Ganig samaj ಅಣ್ಣಿಗೇರಿ ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ದೇವರಾಜ ದಾಡಿಬಾವಿ ಅವರು ಅಖಿಲ ಭಾರತ ಗಾಣಿಗ ಸಂಘದ ಜಿಲ್ಲಾ ಪದಾಧಿಕಾರಿಗಳನ್ನು ಸನ್ಮಾನಿಸಿದರು. ಗುರುಶಾಂತ ಗಾಣಿಗೇರ, ವೈ.ವೈ. ಗಣಿ, ಸುರೇಶ ಗಾಣಿಗೇರ, ಜಗದೀಶ ಚವಡಿ, ಹನುಮಂತ, ಸುಭಾಸ್ ಬೂದಿಹಾಳ, ಶಿವರಾಜ ಮಂಟೂರ ಇತರರು ಇದ್ದರು.
ಹುಬ್ಬಳ್ಳಿ: Ganig samaj ನವಲಗುಂದ ವಿಧಾನಸಭಾ ಕ್ಷೇತ್ರದ ವೀರಶೈವ ಲಿಂಗಾಯತ ಸಮಾಜದ ಮುಖಂಡ ಹಾಗೂ ಅಣ್ಣಿಗೇರಿ ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ದೇವರಾಜ ದಾಡಿಬಾವಿ ಅವರು ಅಖಿಲ ಭಾರತ ಗಾಣಿಗ ಸಂಘದ ಜಿಲ್ಲಾ ಪದಾಧಿಕಾರಿಗಳಿಗೆ ಸನ್ಮಾನಿಸಿದರು.
ವೀರಶೈವ ಲಿಂಗಾಯತ ಸಮಾಜದ ಪ್ರಮುಖ ಭಾಗವಾದ ಗಾಣಿಗ ಸಮಾಜ ಸಂಘಟನೆಯು ಯಶಸ್ವಿಯಾಗಲಿ ಎಂದು ಅವರು ಹಾರೈಸಿದರು.
ಗಾಣಿಗ ಸಂಘದ ಜಿಲ್ಲಾ ಅಧ್ಯಕ್ಷ ಗುರುಶಾಂತ ಗಾಣಿಗೇರ, ರಾಜ್ಯ ಪ್ರಧಾನ ಕಾರ್ಯದರ್ಶಿ ವೈ.ವೈ. ಗಣಿ, ಉಪಾಧ್ಯಕ್ಷ ಸುರೇಶ ಗಾಣಿಗೇರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಗದೀಶ ಚವಡಿ, ಖಜಾಂಚಿ ಹನುಮಂತ ಹರ್ತಿ, ಉಪಾಧ್ಯಕ್ಷ ಸುಭಾಸ್ ಬೂದಿಹಾಳ, ಶಿವರಾಜ ಮಂಟೂರ, ಮಾಂತೇಶ ಹಂಚಿನಾಳ, ಸಂಘಟನಾ ಕಾರ್ಯದರ್ಶಿ ರಾಜು ಹುನಗುಂದ ಇತರರನ್ನು ಸನ್ಮಾನಿಸಲಾಯಿತು.
ಸಮಾಜದ ಮುಖಂಡ ಹು-ಧಾ ಮಹಾನಗರ ಬಿಜೆಪಿ ಅಧ್ಯಕ್ಷ ತಿಪ್ಪಣ್ಣ ಮಜ್ಜಗಿ, ಗಂಗಾಧರ ಗಾಣಿಗೇರ, ದಿಶಾ ಕಮಿಟಿ ನಿರ್ದೇಶಕಿ ಯಲ್ಲಮ್ಮ ಗಾಣಿಗೇರ, ಲೋಕನಾಥ ಹೆಬಸೂರ, ಗ್ರಾಪಂ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಳ್ಳಿ, ಷಣ್ಮುಖ ಗುಂಜಾಳ, ಜಗದೀಶ ದೊಡ್ಡಗಾಣಿಗೇರ, ಶಿವಯೋಗಿ ಗಾಣಿಗೇರ, ವೀರಶೈವ ಲಿಂಗಾಯತ ಸಮಾಜದ ಗುರು ಹಿರಿಯರು, ಯುವ ಮಿತ್ರರು ಉಪಸ್ಥಿತರಿದ್ದರು.