giants school ಹಿಂದಿ ದಿವಸ್ ನಿಮಿತ್ತ ಹುಬ್ಬಳ್ಳಿಯ ಜೈಂಟ್ಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿಯರು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ಹುಬ್ಬಳ್ಳಿ: ಇಲ್ಲಿಯ ಗೋಕುಲ ರೋಡ್‌ನ giants school ಜೈಂಟ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಇತ್ತೀಚೆಗೆ ಹಿಂದಿ ದಿವಸ್ ಆಚರಿಸಲಾಯಿತು.
ವಿದ್ಯಾರ್ಥಿಗಳು ಹಿಂದಿ ಭಾಷಣ, ಕವನ ವಾಚನ, ದೇಶಭಕ್ತಿ ಗೀತೆ, ನಾಟಕ ಹಾಗೂ ರಸಪ್ರಶ್ನೆ ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು. ಶಿಕ್ಷಕರು ಹಿಂದಿ ಭಾಷೆ ಕಲಿಕೆ ಮತ್ತು ಗೌರವಿಸುವಂತೆ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿದರು. ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ವ್ಯವಸ್ಥಾಪಕ ಪಲ್ಲವಿ ಪಾಸ್ತೆ, ಹಿರಿಯ ಶಿಕ್ಷಕರಾದ ಪದ್ಮಾವತಿ ಸುಣಗಾರ, ನಂದಿನಿ ಪಾಟೀಲ, ವೀರಣ್ಣ ಮುಪ್ಪಯ್ಯನಮಠ ಇತರರಿದ್ದರು.