ganesha award ಹುಬ್ಬಳ್ಳಿಯಲ್ಲಿ ಇತ್ತೀಚೆಗೆ ಹುಬ್ಬಳ್ಳಿ ಸೇವಾರತ್ನ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಲಾಯಿತು.
ಹುಬ್ಬಳ್ಳಿ: ಶ್ರೀ ಗಜಾನನ ಮಹಾಮಂಡಳ ganesha award ವತಿಯಿಂದ ಇಲ್ಲಿಯ ದೇಶಪಾಂಡೆ ನಗರದ ಸವಾಯಿ ಗಂಧರ್ವ ಸಭಾಂಗಣದಲ್ಲಿ ಇತ್ತೀಚೆಗೆ ಹುಬ್ಬಳ್ಳಿ ಸೇವಾರತ್ನ ಪ್ರಶಸ್ತಿ ಪ್ರದಾನ, 150ಕ್ಕೂ ಹೆಚ್ಚು ಗಜಾನನ ಯುವಕ ಮಂಡಳಿಗಳಿಗೆ ರಜತ ಗಣಾಧ್ಯಕ್ಷ ಗಜಾನನ ಯುವಕ ಮಂಡಳ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ವಿಶ್ವ ಹಿಂದೂ ಪರಿಷತ್‌ನ ರಾಷ್ಟ್ರೀಯ ಕಾರ್ಯದರ್ಶಿ ಗೋಪಾಲಜಿ ಉದ್ಘಾಟಿಸಿ ಮಾತನಾಡಿ, ಧಾರ್ಮಿಕ ಪರಂಪರೆ, ಸಮಾಜ ಸಂಘಟನೆ, ಸೇವಾ ಮನೋಭಾವವನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು. ಭಾರತಕ್ಕೆ ಅದುವೇ ಸಾಂಸ್ಕೃತಿಕ ಮೌಲ್ಯ ಎಂದು ವಿಚಾರ ವಿನಿಮಯ ಮಾಡಿಕೊಂಡರು.
ಮೂರುಸಾವಿರ ಮಠದ ಶ್ರೀ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಮಹಾಮಂಡಳದ ಅಧ್ಯಕ್ಷ ಡಿ. ರಘು ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಮಂಜುನಾಥ ಕೊಂಡಪಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಉದ್ಯಮಿಗಳಾದ ಮಹಾದೇವ ಕರಮರಿ, ಗೋವಿಂದ ಜೋಶಿ, ಎಚ್.ಎನ್. ನಂದಕುಮಾರ, ಡಾ.ವಿ.ಎಸ್.ವಿ. ಪ್ರಸಾದ, ಜಿ.ಕೆ. ರತ್ನಕುಮಾರ, ಗೌತಮ ಬಾಫಣಾ, ಜಿತೇಂದ್ರ ಮಜೇಥಿಯಾ, ಪೂರ್ಣಚಂದ್ರ ಘಂಟಸಾಲ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
50ಕ್ಕೂ ಅಧಿಕ ಗಜಾನನ ಯುವಕ ಮಂಡಳಿಗಳಿಗೆ ರಜತ ಗಣಾಧ್ಯಕ್ಷ ಗಜಾನನ ಯುವಕ ಮಂಡಳ ಪ್ರಶಸ್ತಿ ನೀಡಲಾಯಿತು.
ವಿಧಾನಸಭೆ ಪ್ರತಿಪಕ್ಷ ಉಪ ನಾಯಕ ಅರವಿಂದ ಬೆಲ್ಲದ, ಎಂಎಲ್‌ಸಿ ಲಿಂಗರಾಜ ಪಾಟೀಲ, ಮಹಾಮಂಡಳದ ಪದಾಧಿಕಾರಿಗಳಾದ ರತ್ನ ಗಂಗಣ್ಣವರ, ಸುಮಾ ಹಿರೇಮಠ, ಗಜಾನನ ಯರಕದ, ವೆಂಕಟೇಶ ಬೊಂಗಾಳೆ, ಸಂಗೀತಾ ಬದ್ದಿ, ಪದ್ಮಾವತಿ ಬಾಗಲಕೋಟ, ಮಲ್ಲಿಕಾರ್ಜುನ ಮರ್ಲಿಂಗೌಡರ, ಚನ್ನಪ್ಪ ಸಿ ಎಂ, ಮೋಹನ ಬರುಡೆ, ವಸಂತಾ ಡಂಗನವರ, ಸಂತೋಷ ಖೋದನಪುರ, ಸಿದ್ದರಾಜ ಕುಂದಗೋಳ ಉಪಸ್ಥಿತರಿದ್ದರು.
ಸುಹಾಸಿನಿ ದೇಸಾಯಿ ನಿರೂಪಿಸಿದರು. ಗಿರಿಜಾ ಹೂಗಾರ ಸ್ವಾಗತಿಸಿದರು.