ganja ಗದಗ ರೈಲ್ವೆ ಸ್ಟೇಷನ್‌ 
ಧಾರವಾಡ

ganja ವಾರಸುದಾರರಿಲ್ಲದ ಬ್ಯಾಗ್‌ನಲ್ಲಿ ಗಾಂಜಾ ಪತ್ತೆ

ಮರಿದೇವ ಹೂಗಾರ

ಹುಬ್ಬಳ್ಳಿ: ವಾರಸುದಾರರಿಲ್ಲದ ಬ್ಯಾಗ್‌ನಲ್ಲಿ 2 ಲಕ್ಷ ರೂ. ಮೌಲ್ಯದ 4 ಕೆಜಿ ಗಾಂಜಾ ganja ಗದಗ ರೈಲ್ವೆ ಸ್ಟೇಷನ್‌ನಲ್ಲಿ ಪತ್ತೆಯಾಗಿದೆ.

ರೈಲ್ವೆ ಪೊಲೀಸರು ಹಾಗೂ ರೈಲ್ವೆ ರಕ್ಷಣಾ ಪಡೆ ಜಂಟಿಯಾಗಿ ತಪಾಸಿಸುವ ವೇಳೆ ಶಾಲಿಮಾರ್ ವಾಸ್ಕೋಡಗಾಮಾ ಶಾಲಿಮಾರ್ ಎಕ್ಸ್‌ಪ್ರೆಸ್ ರೈಲಿನ ಜನರಲ್ ಬೋಗಿಯಲ್ಲಿ ಬ್ಯಾಗ್ ಪತ್ತೆಯಾಗಿದೆ.
ಪೊಲೀಸ್ ಅಧಿಕಾರಿಗಳಾದ ಪುಟ್ಟಸ್ವಾಮಿ ಗೌಡ, ಎಸ್.ಯು. ಕಲಬುರ್ಗಿ, ಎಸ್.ಎಸ್. ಚೌಕಿಮಠ, ಶರಣಪ್ಪ ನೇತೃತ್ವದ ತಂಡ ಪತ್ತೆ ಹಚ್ಚಿದ್ದು, ಗದಗ ರೈಲ್ವೆ ಸ್ಟೇಷನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ.