ganesha bhavi ಹುಬ್ಬಳ್ಳಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಗಳ ಮಹಾ ಮಂಡಳದ ನಿಯೋಗವು ಹುಬ್ಬಳ್ಳಿಯ ಗಣೇಶ ವಿಸರ್ಜನೆ ಬಾವಿಗೆ ಗುರುವಾರ ಭೇಟಿ ನೀಡಿ ಪರಿಶೀಲಿಸಿತು.
ಹುಬ್ಬಳ್ಳಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಗಳ ಮಹಾ ಮಂಡಳದ ನಿಯೋಗವು
ಇಲ್ಲಿಯ ಹೊಸೂರು, ಇಂದಿರಾ ಗಾಜಿನ ಮನೆ ಆವರಣ ಹಾಗೂ ವಿವಿಧ ಬಡಾವಣೆಯ ಶ್ರೀ ಗಣೇಶ ವಿಸರ್ಜನೆ ಭಾವಿಗಳಿಗೆ ಗುರುವಾರ ಭೇಟಿ ನೀಡಿತು. ಬಾವಿಗಳನ್ನು ಸ್ವಚ್ಛಗೊಳಿಸಿ, ನೀರು ತುಂಬಿಸುವುದು ಸೇರಿ ಮೂಲ ಸೌಕರ್ಯ ಒದಗಿಸಬೇಕು ಎಂದು ಮಹಾನಗರ ಪಾಲಿಕೆಗೆ ಒತ್ತಾಯಿಸಿತು.
ಮಹಾಮಂಡಳದ ಅಧ್ಯಕ್ಷ ಮೋಹನ ಲಿಂಬಿಕಾಯಿ ಮಾತನಾಡಿ, ಗಣೇಶ ವಿಸರ್ಜನೆ ದಿನವಾದ, 5, 7, 9, 11 ಮತ್ತು 12ನೇ ದಿನದಂದು ದೊಡ್ಡದಾದ ಗಣೇಶ ವಿಗ್ರಹಳನ್ನು ಎತ್ತಲು ಮತ್ತು ವಿಸರ್ಜಿಸಲು ಕ್ರೇನ್‌ಗಳನ್ನು ಕಲ್ಪಿಸಬೇಕು. ಬಾವಿ ಸುತ್ತಲೂ ವಿದ್ಯುತ್ ದೀಪಗಳನ್ನು ಅಳವಡಿಸಬೇಕು. ನೀರು ಸೋರಿಕೆಯಾಗದಂತೆ ತಡೆಯಬೇಕು. ಬಾವಿ ಸುತ್ತಲೂ ಕುಳಿತುಕೊಳ್ಳಲು ಆಸನ ನಿರ್ಮಿಸಬೇಕು. ಪಿ.ಬಿ. ರೋಡ್‌ಗೆ ಹೊಂದುಕೊಂಡು ಗಣೇಶ ವಿಗ್ರಹಗಳನ್ನು ಸ್ವಾಗತಿಸಲು ಸುಂದರವಾದ ಮಹಾದ್ವಾರ ನಿರ್ಮಿಸಬೇಕು. ಬಾವಿ ಸುತ್ತಲೂ ಕಬ್ಬಿಣದ ಬೇಲಿ ಮತ್ತು ಗಣೇಶ ವಿಸರ್ಜನಾ ವೇದಿಕೆ ನವೀಕರಣವಾಗಬೇಕು. ಮೆಟ್ಟಿಲುಗಳನ್ನು ನಿರ್ಮಿಸಬೇಕು. ಮೂರು ಕಡೆ ಗಣೇಶ ವಿಸರ್ಜನೆ ಬಾವಿ ಎಂಬ ದೊಡ್ಡ ನಾಮಫಲಕ ಹಾಕಬೇಕು ಎಂದು ಒತ್ತಾಯಿಸಿದರು.
ಪ್ರಮುಖರಾದ ಶಾಂತರಾಜ ಪೋಳ, ಅಮರೇಶ ಹಿಪ್ಪರಗಿ, ಎಸ್.ಎಸ್. ಕಮಡೊಳ್ಳಿಶೆಟ್ಟರ್, ಅನಿಲ ಬೇವಿನಕಟ್ಟಿ, ಸಂತೋಷ ಕಾಟವೆ, ಅನಿಲ ಕವಿಶೆಟ್ಟಿ, ಚಂದ್ರಕಾಂತ ನವಲಗುಂದ, ಪ್ರೊ.ಜಿ.ಎಸ್. ಪಲ್ಲೇದ, ಬಸವರಾಜ ಹೊಳೆಯಣ್ಣವರ, ಪ್ರಕಾಶ ಹೊಸಮನಿ, ಈಶ್ವರ ನಾಯ್ಕರ, ಈರಣ್ಣ ಪಾಳೆದ, ರಾಜು ಕರಕಣ್ಣವರ, ಎಸ್.ಎಂ. ಅಂಗಡಿ, ಪ್ರಮೋದ ಬದ್ದಿ ಇತರರಿದ್ದರು.
ಶ್ರೀಧರ ಪೂಜಾರಿ ಸ್ವಾಗತಿಸಿದರು. ರೋಹನ ಗೊಂದಕರ ವಂದಿಸಿದರು.