ಗರಗ ಮಹಾದ್ವಾರ 
ಧಾರವಾಡ

ಅರ್ಧಕ್ಕೆ ನಿಂತ ಗರಗ ಮಹಾದ್ವಾರ ಕಾಮಗಾರಿ Garag

ಮಂಜುನಾಥ ಅಂಗಡಿ

ಪ್ರಮುಖ ಮುಖ್ಯಾಂಶಗಳು

  • ಐತಿಹಾಸಿಕ ಸ್ಥಳಕ್ಕೆ ಇಲ್ಲ ಸ್ವಾಗತ ಕಮಾನು
  • 2022ರ ನ. 24ರಂದು ನಡೆದಿತ್ತು ಭೂಮಿಪೂಜೆ
  • ಸಾವಿರಾರು ವಾಹನಗಳು ಸಂಚರಿಸುವ ರಸ್ತೆಯೂ ಗುಂಡಿಮಯ
ಧಾರವಾಡ: ಜಿಲ್ಲೆಯಲ್ಲಿ ಅನೇಕ ಐತಿಹಾಸಿಕ, ಧಾಮಿರ್ಕ ಸುಕ್ಷೇತ್ರಗಳಿವೆ. ಗ್ರಾಮವನ್ನು ಸಂಪಕಿರ್ಸುವ ಮುಖ್ಯ ರಸ್ತೆಗೆ ಬೃಹತ್ತಾದ ಸ್ವಾಗತ ಕಮಾನು ಅಥವಾ ಮಹಾದ್ವಾರಗಳನ್ನು ನಿಮಿರ್ಸಲಾಗಿದೆ. ತಾಲೂಕಿನ ಸುಕ್ಷೇತ್ರ ಗರಗ ಗ್ರಾಮಕ್ಕೆ ಬರುವವರನ್ನು ಸ್ವಾಗತಿಸುವ ಕಮಾನು ನಿರ್ಮಾಣ ಕಾಮಗಾರಿ ಅರ್ಧಕ್ಕೆ ನಿಂತಿದೆ.
ಶ್ರೀ ಸಿದ್ಧಾರೂಢರು ಮತ್ತು ಶಿಶುನಾಳ ಷರೀರ ಸಮಕಾಲೀನರಾದ ಶ್ರೀ ಮಡಿವಾಳೇಶ್ವರರು ನೆಲೆಸಿದ್ದ ಸುಕ್ಷೇತ್ರ ಗರಗ. ನೇಯ್ಗೆಯ ಮೂಲಕ ರಾಷ್ಟ್ರ ಧ್ವಜ ತಯಾರಿಸುವ ಕೇಂದ್ರಗಳು ಗರಗದಲ್ಲಿವೆ. ಇಂಥ ಪುಣ್ಯಕ್ಷೇತ್ರ ಗರಗ ಪ್ರವೇಶಿಸುವ ಕ್ರಾಸ್​ನಲ್ಲಿ ಮಹಾದ್ವಾರ ಇರಲಿಲ್ಲ. ಪುಣೆ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4ಕ್ಕೆ ಹೊಂದಿಕೊಂಡ ಗರಗ ರಸ್ತೆ ಸಂಪಕಿರ್ಸುವ ಕ್ರಾಸ್​ನಲ್ಲಿ ಮಹಾದ್ವಾರ ನಿಮಿರ್ಸಬೇಕು ಎಂಬ ಭಕ್ತರ ಕೂಗು ದಶಕದಿಂದ ಕೇಳಿಬರುತ್ತಿತ್ತು.
2018ರಿಂದ 2023ರವರೆಗೆ ಅಮೃತ ದೇಸಾಯಿ ಅವರು ಧಾರವಾಡ ಗ್ರಾಮೀಣ ಶಾಸಕರಾಗಿದ್ದರು. ಪ್ರತಿವರ್ಷ ಕುಟುಂಬ ಸಮೇತ ಉಳವಿ ಕ್ಷೇತ್ರಕ್ಕೆ ಪಾದಯಾತ್ರೆ ಕೈಗೊಳ್ಳುವ ದಿನದಂದೇ ಗರಗ ಕ್ರಾಸ್​ನಲ್ಲಿ ಮಹಾದ್ವಾರ ನಿರ್ಮಾಣ ಮತ್ತು ರಾಜ್ಯ ಹೆದ್ದಾರಿ ಅಗಲೀಕರಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ್ದರು. 2022ರ ನ. 24ರಂದು ಬಸವಗೌಡ ಪಾಟೀಲ ಯತ್ನಾಳ, ಗರಗ ಕ್ರಾಸ್​ನಲ್ಲಿ ಮಹಾದ್ವಾರ ನಿರ್ಮಾಣ ಕಾಮಗಾರಿಯ ಭೂಮಿಪೂಜೆ ನೆರವೇರಿಸಿದ್ದರು.
ಮಂಗಸೂಳಿ- ಲಕ್ಷ್ಮೇಶ್ವರ ರಾಜ್ಯ ಹೆದ್ದಾರಿ 73ರ 2.7 ಕಿ.ಮೀ. ರಸ್ತೆ ಅಗಲೀಕರಣ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆ ಕೈಗೊಂಡಿತ್ತು. ಜತೆಗೆ ಗರಗ ಕ್ರಾಸ್​ನಲ್ಲಿ ಮಹಾದ್ವಾರ ನಿಮಿರ್ಸುವ ಕಾರ್ಯವನ್ನೂ ಆರಂಭಿಸಿತ್ತು. ರಸ್ತೆ ಅಗಲೀಕರಣ ಕಾಮಗಾರಿಯೂ ಅರೆಬರೆಯಾಗಿದೆ. ನಿತ್ಯ ಸಾವಿರಾರು ವಾಹನಗಳು ಸಂಚರಿಸುವ ರಸ್ತೆ ಸಂರ್ಪೂಣ ಗುಂಡಿಮಯವಾಗಿದೆ. ಮತ್ತೊಂದೆಡೆ ಮಹಾದ್ವಾರ ನಿರ್ಮಾಣ ಕಾಮಗಾರಿಯೂ ಅರ್ಧಕ್ಕೆ ನಿಂತಿದೆ.
"

ತಾಲೂಕಿನ ಗರಗ ಕ್ರಾಸ್​ನಿಂದ ರಾಜ್ಯ ಹೆದ್ದಾರಿ ಅಗಲೀಕರಣ ಮತ್ತು ಮಹಾದ್ವಾರ ನಿರ್ಮಾಣಕ್ಕೆ 2022ರಲ್ಲಿ ಭೂಮಿ ಪೂಜೆ ನೆರವೇರಿಸಲಾಗಿತ್ತು. ಲೋಕೋಪಯೋಗಿ ಇಲಾಖೆಯಿಂದ ರಾಜ್ಯ ಹೆದ್ದಾರಿ ಅಗಲೀಕರಣ ಕಾಮಗಾರಿಯೂ ಅರೆಬರೆಯಾಗಿದೆ. ಮಹಾದ್ವಾರ ನಿರ್ಮಾಣವನ್ನೂ ಅರ್ಧಕ್ಕೆ ನಿಲ್ಲಿಸಿದ್ದಾರೆ. ಗುತ್ತಿಗೆದಾರರ ಹಣ ಬಾಕಿ ಉಳಿಸಿಕೊಂಡಿರುವ ಸರ್ಕಾರದ ಬೊಕ್ಕಸದಲ್ಲಿ ದುಡ್ಡು ಇಲ್ಲ ಎಂಬುದಕ್ಕೆ ಇದೂ ಒಂದು ನಿದರ್ಶನ.

— ಅಮೃತ ದೇಸಾಯಿ, ಮಾಜಿ ಶಾಸಕ