govt school ಸರ್ಕಾರಿ ಶಾಲೆಗಳ ಕಟ್ಟಡ. 
ಧಾರವಾಡ

govt school ಸರ್ಕಾರಿ ಶಾಲೆಗಳಿಗೆ ಹೊಸ ಲುಕ್, ಹುಡಾ ಚಿಂತನೆ

ಬಸವರಾಜ ಎಸ್. ಇದ್ಲಿ

ಪ್ರಮುಖ ಮುಖ್ಯಾಂಶಗಳು

  • ನಗರಾಭಿವೃದ್ಧಿ ಪ್ರಾಧಿಕಾರದ ಹೊಸ ಪ್ರಯತ್ನ
  • ಶಾಸಕರು, ಸದಸ್ಯರಿಂದ ಉತ್ತಮ ಪ್ರತಿಕ್ರಿಯೆ

ಹುಬ್ಬಳ್ಳಿ: govt school ಸರ್ಕಾರಿ ಶಾಲೆಗಳ ಕಟ್ಟಡ ಸುಧಾರಣೆ ಮಾಡಿ ಉನ್ನತ ವ್ಯಾಸಂಗ ಮಾಡಲು ಮಕ್ಕಳಿಗೆ ನೆರವಾಗಲು ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರವೂ (ಹುಡಾ) ಕೈಜೋಡಿಸಲು ಮುಂದಾಗಿದೆ.

ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಗಳ ಕಟ್ಟಡ ದುರಸ್ತಿ, ಅವುಗಳಿಗೆ ಸುಣ್ಣ ಬಣ್ಣ ಇಲ್ಲದೇ ಬಹಳಷ್ಟು ನಿರ್ಲಕ್ಷ್ಯಕ್ಕೆ ಒಳಗಾಗುತ್ತಿರುವುದು ಕಂಡು ಬರುತ್ತದೆ. ಕೆಲವೇ ಶಾಲೆಗಳು ಉತ್ತಮ ಸ್ಥಿತಿಯಲ್ಲಿವೆ.
ಹೆಚ್ಚಿನ ಕಡೆಗಳಲ್ಲಿ ದಾನಿಗಳು ನೀಡಿದ ಜಾಗದಲ್ಲಿ ನಿರ್ಮಿಸಲಾಗಿರುವ ಬಹಳಷ್ಟು ಕಟ್ಟಡಗಳು ನಿರ್ವಹಣೆ ಕೊರತೆಯಿಂದ ಮಾಸಿ ಹೋಗಿವೆ. ಕೆಲವು ದುರಸ್ತಿ ಕಾಣದೇ ಬಡವಾಗಿವೆ.
ಇಂತಹ ಸಂದರ್ಭದಲ್ಲಿ ಅವುಗಳತ್ತ ಒಂದಿಷ್ಟು ಗಮನ ಹರಿಸಿದರೆ ಬೇರೆ ಶಾಲೆಗಳಿಗಿಂತ ಇನ್ನಷ್ಟು ಸುಂದರಗೊಳಿಸಬಹುದಾಗಿದೆ. ಇಂತಹ ಮಹತ್ವದ ಕಾರ್ಯಕ್ಕೆ ನಗರಾಭಿವೃದ್ಧಿ ಪ್ರಾಧಿಕಾರವು ಹೊಸದೊಂದು ಯೋಜನೆ ರೂಪಿಸಿದೆ.
ಸರ್ಕಾರಿ ಶಾಲೆಗಳ ಸುಧಾರಣೆಗಾಗಿಯೇ ವಿಶೇಷವಾಗಿ ಕಟ್ಟಡಗಳನ್ನು ದುರಸ್ತಿ ಮಾಡಿ ಮಕ್ಕಳು ಸುಂದರ ವಾತಾವರಣದಲ್ಲಿ ಸುರಕ್ಷಿತವಾಗಿ ಪಾಠ ಬೋಧನೆ ಕಲಿಯಬೇಕೆಂಬ ಆಶಯದೊಂದಿಗೆ ಒಂದಿಷ್ಟು ಹಣ ಖರ್ಚು ಮಾಡಲು ತಯಾರಿ ಮಾಡಿಕೊಂಡಿದೆ.
ಇದಕ್ಕಾಗಿ ಇತ್ತೀಚೆಗೆ ನಡೆದ ನಗರಾಭಿವೃದ್ಧಿ ಪ್ರಾಧಿಕಾರದ ಸಾಮಾನ್ಯ ಸಭೆಯಲ್ಲಿ ಹುಡಾ ಅಧ್ಯಕ್ಷ ಶಾಕೀರ್​ ಸನದಿ ಅವರು ವಿಷಯ ಪ್ರಸ್ತಾಪಿಸಿ ಸದಸ್ಯರಿಂದ ಮೆಚ್ಚುಗೆ ಪಡೆದುಕೊಂಡಿದ್ದಾರೆ.
ಶಾಸಕರು ಹಾಗೂ ಹುಡಾ ಸದಸ್ಯರು ಈ ಹೊಸ ಪ್ರಸ್ತಾವನೆ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿ ಸರ್ಕಾರಿ ಶಾಲೆ ಉಳಿಸಿ ಬೆಳೆಸುವಲ್ಲಿ ಇದು ಅತ್ಯಂತ ಮಹತ್ವದ ಹೆಜ್ಜೆಯಾಗಲಿದೆ ಎಂದು ಒಪ್ಪಿಗೆ ನೀಡಿದ್ದಾರೆ.

