ಗಳಗಿ ಹುಲಕೊಪ್ಪದಲ್ಲಿ ಬಸವೇಶ್ವರ ರಥೋತ್ಸವ
ಧಾರವಾಡ: ತಾಲೂಕಿನ ಗಳಗಿ ಹುಲಕೊಪ್ಪದ ಪ್ರಸಿದ್ಧ ಶ್ರೀ ಘಟಗಿ ಬಸವೇಶ್ವರ ರಥೋತ್ಸವವು ಸೋಮವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು. ಯುಗಾದಿ ಪರ್ವದ ಬೆನ್ನಲ್ಲೇ ಜರುಗಿದ ಜಾತ್ರಾ ಮಹೋತ್ಸವವು ಇಡೀ ಗ್ರಾಮದಲ್ಲಿ ಹಬ್ಬದ ವಾತಾವರಣ ನಿಮಿರ್ಸಿತ್ತು.
ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಸಾಗಿದ ರಥೋತ್ಸವಕ್ಕೆ ಭಕ್ತರು ಸಾಕ್ಷಿಯಾದರು. ಭಕ್ತಾದಿಗಳು ಹಳದಿ ಮತ್ತು ಕೇಸರಿ ವಸ್ತ್ರಗಳನ್ನು ಧರಿಸಿ ಭಕ್ತಿಯ ಪರಾಕಾಷ್ಠೆಯಲ್ಲಿ ಮಿಂದೆದ್ದರು. ರಥ ಸಾಗುವ ದಾರಿಯುದ್ದಕ್ಕೂ ಭಕ್ತರು ಉತ್ತತ್ತಿ, ಬಾಳೆಹಣ್ಣು ಎಸೆಯುವ ಮೂಲಕ ಇಷ್ಟಾರ್ಥ ಸಿದ್ಧಿಗಾಗಿ ಪ್ರಾಥಿರ್ಸಿದರು.