ganesha meravanige 7 ದಿನಗಳವರೆಗೆ ಪ್ರತಿಷ್ಠಾಪನೆಯಾಗಿದ್ದ ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆ ಹುಬ್ಬಳ್ಳಿಯಲ್ಲಿ ಭಾನುವಾರ ನಡೆಯಿತು. 
ಧಾರವಾಡ

ganesha meravanige 7ನೇ ದಿನದ ಗಣೇಶ ಮೂರ್ತಿಗಳ ವಿಸರ್ಜನೆ

ಮರಿದೇವ ಹೂಗಾರ
ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ 7 ganesha meravanige ದಿನಗಳವರೆಗೆ ಪ್ರತಿಷ್ಠಾಪನೆಯಾಗಿದ್ದ ಗಣೇಶ ಮೂರ್ತಿಗಳನ್ನು ಭಾನುವಾರ ಅದ್ದೂರಿ ಮೆರವಣಿಗೆ ಮಾಡಿ ವಿಸರ್ಜನೆ ಮಾಡಲಾಯಿತು.
ಮನೆ ಗಣಪತಿಗಳಿಗೆ ಬೆಳಗ್ಗೆಯಿಂದಲೇ ಪೂಜೆ ಸಲ್ಲಿಸಲಾಯಿತು. ಬಳಿಕ ಕುಟುಂಬಸ್ಥರು ಹಾಗೂ ಮಕ್ಕಳು ಒಟ್ಟಾಗಿ ಮೂರ್ತಿಯನ್ನು ಹೊತ್ತುಕೊಂಡು ಸಮೀಪದ ಕೆರೆ, ಬಾವಿ ಹಾಗೂ ಮಹಾನಗರ ಪಾಲಿಕೆ ನಿರ್ಮಿಸಿದ್ದ ವಿಸರ್ಜನಾ ತೊಟ್ಟಿಗಳತ್ತ ಸಾಗಿದರು. ದಾರಿಯುದ್ದಕ್ಕೂ ಗಣಪತಿ ಬಾಪ್ಪಾ ಮೋರಯಾ, ಮುಂದಿನ ವರ್ಷ ಬೇಗ ಬಾ ಎಂಬ ಘೋಷಣೆಗಳು ಮೊಳಗಿದವು.
ಸಾರ್ವಜನಿಕ ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆ ಮತ್ತಷ್ಟು ಸಂಭ್ರಮಕ್ಕೆ ಸಾಕ್ಷಿಯಾಯಿತು. ಉಣಕಲ್, ಶ್ರೀನಗರ, ಕೇಶ್ವಾಪುರ, ಹಳೇಹುಬ್ಬಳ್ಳಿ, ಗೋಪನಕೊಪ್ಪ ಸೇರಿ ವಿವಿಧ ಬಡಾವಣೆಗಳ ಪ್ರತಿಷ್ಠಾಪಿಸಿದ್ದ ವಿವಿಧ ಯುವಕ ಮಂಡಳಗಳ ಸದಸ್ಯರು, ಡಿಜೆ ಸದ್ದಿನೊಂದಿಗೆ ಹೆಜ್ಜೆ ಹಾಕಿ ಮೆರವಣಿಗೆ ನಡೆಸಿದರು. ಯುವಕರು, ಯುವತಿಯರು ಹಾಡುಗಳಿಗೆ ನೃತ್ಯ ಮಾಡಿ ಸಂಭ್ರಮಿಸಿದರು.