ಹುಬ್ಬಳ್ಳಿಯ ಸದ್ಗುರು ಶ್ರೀ ಸಿದ್ಧಾರೂಢಸ್ವಾಮಿ guruvandaneಪ್ರೌಢಶಾಲೆಯಲ್ಲಿ ಭಾನುವಾರ ಏರ್ಪಡಿಸಿದ್ದ ಹಳೆಯ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮವನ್ನು ಎಸ್.ಡಿ. ಮಧೂರಕರ ಉದ್ಘಾಟಿಸಿದರು.
ಹುಬ್ಬಳ್ಳಿ: ಇಲ್ಲಿಯ ಹಳೇ ಹುಬ್ಬಳ್ಳಿಯ ಸದ್ಗುರು ಶ್ರೀ ಸಿದ್ಧಾರೂಢಸ್ವಾಮಿ ಪ್ರೌಢಶಾಲೆಯಲ್ಲಿ 2002-03ನೇ ಸಾಲಿನ ಹಳೆಯ ವಿದ್ಯಾರ್ಥಿಗಳಿಂದ ಗುರುವಂದನಾ guruvandane ಕಾರ್ಯಕ್ರಮವನ್ನು ಭಾನುವಾರ ಏರ್ಪಡಿಸಲಾಗಿತ್ತು.
ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಎಸ್.ಡಿ. ಮಧೂರಕರ ಉದ್ಘಾಟಿಸಿ ಮಾತನಾಡಿ, ಸಿದ್ಧಾರೂಢಸ್ವಾಮಿ ಪ್ರೌಢಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿ ಶಾಲೆಗೆ ಕೀರ್ತಿ ತಂದಿದ್ದಾರೆ. ಈಗಲೂ ಗುರುಗಳ ಮೇಲೆ ಅಪಾರ ಗೌರವ ಹಾಗೂ ಭಕ್ತಿಯನ್ನು ಹೊಂದಿರುವುದು ಸಂತಸ ತಂದಿದೆ ಎಂದರು.
ಪಾಲಿಕೆ ಮಾಜಿ ಸದಸ್ಯ ಹಾಗೂ ಆಡಳಿತ ಮಂಡಳಿ ಕೋಶಾಧ್ಯಕ್ಷ ದಶರಥ ವಾಲಿ ಮಾತನಾಡಿ, ಕನ್ನಡ ಮಾಧ್ಯಮದ ಶಾಲೆಗಳು ಉಳಿಯಬೇಕು ಹಾಗೂ ಬೆಳೆಯಬೇಕೆಂದರೆ ಹಳೆಯ ವಿದ್ಯಾರ್ಥಿಗಳು ಹಾಗೂ ಸಮುದಾಯದ ಸಹಭಾಗಿತ್ವ ಅತ್ಯವಶ್ಯಕ ಎಂದರು.
ನಿವೃತ್ತ ಶಿಕ್ಷಕ ಎಸ್.ಬಿ. ನಾಯಕ ಮಾತನಾಡಿ, ಅಕ್ಷರ ಕಲಿಸಿದ ಗುರುವಿನ ಮಹಿಮೆ ವರ್ಣನಾತೀತ ಎಂದರು.
ನಿವೃತ್ತ ಶಿಕ್ಷಕರು ಹಾಗೂ ಶಾಲಾ ಆಡಳಿತ ಮಂಡಳಿ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು. ಹಳೆಯ ವಿದ್ಯಾರ್ಥಿಗಳು ಸೂಕ್ಷ್ಮದರ್ಶಕ ಯಂತ್ರವನ್ನು ಶಾಲೆಗೆ ದೇಣಿಗೆ ನೀಡಿದರು.
ಶಾಲಾ ಆಡಳಿತ ಮಂಡಳಿ ಪದಾಧಿಕಾರಿಗಳಾದ ಮೋಹನ ಗೌಡರ, ನಂದಕುಮಾರ ಘೋಡಕೆ, ರತ್ನಾ ಬಡಿಗೇರ, ಜಿ.ಆರ್. ರಾಜೇಂದ್ರ, ಎನ್.ಎ. ಪಾಟೀಲ, ನಿವೃತ್ತ ಶಿಕ್ಷಕರಾದ ಎಸ್.ಬಿ. ನಾಯಕ, ಎಚ್.ಎಂ. ನೆರಕಿ, ಎಸ್.ವಿ. ಚಂದರಗಿ, ಕೆ.ಎಲ್. ಅಂಬಲಿ, ವಿ.ಎಸ್. ಪೂಜಾರ, ಎಲ್.ಎಂ. ಅಯ್ಯನಗೌಡರ, ಪಿ.ಜಿ. ಹಿರೇಮಠ, ಆರ್.ಎಚ್. ತಳವಾರ, ಎಲ್.ಎಸ್. ಹೊಸಮನಿ, ಎಸ್.ಐ. ಕೊಳಕೂರ, ಎನ್.ಎಂ. ನೀಲಗಾರ, ಮುಖ್ಯೋಪಾಧ್ಯಾಯರಾದ ಆರ್.ಎನ್. ದೊಡ್ಡಮನಿ, ಎಂ.ಬಿ. ಪಾಟೀಲ, ಆರ್. ಶ್ರೀನಿವಾಸ ವಾಲಿ, ಸಿ. ಸವರ್ಂದ, ಪ್ರಭು ತಳವಾರ, ಹಳೆಯ ವಿದ್ಯಾರ್ಥಿಗಳಾದ ಮಂಜುನಾಥ ಹಿರೇಮಠ, ಪರಶುರಾಮ ಬಸವಾ, ರಜನಿ ಗಲಗಲಿ, ಪ್ರಿಯಾ ಕಮ್ಮಾರ ಇತರರಿದ್ದರು.