ಹುಬ್ಬಳ್ಳಿಯ ಗೋಕುಲ ರಸ್ತೆಯ ಗೋಯಾಜ್ (goyaz) ಸಿಲ್ವರ್ ಜುವೆಲರಿ ಸ್ಟೋರ್ ಅನ್ನು ಖ್ಯಾತ ನಟಿ ಸಪ್ತಮಿಗೌಡ ಶನಿವಾರ ಉದ್ಘಾಟಿಸಿದರು. 
ಧಾರವಾಡ

(goyaz) ಹುಬ್ಬಳ್ಳಿಯಲ್ಲಿ ಗೋಯಾಜ್ ಸಿಲ್ವರ್ ಜುವೆಲರಿ ಮಳಿಗೆ ಆರಂಭ

ಹುಬ್ಬಳ್ಳಿ: ಭಾರತದ ಅತಿದೊಡ್ಡ ಲಕ್ಸುರಿ ಸಿಲ್ವರ್ ಜುವೆಲರಿ ಸ್ಟೋರ್ ಗೋಯಾಜ್‌ನ (goyaz) 26ನೇ ಮಳಿಗೆಯನ್ನು ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿ ಶನಿವಾರ ಆರಂಭಿಸಲಾಯಿತು.
ಖ್ಯಾತ ನಟಿ ಸಪ್ತಮಿಗೌಡ ಉದ್ಘಾಟಿಸಿ ಮಾತನಾಡಿ, ಬೆಳ್ಳಿ ಆಭರಣಗಳು ಒಂದೆಡೆ ಸಿಗುವಂಥ ವ್ಯವಸ್ಥೆ ಇಲ್ಲಿದೆ. ಭಾರತದಲ್ಲಿಯೇ ಅತಿದೊಡ್ಡ ಮಳಿಗೆಗಳನ್ನು ಹೊಂದಿದೆ. ಚಿನ್ನಕ್ಕೆ ಸಮಾನವಾದ ಆಭರಣಗಳನ್ನು ಇಲ್ಲಿ ಮಾರಾಟಕ್ಕೆ ಇಡಲಾಗಿದೆ. ಕುಶಲವುಳ್ಳ ವಿವಿಧ ವಿನ್ಯಾಸದ ಆಭರಣಗಳನ್ನು ಇಲ್ಲಿ ಖರೀದಿ ಮಾಡಬಹುದು. ಹೂಡಿಕೆಗೆ ಅತ್ಯುತ್ತಮ ಎನಿಸಿದ್ದರೆ ಅದು ಬೆಳ್ಳಿ. ಹಾಗಾಗಿ ಹೂಡಿಕೆ ಮಾಡಬೇಕಾದವರು ಬೆಳ್ಳಿ ಖರೀದಿ ಮಾಡಿದರೆ ಉತ್ತಮ ಎನ್ನುವುದು ನನ್ನ ಅಭಿಪ್ರಾಯ ಎಂದರು.
ಹು-ಧಾ ಮಹಾನಗರ ಪಾಲಿಕೆ ಉಪ ಮೇಯರ್ ಸಂತೋಷ ಚವ್ಹಾಣ ಮಾತನಾಡಿ, ವಾಣಿಜ್ಯ ನಗರಿ ಹುಬ್ಬಳ್ಳಿಗೆ ಜುವೆಲರಿ ಮಳೆಗಳು ಆಗಮಿಸುತ್ತಿವೆ. ಗೋಯಾಜ್ ಕೂಡ ಅತ್ಯುತ್ತಮ ಆಭರಣಗಳ ಮಳಿಗೆ. ಇದು ಚಿನ್ನವಲ್ಲ, ಬರೀ ಬೆಳ್ಳಿಯ ಆಭರಣಗಳನ್ನು ಖರೀದಿ ಮಾಡಲೆಂದೇ ಆರಂಭಿಸಲಾಗಿದೆ. ಗ್ರಾಹಕರು ಇತ್ತ ಒಲವು ತೋರುವುದು ಒಳಿತು ಎಂದರು.
ಗೋಯಾಜ್ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಕಾ ವೇಮುಲುರಿ ಮಾತನಾಡಿ, 92.5 ಶುದ್ಧ ಬೆಳ್ಳಿಯ ಆಭರಣಗಳು ಇಲ್ಲಿ ಲಭ್ಯ ಇವೆ. ದಕ್ಷಿಣ ಭಾರತದಲ್ಲಿ ಒಟ್ಟು 26 ಮಳಿಗೆಗಳನ್ನು ಹೊಂದಿದ್ದೇವೆ. ಹುಬ್ಬಳ್ಳಿಯಲ್ಲೂ ಮಳಿಗೆ ಆರಂಭಿಸುವ ಮೂಲಕ ರಾಜ್ಯದಲ್ಲಿ ನಾಲ್ಕು ಮಳಿಗೆಗಳನ್ನು ಹೊಂದಿದ್ದೇವೆ. ಮೈಸೂರು, ಮಂಗಳೂರು, ಬಳ್ಳಾರಿಯಲ್ಲಿ 3-4 ತಿಂಗಳಲ್ಲಿ ಹೊಸ ಮಳಿಗೆಗಳನ್ನು ಆರಂಭಿಸಲಾಗುವುದು. ಉತ್ತರ ಕರ್ನಾಟಕದ ಹುಬ್ಬಳ್ಳಿಯಲ್ಲಿ ಬೆಳ್ಳಿ ಆಭರಣಗಳ ಮಳಿಗೆ ಆರಂಭಿಸುವ ಮೂಲಕ ಗ್ರಾಹಕರ ಮನ ಸೆಳೆಯುವ ಕೆಲಸ ಮಾಡಲಾಗಿದೆ. ಗ್ರಾಹಕರ ಮನಕ್ಕೊಪ್ಪುವಂತೆ ಇರುವ ಬೆಳ್ಳಿ ಆಭರಣಗಳನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದರು.
1 ಲಕ್ಷ ರೂ. ಮೌಲ್ಯದ ಸಿಲ್ವರ್ ಜುವೆಲರಿ ಖರೀದಿಗೆ 20ಗೋಲ್ಡ್ ಕಾಯಿಲ್ ಉಚಿತ, 50 ಸಾವಿರ ರೂ. ಮೌಲ್ಯದ ಸಿಲ್ವರ್ ಜುವೆಲರಿ ಖರೀದಿಗೆ 10 ಗೋಲ್ಡ್ ಕಾಯಿನ್ ಉಚಿತ, 25 ಸಾವಿರ ರೂ. ಮೌಲ್ಯದ ಸಿಲ್ವರ್ ಜುವೆಲರಿ 5 ಗೋಲ್ಡ್ ಕಾಯಿನ್, 10 ಸಾವಿರ ರೂ. ಮೌಲ್ಯದ ಜುವೆಲರಿ ಖರೀದಿಗೆ 2 ಗೋಲ್ಡ್ ಕಾಯಿನ್ ಉಚಿತವಾಗಿ ನೀಡಲಾಗುತ್ತಿದೆ ಎಂದರು.
ಗೋಯಾಜ್ ಚೇರ್ಮನ್ ವಿ. ರಾಜೇಂದ್ರ ಕುಮಾರ, ವ್ಯವಸ್ಥಾಪಕ ನಿರ್ದೇಶಕ ರವಿತೇಜ ವೇಮುಲುರಿ ಇತರರು ಭಾಗವಹಿಸಿದ್ದರು.