guru purnime ಹುಬ್ಬಳ್ಳಿಯ ಶ್ರೀ ಆರೂಢ ಸ್ವಾಮಿ ಮಠದಲ್ಲಿ ಗುರುಪೂರ್ಣಿಮೆ ಅಂಗವಾಗಿ ಜ್ಞಾನಜ್ಯೋತಿ ಕಲಾ ಮಂಡಳ ಹಮ್ಮಿಕೊಂಡ ಗುರುವಂದನಾ ಕಾರ್ಯಕ್ರಮದಲ್ಲಿ ಗಂಗಾಧರ ದೊಡ್ಡವಾಡ ಇತರರನ್ನು ಸನ್ಮಾನಿಸಲಾಯಿತು. 
ಧಾರವಾಡ

guru purnime ಗುರು ಶಿಷ್ಯ ಪರಂಪರೆಯ ಮೂಲತವರು ಭಾರತ

ಪ್ರಮುಖ ಮುಖ್ಯಾಂಶಗಳು

  • ಜ್ಞಾನಜ್ಯೋತಿ ಕಲಾ ಮಂಡಳದಿಂದ ಗುರುವಂದನೆ
  • ಜ್ಞಾನಭಾರ್ಗವ ಗಂಗಾಧರ ದೊಡ್ಡವಾಡ ಹೇಳಿಕೆ
ಹುಬ್ಬಳ್ಳಿ: guru purnime ಗುರುವಿಗೆ ಭಾರತದಲ್ಲಿ ಇರುವಷ್ಟು ಗೌರವ ಬೇರೆ ಯಾವ ನೆಲದಲ್ಲಿಯೂ ಕಾಣಸಿಗದು, ಯುಗ ಯುಗಗಳಲ್ಲಿಯೂ ಗುರುವಿನ ಮೌಲ್ಯ ಹೆಚ್ಚಾಗುತ್ತಲೇ ಇದೆ, ಇದಕ್ಕೆ ಭಾರತೀಯರಲ್ಲಿನ ಗುರುಗಳ ತ್ಯಾಗ, ಸೇವೆ, ತಪಸ್ಸು, ನಿರಂಜನ ಭಾವವೇ ಕಾರಣವಾಗಿದೆ ಎಂದು ಜ್ಞಾನಭಾರ್ಗವ ಗಂಗಾಧರ ದೊಡ್ಡವಾಡ ಹೇಳಿದರು.
ಹಳೇಹುಬ್ಬಳ್ಳಿಯ ಶ್ರೀ ಆರೂಢ ಸ್ವಾಮಿ ಮಠದಲ್ಲಿ ಗುರುಪೂರ್ಣಿಮೆ ಅಂಗವಾಗಿ ಜ್ಞಾನಜ್ಯೋತಿ ಕಲಾ ಮಂಡಳ ಹಮ್ಮಿಕೊಂಡ ಗುರುವಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಗುರು ಶಿಷ್ಯ ಪರಂಪರೆಯು ಭಾರತದ ಸಂಸ್ಕೃತಿಯ ಒಂದು ಭಾಗವಾಗಿದೆ, ಈ ನೆಲದಲ್ಲಿ ಗುರುವಿಗೆ ಕಲ್ಪಿಸಿದ ಗೌರವ ವರ್ಣನಾತೀಥವಾಗಿದೆ, ಭಾರತೀಯರ ಬದುಕಿನ ಪ್ರತಿಯೊಂದು ವಿಧದಲ್ಲಿಯೂ ಕೆಲಸ ಕಾರ್ಯಗಳಲ್ಲಿಯೂ ಗುರುಗಳ ಪಾತ್ರ ಹಾಸು ಹೊಕ್ಕಾಗಿದೆ ಎಂದರು.
ಸಾನಿಧ್ಯವನ್ನು ಹಳೇಹುಬ್ಬಳ್ಳಿ ಹಿರೇಪೇಟ ಶ್ರೀ ಜಾಗ್ರತ ಕರಿಯಮ್ಮ ದೇವಸ್ಥಾನದ ಧರ್ಮಾಧಿಕಾರಿ ಲಲಿತಮ್ಮನವರು ಕಂಬಾರ ವಹಿಸಿದ್ದರು.
ಅಧ್ಯಕ್ಷತೆಯನ್ನು ಶ್ರೀ ಆರೂಢ ಸ್ವಾಮಿ ಮಠದ ಚೇರ್ಮನ್ನರಾದ ವಿಶ್ವನಾಥ ಹಿರೇಗೌಡರ ವಹಿಸಿದ್ದರು.
ಸಂಗೀತ ವಿದ್ವಾನ ಫಕೀರೇಶ ಬಡಿಗೇರ, ಹಾಡುಗಾರಿಕೆ ಗುರುಗಳಾದ ಕಿರಣ್ ಕೊಟಬಾಗಿ, ಯೋಗ ಶಿಕ್ಷಕ ತೇಜಸ್ವಿನಿ ಬೆಂಗಳೂರ ರವರಿಗೆ ಶಿಷ್ಯ ವೃಂದದ ಪರವಾಗಿ ಶೈಲಾ ಹಿರೇಗೌಡರ, ಲಲಿತಾ ಬಡಿಗೇರ, ಮಂಜುಳಾ, ಮಮತಾ, ಮುಂತಾದವರು ಪಾದಪೂಜೆ ಮಾಡಿ ಗುರುವಂದನೆ ಸಲ್ಲಿಸಿದರು.
ವರೂರ ಶಿಕ್ಷಣ ಇಲಾಖೆ ವಲಯದ 9 ಶಾಲೆಗಳ ಮೇಲುಸ್ತುವಾರಿ ಭಾರತಿ ಗುಜ್ಜಲ, ಸಂತೋಷ ಪೂಜಾರಿ, ಸುಮಾದೇವಿ ಹಿರೇಮಠ, ಅನುಸೂಯಾ ನವಲಗುಂದ, ಮಂಗಲಾ ತಿಪ್ಪಶೆಟ್ಟಿ, ಭಾಗ್ಯಶ್ರೀ ಗಾಳೆಮ್ಮನವರ, ಕಮಲಾ ಕುರಿಯವರ, ಪೂಜಾ ಹಿರೇಗೌಡರ, ವಿಜಯಲಕ್ಷ್ಮಿ ಟೊಂಗಳಿ, ಮುಂತಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮ ಸಂಯೋಜಕಿ ನಿವೃತ್ತ ಶಿಕ್ಷಕಿ ತೇಜಸ್ವಿನಿ ಬೆಂಗಳೂರ ಸ್ವಾಗತಿಸಿದರು.