ಧಾರವಾಡ: ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ 2025-26ನೇ ಸಾಲಿನಲ್ಲಿ ಎಫ್.ಎ.ಕ್ಯೂ. ಗುಣಮಟ್ಟದ ಕಡಲೆಕಾಳು ಪ್ರತಿ ಕ್ವಿಂಟಾಲ್‌ಗೆ 5,875ರೂ. ನಂತೆ ಜಿಲ್ಲೆಯ ರೈತರಿಂದ ಮಾತ್ರ ಖರೀದಿಸಲು ಸರ್ಕಾರದಿಂದ ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ. ಜಿಲ್ಲೆಯ ರೈತರು ಸದುಪಯೋಗ ಪಡೆಯುವಂತೆ ಜಿಲ್ಲಾ ಟಾಸ್ಕ್ಪೋರ್ಸ್ ಸಮಿತಿಯ ಅಧ್ಯಕ್ಷರೂ ಆಗಿರುವ ಪ್ರಭಾರ ಜಿಲ್ಲಾದಿಕಾರಿ ಭುವನೇಶ ಪಾಟೀಲ ತಿಳಿಸಿದ್ದಾರೆ.
ಪ್ರಕಟಣೆ ನೀಡಿರುವ ಅವರು, ರೈತರ ನೋಂದಣಿಯು 80 ದಿನಗಳವರೆಗೆ (ಜ. 29ರಿಂದ ಏ. 18) ಹಾಗೂ ಉತ್ಪನ್ನ ಖರೀದಿಸಲು 90 ದಿನಗಳವರೆಗೆ (ಜ.29ರಿಂದ ಏ. 28) ಅವಽ ನಿಗದಿಪಡಿಸಲಾಗಿದೆ.
ಧಾರವಾಡ ತಾಲೂಕಿನ ಟಿ.ಎ.ಪಿ.ಸಿ.ಎಂ.ಎಸ್., ಉಪ್ಪಿನಬೇಟಗೇರಿ ಪಿ.ಕೆ.ಪಿ.ಎಸ್., ಹುಬ್ಬಳ್ಳಿ ತಾಲೂಕಿನ ಹುಬ್ಬಳ್ಳಿ ಟಿ.ಎ.ಪಿ.ಸಿ.ಎಮ್.ಎಸ್., ಕೋಳಿವಾಡ ಪಿ.ಕೆ.ಪಿ.ಎಸ್. ಕೋಳಿವಾಡ, ಹೆಬಸೂರ ಪಿ.ಕೆ.ಪಿ.ಎಸ್, ನೂಲ್ವಿ ಪಿ.ಕೆ.ಪಿ.ಎಸ್., ಹಳೇ ಹುಬ್ಬಳ್ಳಿ ಪಿ.ಕೆ.ಪಿ.ಎಸ್., ನವಲಗುಂದ ತಾಲೂಕಿನ ಹೆಬ್ಬಾಳ ಪಿ.ಕೆ.ಪಿ.ಎಸ್., ತಿರ್ಲಾಪೂರ ಪಿ.ಕೆ.ಪಿ.ಎಸ್., ಆರೇಕುರಹಟ್ಟಿ ಪಿ.ಕೆ.ಪಿ.ಎಸ್., ಶಿರೂರ ಮೊರಬಶಿರೂರ ಎಫ್.ಪಿ.ಓ., ಮೊರಬ ಕೆ.ಎಸ್.ಎಫ್.ಪಿ.ಓ., ಮೊರಬ ಪಿ.ಕೆ.ಪಿ.ಎಸ್., ಹಾಳಕುಸುಗಲ್ ಪಿ.ಕೆ.ಪಿ.ಎಸ್., ನವಲಗುಂದ ಪಿ.ಕೆ.ಪಿ.ಎಸ್., ಬೆಳವಟಗಿ ಪಿ.ಕೆ.ಪಿ.