ಏನಿದರ ವಿಶೇಷತೆ

ನಗರಾಭಿವೃದ್ಧಿ ಪ್ರಾಧಿಕಾರವು ಹೊಸ ಲೇಔಟ್​ ಸೇರಿ ಅಭಿವೃದ್ಧಿ ಕೆಲಸಗಳಿಗೆ ವಿವಿಧ ರೀತಿಯ ಸೆಸ್​ ಸಂಗ್ರಹ ಮಾಡುತ್ತದೆ. ಆ ಮೂಲಕ ಆದಾಯವನ್ನು ಗಳಿಸುತ್ತದೆ. ಕೆರೆ, ಗಾರ್ಡನ್​ ಅಭಿವೃದ್ಧಿ ಹೀಗೆ ತರಹೇವಾರಿ ಶುಲ್ಕಗಳನ್ನು ನಿಗದಿ ಪಡಿಸಲಾಗಿದೆ.
ಇದೇ ಮಾದರಿಯಲ್ಲಿ ಸರ್ಕಾರಿ ಶಾಲೆ ಅಭಿವೃದ್ಧಿ ಸೆಸ್​ ಎಂದು ಹೊಸದಾಗಿ ಸೇರಿಸಿ ಅದರಿಂದ ಸಂಗ್ರಹವಾಗುವ ಹಣವನ್ನು ಪ್ರತಿ ವರ್ಷ ಶಾಲೆಗಳ ಅಭಿವೃದ್ಧಿ ಪಡಿಸುವುದು ಇದರ ಉದ್ದೇಶ. ಈ ಬಗ್ಗೆ ಸಭೆಯಲ್ಲಿ ಗಂಭೀರವಾಗಿ ಚಚಿರ್ಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಲಾಗಿದೆ.

ಸರ್ಕಾರ ಈಗಾಗಲೇ ಶಾಲೆಗಳಿಗೆ ಅನುದಾನ ನೀಡುತ್ತಿದೆ. ಆದರೆ, ಬಹಳಷ್ಟು ಶಾಲೆಗಳಿಗೆ ಇದು ಸಾಲುತ್ತಿಲ್ಲ. ಕಟ್ಟಡಗಳಿಗೆ ಅನುದಾನ ಕೊರತೆಯಾಗುತ್ತದೆ ಎಂದು ಅನೇಕ ಶಾಲೆಯವರು ದಾನಿಗಳು,

ಶಾಸಕರ ನಿಧಿ ಬಳಕೆ ಮಾಡುತ್ತಾರೆ.

"

ರಾಜ್ಯದಲ್ಲಿ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸುವುದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರ ಕನಸಾಗಿದೆ. ಈ ದಿಸೆಯಲ್ಲಿ ಸಂಗ್ರಹವಾಗುವ ಸೆಸ್​ ಅಡಿಯಲ್ಲಿ ಹಂತಹಂತವಾಗಿ ಸರ್ಕಾರಿ ಶಾಲೆ ಸುಧಾರಣೆಗೆ ಕ್ರಮ ಕೈಗೊಳ್ಳಲಾಗುವುದು. ಇದರೊಂದಿಗೆ ಶೈಕ್ಷಣಿಕ ಅಭಿವೃದ್ಧಿಗೆ ಹುಡಾ ಕೊಡುಗೆ ನೀಡಲಿದೆ.

— ಶಾಕೀರ್​ ಸನದಿ, ಹುಡಾ ಅಧ್ಯಕ್ಷ