎಂಬ ಕಾರಣಕ್ಕೆ ನಿತ್ಯ ಹನುಮಾನ ಮಂದಿರದಲ್ಲಿ ಉಪಾಸನೆ ಮಾಡುವ ಅರ್ಚಕರನ್ನು ಒಗ್ಗೂಡಿಸಲಾಗುತ್ತಿದೆ ಎಂದು ಶ್ರೀಗಳು ಹೇಳಿದರು.
ಸಾಂಕೇತಿಕವಾಗಿ ಪುರಸ್ಕಾರ ನೀಡಲಾಗುತ್ತಿದೆ. ಕುಟುಂಬದವರಿಗೆ ವಸ್ತ್ರ, ವಸ್ತುಗಳ ದಾನ ನೀಡುವ ಉದ್ದೇಶ ಇದೆ. ಹಂತಹಂತವಾಗಿ ಇದನ್ನು ಬೇರೆಬೇರೆ ಜಿಲ್ಲೆಗಳಲ್ಲಿ ಹಮ್ಮಿಕೊಳ್ಳಲಾಗುವುದು ಎಂದರು.
ಶ್ರೀಕ್ಷೇತ್ರ ಹೆಬ್ಬಳ್ಳಿಯಿಂದ ಶ್ರೀ ಮಹಾರಾಜರ ಪಾದುಕೆಗಳ ಆಗಮನವಾದ ನಂತರ ಸ್ವಾಗತಿಸಲಾಯಿತು. ಅಭಿಷೇಕ, ಹನುಮಾನ ಚಾಲೀಸಾ ಪಠಣ ಮಾಡಲಾಯಿತು. ಮಧ್ಯಾಹ್ನ ಮಹಾನೈವೇದ್ಯ, ಮಹಾಮಂಗಳಾರತಿ ಹಾಗೂ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.