ಹುಬ್ಬಳ್ಳಿ: ಮಹಾತ್ಮ ಬಸವೇಶ್ವರ ಹಾಗೂ ವಚನ ಸಾಹಿತ್ಯ ಕುರಿತು ಅವಹೇಳನಕಾರಿ ಹಾಗೂ ದೋಷಪೂರಿತವಾಗಿ ಸಾಮಾಜಿಕ ಜಾಲತಾಣ ಹಾಗೂ ಬಸವ ಮಂಟಪ ಪುಸ್ತಕದ ಮೂಲಕ ರವಿ ಹಂಜ್ ಎಂಬುವವರ ಮಾತನಾಡಿರುವುದು ಖಂಡನೀಯ ಎಂದು ವಿರುದ್ಧ ಜಾಗತಿಕ ಲಿಂಗಾಯತ ಮಹಾಸಭಾ ಧಾರವಾಡ ಜಿಲ್ಲಾಧ್ಯಕ್ಷ ಎಂ.ವಿ. ಗೊಂಗಡಶೆಟ್ಟಿ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪುಸ್ತಕದ ಮೂಲಕ ಶ್ರೀ ಗುರು ಬಸವೇಶ್ವರರು ಹಾಗೂ ವಚನ ಸಾಹಿತ್ಯದ ಬಗ್ಗೆ ಉದ್ದೇಶಪೂರ್ವಕವಾಗಿ ಅವಹೇಳನ ಮಾಡಿರುವ ಹಂಜ್ ಹಾಗೂ ಅವರ ಲೇಖನ ಪ್ರಕಟಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ರವಿ ಹಂಜ್ ಅವರ ಹಿಂದೆ ಯಾರಿದ್ದಾರೆ ಎಂಬುದನ್ನು ಪತ್ತೆ ಮಾಡಬೇಕು, ಅಮೆರಿಕೆಗೆ ತೆರಳಿರುವ ಆ ವ್ಯಕ್ತಿಯ ಪಾಸ್ಪೋರ್ಟ್ ರದ್ದುಪಡಿಸಬೇಕು. ಇಂತಹ ಕೃತ್ಯಕ್ಕೆ ಸಹಕಾರ ನೀಡಿದ ಎಲ್ಲರ ಮೇಲೆ ಕ್ರಮ ಜರುಗಿಸಬೇಕು ಎಂದು ಮಹಾಸಭಾ ಪದಾಧಿಕಾರಿಗಳು ಆಗ್ರಹಿಸಿದರು.
ಬಸವ ಮಂಟಪ ಪುಸ್ತಕ ಮುಟ್ಟುಗೋಲು ಹಾಕಿಕೊಳ್ಳಬೇಕು. ಬಸವೇಶ್ವರರ ಬಗ್ಗೆ ಇಂತಹ ಸುಳ್ಳು ಪ್ರಚಾರ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದರು.
ಪ್ರೊ. ಜಿ.ಬಿ. ಹಳ್ಯಾಳ, ಸವಿತಾ ನಡಕಟ್ಟಿ, ಬಿ.ಎಲ್. ಲಿಂಗಶೆಟ್ಟರ್, ಬಸಂತಪ್ಪ ತೋಟದ, ಪ್ರೊ. ಎಸ್.ಎಸ್. ನರೇಗಲ್ಲ ಇತರರು ಗೋಷ್ಠಿಯಲ್ಲಿದ್ದರು.