(gold theft) ಅಂತರರಾಜ್ಯ ಕಳ್ಳರಿಬ್ಬರ ಬಂಧನ 
ಧಾರವಾಡ

(gold theft) ಅಂತರರಾಜ್ಯ ಕಳ್ಳರಿಬ್ಬರ ಬಂಧನ

ಹುಬ್ಬಳ್ಳಿ: ಧಾರವಾಡ ಹಾಗೂ ಹಾವೇರಿ ಜಿಲ್ಲಾ ಪೊಲೀಸರ ಜಂಟಿ ಕಾರ್ಯಾಚರಣೆಯಿಂದ (gold theft) ಇಬ್ಬರು ಅಂತರರಾಜ್ಯ ಕಳ್ಳರ ಬಂಧನವಾಗಿದ್ದು, 1 ಕೋಟಿ 15 ಲಕ್ಷ ರೂ. ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ಜಪ್ತಿ ಮಾಡಲಾಗಿದೆ.
ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಬಾಲೆಹೊಸೂರಿನ ಶಿವರಾಜ ಮೋಡಕೇರ, ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಅಂಬಾಮಠದ ಅಶೋಕ ಅಲಿಯಾಸ್ ರಮೇಶ ಕೊಂಚಿಕೊರವರ ಬಂಧಿತರು.
ಬಂಧಿತರಿಂದ 310 ಗ್ರಾಂ ಚಿನ್ನಾಭರಣ, 26 ಕೆಜಿ ಬೆಳ್ಳಿ ಆಭರಣ, ತೆಲಂಗಾಣ ರಾಜ್ಯದಲ್ಲಿ ಕಳವು ಮಾಡಿದ್ದ ಬೊಲೆರೋ ವಾಹನ ಸೇರಿ ಒಟ್ಟು 1 ಕೋಟಿ 15 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
ಕಿರೇಸೂರು ಗ್ರಾಮದಲ್ಲಿ ಕಳೆದ ಏಪ್ರಿಲ್‌ನಲ್ಲಿ ಮನೆಗಳ್ಳತನವಾಗಿತ್ತು. ಹಾವೇರಿ ಜಿಲ್ಲೆಯ ಹಾನಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎರಡು ದಿನಗಳ ಹಿಂದೆ ಚಿನ್ನದ ಅಂಗಡಿಯಲ್ಲಿ ಕಳವಾಗಿತ್ತು. ಹುಬ್ಬಳ್ಳಿ ಗ್ರಾಮಿಣ ಠಾಣೆ, ನವಲಗುಂದ ಠಾಣೆ ಹಾಗೂ ಹಾನಗಲ್ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಜಂಟಿ ಕಾರ್ಯಾಚರಣೆಯಿಂದ ಕಳ್ಳರು ಪತ್ತೆಯಾಗಿದ್ದಾರೆ.