ಎಸ್., ನವಲಗುಂದ ಟಿ.ಎ.ಪಿ.ಸಿ.ಎಂ.ಎಸ್. ಅಣ್ಣಿಗೇರಿ, ಅಣ್ಣಿಗೇರಿ ತಾಲೂಕಿನ ಅಣ್ಣಿಗೇರಿ ಪಿ.ಕೆ.ಪಿ.ಎಸ್., ಅಣ್ಣಿಗೇರಿ ತಾಲೂಕು ಫಾರ್ಮರ್ ಪ್ರೋಡ್ಯೂಸರ್ ಕಂಪನಿ ಲಿಮಿಟೆಡ್ ಅಣ್ಣಿಗೇರಿ, ಕುಂದಗೋಳ ತಾಲೂಕಿನ ಯರಗುಪ್ಪಿ ಪಿ.ಕೆ.ಪಿ.ಎಸ್., ಯಲಿವಾಳ ಪಿ.ಕೆ.ಪಿ.ಎಸ್., ಕುಂದಗೋಳ ಪಿ.ಕೆ.ಪಿ.ಎಸ್., ಯರೇಬೂದಿಹಾಳ ಪಿ.ಕೆ.ಪಿ.ಎಸ್., ಸಂಶಿ ಎಫ್.ಪಿ.ಓ. ಕುಂದಗೋಳ, ಕುಬಿಹಾಳ ಪಿ.ಕೆ.ಪಿ.ಎಸ್. ಖರೀದಿ ಕೇಂದ್ರಗಳಾಗಿವೆ. ರೈತರು ಆಧಾರ ಗುರುತಿನ ಚೀಟಿ, ಪಹಣಿ ಪತ್ರಿಕೆಯಲ್ಲಿರುವ ಹೆಸರಿನ ರೈತರ ಆಧಾರ ಸಂಖ್ಯೆ ಜೋಡಣೆಗೊಂಡ ಬ್ಯಾಂಕ್ ಖಾತೆ ಪಾಸ್ ಪುಸ್ತಕದ ನಕಲು ಪ್ರತಿ ತೆಗೆದುಕೊಂಡು ಹೋಗಬೇಕು ಎಂದು ತಿಳಿಸಿದ್ದಾರೆ.
ಕಡಲೆಕಾಳು ಚೆನ್ನಾಗಿ ಒಣಗಿರಬೇಕು, ತೇವಾಂಶವು ಶೇ. 12ಕ್ಕಿಂತ ಕಡಿಮೆ ಇರಬೇಕು. ಗುಣಮಟ್ಟದ ಗಾತ್ರ, ಬಣ್ಣ ಮತ್ತು ಆಕಾರ ಹೊಂದಿರಬೇಕು. ಗಟ್ಟಿಯಾಗಿರಬೇಕು ಮತ್ತು ಮಣ್ಣಿನಿಂದ ಬೇರ್ಪಡಿಸಲ್ಪಟ್ಟು ಸ್ವಚ್ಛವಾಗಿರಬೇಕು. ಕ್ರಿಮಿಕೀಟಗಳಿಂದ ಮುಕ್ತವಾಗಿರಬೇಕು. ರೈತರಿಗೆ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದವರು ನೀಡುವ ಗೋಣಿ ಚೀಲದಲ್ಲಿ 50 ಕೆ.ಜಿ. ಪ್ರಮಾಣದಲ್ಲಿ ತುಂಬಬೇಕು. ಕಡಲೆಕಾಳು ಪ್ರತಿ ಎಕರೆಗೆ 04 ಕ್ವಿಂಟಾಲ್ ಗರಿಷ್ಟ ಪ್ರಮಾಣ ಹಾಗೂ ಪ್ರತಿ ರೈತರಿಂದ ಗರಿಷ್ಟ 40 ಕ್ವಿಂಟಾಲ್ ಪ್ರಮಾಣದ ಎಫ್‌ಎಕ್ಯೂ ಗುಣಮಟ್ಟದ ಉತ್ಪನ್ನ ಖರೀದಿಸಲಾಗುವುದು ಎಂದು ತಿಳಿಸಿದ್ದಾರೆ.