ಹುಬ್ಬಳ್ಳಿಯಲ್ಲಿ guru vandana ಭಾನುವಾರ ಏರ್ಪಡಿಸಿದ್ದ ಗುರುವಂದನೆ ಹಾಗೂ ನಶಾಮುಕ್ತ ಭಾರತ ಮಹಾ ಅಭಿಯಾನ ಕಾರ್ಯಕ್ರಮವನ್ನು ಶ್ರೀ ಸೋಮೇಶ್ವರಾನಂದ ಸ್ವಾಮೀಜಿ ಉದ್ಘಾಟಿಸಿದರು.  
ಧಾರವಾಡ

guru vandana ಮಾದಕ ವ್ಯಸನದ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ

ಹುಬ್ಬಳ್ಳಿ: ಇಲ್ಲಿಯ ಜೆ.ಸಿ. ನಗರದ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ಭಾನುವಾರ ಗುರುವಂದನೆ

guru vandana

ಹಾಗೂ ನಶಾಮುಕ್ತ ಭಾರತ ಮಹಾ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.

ಮೇಯರ್ ದುರ್ಗಮ್ಮ ಬಿಜವಾಡ ಉದ್ಘಾಟಿಸಿ ಮಾತನಾಡಿ, ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯವು ಸುಮಾರು ವರ್ಷಗಳಿಂದ ವಿಶ್ವದಲ್ಲಿ ಶಾಂತಿ, ಸದಾಚಾರ, ಸದ್ಭಾವನೆಯನ್ನು ಮೂಡಿಸುತ್ತಿದೆ. ಇದೇ ನಿಟ್ಟಿನಲ್ಲಿ ರಾಷ್ಟ್ರಾದ್ಯಂತ ಮಾದಕ ವ್ಯಸನಗಳ ಬಗ್ಗೆ ಜನಜಾಗೃತಿ ಮೂಡಿಸಲು ನಶಾಮುಕ್ತ ಭಾರತ ಮಹಾ ಅಭಿಯಾನ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.
ಹುಬ್ಬಳ್ಳಿ ಇಸ್ಕಾನ್‌ನ ಶ್ರೀ ಗರುಡಧ್ವಜ ಪ್ರಭುಗಳು ಮಾತನಾಡಿ, ಗುರುವಿನ ಮಹತ್ವ ತಿಳಿಸಲು ಗುರು ಪೌರ್ಣಿಮೆ ಆಚರಿಸಲಾಗುತ್ತದೆ. ಇಂದಿನ ಮಕ್ಕಳಿಗೆ ಶಿಕ್ಷಣದ ಜತೆಗೆ ಶ್ರೇಷ್ಠ ಸಂಸ್ಕಾರ ರೂಪಿಸುವುದು ಮುಖ್ಯವಾಗಿದೆ ಎಂದರು.
ಸೈದಾಪೂರ ಸಿದ್ಧಾರೂಢ ಮಠದ ಶ್ರೀ ಸೋಮೇಶ್ವರಾನಂದ ಸ್ವಾಮೀಜಿ ಮಾತನಾಡಿದರು.
ಹುಬ್ಬಳ್ಳಿ ವಲಯ ಸಂಚಾಲಕಿ ರಾಜಯೋಗಿನಿ ಬ್ರಹ್ಮಕುಮಾರಿ ನಿರ್ಮಲಾಜಿ ಅಧ್ಯಕ್ಷತೆ ವಹಿಸಿದ್ದರು.
ವ್ಯಸನಮುಕ್ತ ಪ್ರತಿಜ್ಞೆ ವಿಧಿಯನ್ನು ನೆರೆದವರಿಗೆ ಬೋಧಿಸಲಾಯಿತು.