govt employee ಹುಬ್ಬಳ್ಳಿಯಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಸರ್ಕಾರಿ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಡಿಡಿಪಿಐ ಉಮೇಶ ಬೊಮ್ಮಕ್ಕನವರ ಉದ್ಘಾಟಿಸಿದರು. ವಿ.ಎಫ್. ಚುಳಕಿ, ಎಸ್​.ಎಸ್​. ಕೆಳದಿಮಠ, ಎಚ್​.ಎಂ. ಪಡ್ನೀಸ್​, ಪರಮಾನಂದ ಶಿವಳ್ಳಿಮಠ, ಶಿವಾನಂದ ಹರಕುಣಿ, ಇತರರು ಇದ್ದರು. 
ಧಾರವಾಡ

govt employee ತಂದೆ ತಾಯಿಯನ್ನು ಗೌರವದಿಂದ ಕಾಣಿ

ಪ್ರಮುಖ ಮುಖ್ಯಾಂಶಗಳು

  • ಡಿಡಿಪಿಐ ಉಮೇಶ ಬೊಮ್ಮಕ್ಕನವರ ಸಲಹೆ
  • ಸರ್ಕಾರಿ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ

ಹುಬ್ಬಳ್ಳಿ: govt employee ವಿದ್ಯಾರ್ಥಿಗಳು ಉತ್ತಮ ದರ್ಜೆಯಲ್ಲಿ ಉತ್ತೀರ್ಣರಾಗುವುದರ ಜತೆಗೆ ಸಂಸ್ಕಾರವಂತರಾಗಬೇಕು, ಸಮಾಜದಲ್ಲಿ ಗುರುಹಿರಿಯರು, ತಂದೆ- ತಾಯಿಗಳನ್ನು ಗೌರವದಿಂದ ಕಾಣಬೇಕೆಂದು ಡಿಡಿಪಿಐ ಉಮೇಶ ಬೊಮ್ಮಕ್ಕನವರ ಹೇಳಿದರು.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ತಾಲೂಕು ಘಟಕದ ವತಿಯಿಂದ ಇತ್ತೀಚೆಗೆ ಏರ್ಪಡಿಸಿದ್ದ ಸಾಧಕ ವಿದ್ಯಾಥಿರ್ಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯೆಯೊಂದಿಗೆ ವಿನಯವೂ ಇದ್ದರೆ ಏನನ್ನಾದರೂ ಗೆಲ್ಲಲು ಸಾಧ್ಯ. ನಮ್ಮ ಸಂಸತಿ, ಸಂಸ್ಕಾರಗಳನ್ನು ಸಹ ಮೈಗೂಡಿಸಿಕೊಳ್ಳಬೇಕು ಎಂದರು.
2024-25 ಹಾಗೂ 2025-26ನೇ ಸಾಲಿನಲ್ಲಿ ಉತ್ತಮ ದರ್ಜೆಯಲ್ಲಿ ಪಾಸಾದ ಸರ್ಕಾರಿ ನೌಕರರ ಮಕ್ಕಳಿಗೆ ಪುರಸ್ಕಾರ ನೀಡಲಾಯಿತು.
ಅಧ್ಯಕ್ಷತೆ ವಹಿಸಿದ್ದ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ವಿ.ಎಫ್. ಚುಳಕಿ, ಪ್ರತಿವರ್ಷ ನೌಕರರ ಸಂಘದಿಂದ ಉತ್ತಮ ಸಾಧನೆಗೈದ ಮಕ್ಕಳಿಗೆ ಗೌರವ ಸನ್ಮಾನ ನೀಡುತ್ತ ಬರಲಾಗಿದೆ ಎಂದು ತಿಳಿಸಿದರು.
ನಿವೃತ್ತ ಡಿಡಿಪಿಐ ಎಸ್​.ಎಸ್​. ಕೆಳದಿಮಠ ಹಾಗೂ ತಾಪಂ ನಿವೃತ್ತ ಇಒ ರಾಮಚಂದ್ರ ಹೊಸಮನಿ, ನಿವೃತ್ತ ಬಿಇಒ ಸುರೇಶ ಕೋಟೆ, ಗೋಪನಕೊಪ್ಪ ಶಾಲೆಯ ವೈ.ಎಚ್​. ಬಣವಿ, ಬಸವರಾಜ ಗದ್ದಿಗೌಡ್ರ, ಎ.ಜಿ. ಕುಲಕರ್ಣಿ, ಪ್ರಕಾಶ ಹೊಸಮನಿ, ಇವರನ್ನು ಸನ್ಮಾನಿಸಲಾಯಿತು.
ಕ್ಷೇತ್ರ ಶಿಕ್ಷಣಾಧಿಕಾರಿ ಎಚ್​.ಎಂ. ಪಡ್ಮಿಸ್​, ಕ್ಷೇತ್ರ ಸಮನ್ವಯಾಧಿಕಾರಿ ಸಂತೋಷ ದಂಡಗಲ್​, ಮುಖ್ಯಾಧ್ಯಾಪಕ ಎಂ.ಎಸ್​. ಶಿವಳ್ಳಿಮಠ, ರಮೇಶ ಲಿಂಗದಾಳ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಪರಿಷತ್​ ಸದಸ್ಯ ಪರಮಾನಂದ ಶಿವಳ್ಳಿಮಠ, ಪದಾಧಿಕಾರಿಗಳಾದ ಪರ್ವತೀಕರ, ಗಂಗಾಧರ ತೇರದಾಳ, ಎಸ್​.ಆರ್​. ಹೂಲಿ, ಉಪಸ್ಥಿತರಿದ್ದರು.
ಡಾ. ರೇಣುಕಾತಾಯಿ ಸಂತಬಾ ಪ್ರಾಥಿರ್ಸಿದರು. ಉಪಾಧ್ಯಕ್ಷ ಶಿವಾನಂದ ಹರಕುಣಿ ಸ್ವಾಗತಿಸಿದರು. ಕಾರ್ಯದರ್ಶಿ ಮಾರುತಿ ನಾಗಾವಿ ಕಾರ್ಯಕ್ರಮ ನಿರೂಪಿಸಿದರು.