ಹುಬ್ಬಳ್ಳಿಯ ಶ್ರೀ ಹುಲಿಗೆಮ್ಮದೇವಿ ದೇವಸ್ಥಾನದಲ್ಲಿಯ ಕಟ್ಟಡ ನಿರ್ಮಾಣಕ್ಕೆ ಶಾಸಕ ಮಹೇಶ ಟೆಂಗಿನಕಾಯಿ ಅವರು ಶಾಸಕರ ಅನುದಾನದಡಿ 6,58,508 ರೂ. ಚೆಕ್ (grants) ಅನ್ನು ಬುಧವಾರ ವಿತರಿಸಿದರು.  
ಧಾರವಾಡ

(grants) ದೇವಸ್ಥಾನದ ಅಭಿವೃದ್ಧಿಗೆ ಅನುದಾನದ ಭರವಸೆ

ಹುಬ್ಬಳ್ಳಿ: ಇಲ್ಲಿಯ ಅರವಿಂದನಗರದ ಶ್ರೀ ಹುಲಿಗೆಮ್ಮದೇವಿ ದೇವಸ್ಥಾನದಲ್ಲಿಯ ಕಟ್ಟಡ ನಿರ್ಮಾಣಕ್ಕೆ ಶಾಸಕ ಮಹೇಶ ಟೆಂಗಿನಕಾಯಿ ಅವರು ಶಾಸಕರ ಅನುದಾನದಡಿ 6,58,508 ರೂ. ಚೆಕ್ (grants) ಅನ್ನು ಬುಧವಾರ ವಿತರಿಸಿದರು.
ನಂತರ ಮಾತನಾಡಿದ ಅವರು, ನಾನು ಈ ಹಿಂದೆ ದೇವಸ್ಥಾನಕ್ಕೆ ಬಂದಾಗ ಇನ್ನೂ ಜೀರ್ಣೋದ್ಧಾರವಾಗಿರಲಿಲ್ಲ. ಆಗ ಏನಾದರೂ ಸಹಾಯ ಮಾಡಬೇಕು ಅಂದುಕೊಂಡಿದ್ದೆ. ಈಗ ಕಟ್ಟಡ ನಿರ್ಮಾಣಕ್ಕೆ ಅನುದಾನ ನೀಡಿದ್ದು, ಹಂತ ಹಂತವಾಗಿ ಅಭಿವೃದ್ಧಿಗೆ ಅನುದಾನ ನೀಡುವ ಕುರಿತು ಭರವಸೆ ನೀಡಿದರು.
ಮಾತೋಶ್ರೀ ಡಾ. ಹುಲಿಗೆಮ್ಮ ಪೋಸಾ ಅಮ್ಮನವರು ಸಾನ್ನಿಧ್ಯ ವಹಿಸಿದ್ದರು.
ಪ್ರಮುಖರಾದ ತೋಟಪ್ಪ ನಿಡಗುಂದಿ, ಮಹೇಶ ದಾಬಡೆ, ಪ್ರವೀಣ ಪವಾರ, ವಿನಾಯಕ ಕುಲಕರ್ಣಿ, ಎಇಇ ಶ್ರೀದೇವಿ ಧೂಪದ, ಸಂಜು ಬುಗಡಿ, ನಾಗೇಶ ಕತ್ರಿಮಲ್, ಸಾಯಿನಾಥ ದಲಬಂಜನ, ಪ್ರಕಾಶ ಅರಗಂಜಿ, ಶ್ರೀಧರ ಕನಕಮಕಲ್, ಇತರರು ಇದ್ದರು. ನಿವೃತ್ತ ಶಿಕ್ಷಕ ಹನುಮಂತಪ್ಪ ಧೂಪದ ನಿರೂಪಿಸಿದರು.