govt job ಧಾರವಾಡದ ಅಲ್ಪಸಂಖ್ಯಾತರ ಇಲಾಖೆಯ ವಿಸ್ತರಣಾಧಿಕಾರಿಯಾಗಿ ನಿವೃತ್ತರಾದ ಸುಬೇದಾರ್ ಮೇಜರ್ ಚಂದ್ರಶೇಖರ್ ವಿ. ಬೆಳಗಲಿ ಅವರನ್ನು ಸನ್ಮಾನಿಸಲಾಯಿತು. ಡಾ. ಎಚ್.ವಿ. ಬೆಳಗಲಿ, ಡಾ. ಸಂಜಯ ಪೀರಾಪುರ, ಜಿ.ಎನ್. ಗಡದಿನ್ನಿ, ರಮೇಶ ಮಾವಿನಕೊಪ್ಪ ಇತರರು ಇದ್ದರು.
- ಮೇಜರ್ ಚಂದ್ರಶೇಖರ ಬೆಳಗಲಿ ಅಭಿಮತ
- 30 ವರ್ಷ ಸೇನೆಯಲ್ಲಿ ದೇಶ ಸೇವೆ
ಹುಬ್ಬಳ್ಳಿ: govt job ಸರ್ಕಾರಿ ಸೇವೆಯಲ್ಲಿರುವ ಪ್ರತಿಯೊಬ್ಬ ನೌಕರರು ಶಿಸ್ತು ಮತ್ತು ಮಾನವೀಯತೆಯಿಂದ ಕಾರ್ಯ ನಿರ್ವಹಿಸಬೇಕು, ಜನರೊಂದಿಗೆ ಸೌಜನ್ಯದಿಂದ ವರ್ತಿಸಬೇಕು ಎಂದು ಸುಬೇದಾರ್ ಮೇಜರ್ ಚಂದ್ರಶೇಖರ ವಿ. ಬೆಳಗಲಿ ಹೇಳಿದರು.
ಧಾರವಾಡದ ಅಲ್ಪಸಂಖ್ಯಾತರ ಇಲಾಖೆಯ ವಿಸ್ತರಣಾಧಿಕಾರಿಯಾಗಿ ನಿವೃತ್ತರಾದ ಹಿನ್ನೆಲೆಯಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಸಾರ್ವಜನಿಕರ ಸಮಸ್ಯೆಯನ್ನು ಪರಿಹರಿಸುವಾಗ ಮಾನವೀಯತೆ ಸ್ಪರ್ಷ ಇರಬೇಕು. ಶಿಸ್ತು ಮತ್ತು ಸಂಯಮವನ್ನು ಅಳವಡಿಸಿಕೊಂಡು ಸೇವೆಗೈದಾಗ ಸಮಾಜದ ಅಭಿವೃದ್ಧಿಯಾಗುತ್ತದೆ ಎಂದು ಹೇಳಿದರು.
ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಮಾಜಿ ಸಿಂಡಿಕೇಟ್ ಸದಸ್ಯ ಡಾ. ಎಚ್.ವಿ. ಬೆಳಗಲಿ ಮಾತನಾಡಿ, 30 ವರ್ಷ ಸೇನೆಯಲ್ಲಿ ದೇಶ ಸೇವೆ ಮಾಡಿದ ನಂತರ ಇದೀಗ ಸಮಾಜದೊಂದಿಗೆ ಬೆರೆಯುವ ಸರ್ಕಾರಿ ಕೆಲಸವನ್ನೂ ಮಾಡಿ ಸೈ ಎನಿಸಿಕೊಂಡಿರುವುದು ವಿಶೇಷ ಸಾಧನೆ ಎಂದರು.