green cbi ಹುಬ್ಬಳ್ಳಿಯ ನೃಪತುಂಗ ಬೆಟ್ಟದಲ್ಲಿ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ವತಿಯಿಂದ ಏರ್ಪಡಿಸಿದ್ದ "ಏಕ್ ಪೇಡ್ ಮಾ ಕೆ ನಾಮ್' ಅಭಿಯಾನದಲ್ಲಿ ಪಾಲ್ಗೊಂಡ ಅಧಿಕಾರಿಗಳು, ಸಿಬ್ಬಂದಿ.
ಹುಬ್ಬಳ್ಳಿ: green cbi ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ 145ನೇ ಸಂಸ್ಥಾಪಕರ ದಿನದ ಅಂಗವಾಗಿ ಇಲ್ಲಿಯ ಪ್ರಾದೇಶಿಕ ಕಚೇರಿ ವತಿಯಿಂದ ನೃಪತುಂಗ ಬೆಟ್ಟದಲ್ಲಿ "ಏಕ್ ಪೇಡ್ ಮಾ ಕೆ ನಾಮ್' ಸ್ಪೂತಿರ್ದಾಯಕ ಅಭಿಯಾನ ಏರ್ಪಡಿಸಲಾಯಿತು.
ಗ್ರೀನ್ ಇಂಡಿಯಾ ಫೌಂಡೇಷನ್ ಮತ್ತು ಯಂಗ್ ಇಂಡಿಯಾ ಫೌಂಡೇಷನ್ ಸಹಯೋಗದೊಂದಿಗೆ ನೆಡುತೋಪು ಅಭಿಯಾನ ನಡೆಸಲಾಯಿತು. ಬೆಟ್ಟದಲ್ಲಿ ಹಲವು ಗಿಡಗಳನ್ನು ನೆಡಲಾಯಿತು.
ಗೆ ಅರ್ಥಪೂರ್ಣ ಕೊಡುಗೆ ನೀಡಿದರು.
ಇದು ಪರಿಸರ ಸುಸ್ಥಿರತೆ ಮತ್ತು ಹಸಿರು ಮತ್ತು ಆರೋಗ್ಯಕರ ಭವಿಷ್ಯವನ್ನು ಸೃಷ್ಟಿಸುವ ಬ್ಯಾಂಕಿನ ಬದ್ಧತೆಯನ್ನು ತೋರಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದರು.
ಏಕ್ ಪೇಡ್ ಮಾ ಕೆ ನಾಮ್ ವಿಷಯವು ವಿಶೇಷ ಭಾವನಾತ್ಮಕ ಮಹತ್ವ ಹೊಂದಿದೆ. ನೆಟ್ಟ ಪ್ರತಿಯೊಂದು ಸಸಿಯನ್ನು ತಾಯಿಯ ಪ್ರೀತಿ, ಕಾಳಜಿ ಮತ್ತು ಪೋಷಣೆಯ ಮನೋಭಾವಕ್ಕೆ ಅರ್ಪಿಸಿದರು.
ಪರಿಸರ ಸಂರಕ್ಷಣೆಯ ಕಡೆಗೆ ಬ್ಯಾಂಕಿನ ಸಾಮೂಹಿಕ ಪ್ರಯತ್ನವಾಗಿದೆ. ಸಸಿ ನೆಡುವುದು ಕೇವಲ ಪರಿಸರ ಚಟುವಟಿಕೆಯಲ್ಲ, ಭವಿಷ್ಯದ ಪೀಳಿಗೆಯ ಯೋಗೇಮದಲ್ಲಿ ಹೂಡಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.