ಹುಬ್ಬಳ್ಳಿಯಲ್ಲಿ ಜೈಂಟ್ಸ್​ ಫೆಡರೇಶನ್​ ಪ್ರಶಸ್ತಿ ಪ್ರದಾನ ಸಮಾರಂಭದ ಕುರಿತು ಮಾಹಿತಿ ನೀಡಿದ ಅಧ್ಯಕ್ಷ ಪಾಂಡುರಂಗ ತಾಳೇಬೈಲಕರ, ಬೀರೇಶ ತಳ್ಳಿಕೇರಿ, ಜ್ಯೋತಿ ವೆಂಕಟೇಶ, ಗಜಾನನ ನೀಲಾಕರಿ, ಶಶಿಕಲಾ ನಾಯ್ಡು, ಚನ್ನಬಸಪ್ಪ ಧಾರವಾಡಶೆಟ್ಟರ್​. 
ಧಾರವಾಡ

ಜೈಂಟ್ಸ್​ ಫೆಡರೇಶನ್​ ಪ್ರಶಸ್ತಿ ಪ್ರದಾನ 1ರಂದು

ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ ಸಮಾರಂಭ

ಹುಬ್ಬಳ್ಳಿ: ಜೈಂಟ್ಸ್​ ವೆಲ್ ಫೇರ್​ ಫೌಂಡೇಷನ್​ನ ಜೈಂಟ್ಸ್​ ಗ್ರುಪ್​ ಹುಬ್ಬಳ್ಳಿ, ಹೆಲ್ಪಿಂಗ್​ ಹ್ಯಾಂಡ್ಸ್​ ಸಹಯೋಗದಲ್ಲಿ ಜೈಂಟ್ಸ್​ ಫೆಡರೇಶನಲ್​ ಲೆವಲ್​ ಅವಾರ್ಡ್ಸ್​ ಕಾರ್ಯಕ್ರಮವನ್ನು ನವೆಂಬರ್​ 1ರಂದು ಸಂಜೆ 7ಕ್ಕೆ ನಗರದ ಮಂತ್ರ ರೆಸಿಡೆನ್ಸಿಯಲ್ಲಿ ಏರ್ಪಡಿಸಲಾಗಿದೆ ಎಂದು ಫೆಡರೇಶನ್​ ಅಧ್ಯಕ್ಷ ಪಾಂಡುರಂಗ ತಾಳೇಬೈಲಕರ ತಿಳಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಮಾನ ನಿಲ್ದಾಣ ನಿರ್ದೇಶಕ ರೂಪೇಶಕುಮಾರ, ಜೈಂಟ್ಸ್​ ವೆಲ್ ಫೆರ್​ ಫೌಂಡೇಷನ್​​ ಮುಂಬೈನ ಸದಸ್ಯ ದಿನಕರ ಅಮಿನ್​, ಜೆ.ಜಿ. ಕಾಲೇಜಿನ ಪ್ರಾಚಾರ್ಯ ಪ್ರೊ. ಎಸ್​.ಎಲ್​. ಪಾಟೀಲ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದರು.

ಇದೇ ಮೊದಲ ಬಾರಿ ಹುಬ್ಬಳ್ಳಿ ಧಾರವಾಡ ಘಟಕದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದ್ದು, 9 ಜನ ಸಾಧಕರನ್ನು ಆಯ್ಕೆ ಮಾಡಲಾಗಿದೆ. ಇವರು ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, ಸಮಾಜಕ್ಕೆ ಕೊಡುಗೆ ನೀಡುತ್ತಿದ್ದಾರೆ ಎಂದರು.

ಕಮಲಪ್ಪ ಜಲಿಹಾಳ ವ್ಯವಹಾರ, ಡಾ. ನಾಗರಾಜರಾವ ಸಾನು ವೈದ್ಯಕಿಯ, ಡಾ. ಶಶಿಧರ ನರೇಂದ್ರ ರಂಗಭೂಮಿ, ನೊಮಿಟೊ ಕಾಮದಾರ್​ ಸಮಾಜಸೇವೆ, ಕೆ.ವೈ. ವೆಂಕಟೇಶ ಕ್ರೀಡೆ, ಸುಧೀರ ಕತ್ತಿ ಕೃಷಿ, ಬಂಡು ಕುಲಕರ್ಣಿ ಪತ್ರಿಕೋದ್ಯಮ, ಲೀನಾ ಪಡಿಹಾರಿ ನವೀನ ಉದ್ಯಮಶೀಲತೆ, ಡಾ. ಕಿರಣಕುಮಾರ ಗಡ್ಡಿ ಹೋಮಿಯೋಪತಿ ಕ್ಷೇತ್ರ ಇವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಉತ್ಕೃಷ್ಟತೆಯನ್ನು ಉತ್ತೇಜಿಸಲು, ಉದಯೋನ್ಮುಖ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ಹಾಗೂ ಸಾಮಾಜಿಕ ಪ್ರಗತಿಗೆ ಬದ್ಧವಾಗಿ ಫೌಂಡೇಷನ್​ ಈ ಕಾರ್ಯ ಮಾಡಿದೆ. ಸಾಧಕರ ಪರಿಶ್ರಮ, ಸಮರ್ಪಣೆ, ಸೇವಾ ಮನೋಭಾವವನ್ನು ಗೌರವಿಸುವ ಉದ್ದೇಶ ಹೊಂದಲಾಗಿದೆ.

ಹೆಲ್ಪಿಂಗ್​ ಹ್ಯಾಂಡ್ಸ್​ನ ಬೀರೇಶ ತಳ್ಳಿಕೇರಿ, ಫೌಂಡೇಷನ್​ ವಿಶೇಷ ಸಮಿತಿ ಸದಸ್ಯೆ ಜ್ಯೋತಿ ವೆಂಕಟೇಶ, ಗಜಾನನ ನೀಲಾಕರಿ, ಕಾರ್ಯದರ್ಶಿ ಶಶಿಕಲಾ ನಾಯ್ಡು, ಚನ್ನಬಸಪ್ಪ ಧಾರವಾಡಶೆಟ್ಟರ್​ ಇತರರು ಗೋಷ್ಠಿಯಲ್ಲಿದ್ದರು.