ಹುಬ್ಬಳ್ಳಿಯಲ್ಲಿ ಮಂಗಳವಾರ ಏರ್ಪಡಿಸಿದ್ದ guru puttaraja ಗುರುವಂದನಾ ಕಾರ್ಯಕ್ರಮವನ್ನು ಪಂ. ಬಾಲಚಂದ್ರ ನಾಕೋಡ ಹಾಗೂ ವಿದುಷಿ ಸಹನಾ ಭಟ್ ಉದ್ಘಾಟಿಸಿದರು. 
ಧಾರವಾಡ

guru puttaraja ಗುರುವಂದನಾ ಕಾರ್ಯಕ್ರಮ

ಮರಿದೇವ ಹೂಗಾರ

ಹುಬ್ಬಳ್ಳಿ: ಶ್ರೀ ಗುರು ಪುಟ್ಟರಾಜ guru puttaraja ಸಂಗೀತ ಮತ್ತು ಸಾಂಸ್ಕೃತಿಕ ವಿದ್ಯಾಲಯ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದಲ್ಲಿ ಮಂಗಳವಾರ ಗುರುವಂದನಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಹಿಂದೂಸ್ತಾನಿ ಗಾಯಕ ಪಂ. ಬಾಲಚಂದ್ರ ನಾಕೋಡ ಹಾಗೂ ಭರತನಾಟ್ಯ ಕಲಾವಿದೆ ವಿದುಷಿ ಸಹನಾ ಭಟ್ ಉದ್ಘಾಟಿಸಿದರು.
ನಂತರ ಪಂ. ಬಾಲಚಂದ್ರ ನಾಕೋಡ, ವಿದುಷಿ ಸಹನಾ ಭಟ್ ಅವರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಸೌಮ್ಯ ಮುಳುಗುಂದ ಹಾಗೂ ಉದಯೋನ್ಮುಖ ಕಲಾವಿದರು ತಮ್ಮ ಕಲೆ ಪ್ರದರ್ಶಿಸಿ ಪ್ರೇಕ್ಷಕರ ಮನಗೆದ್ದರು. ಸಂಸ್ಥೆಯ ಅಧ್ಯಕ್ಷ ಅಮೃತ ಉಳ್ಳಿಕಾಶಿ, ಇತರರಿದ್ದರು.