ಹುಬ್ಬಳ್ಳಿಯ ಸಿದ್ದಕಲ್ಯಾಣ ನಗರದ ganapati devaruಶ್ರೀ ಗಣಪತಿ ದೇವರ 25ನೇ ವರ್ಷದ ವಾರ್ಷಿಕೋತ್ಸವ ನಿಮಿತ್ತ ಹೋಮ-ಹವನ ನೆರವೇರಿಸಲಾಯಿತು.
ಹುಬ್ಬಳ್ಳಿ: ಇಲ್ಲಿಯ ಉಣಕಲ್‌ನ ಸಿದ್ದಕಲ್ಯಾಣ ನಗರದ ಶ್ರೀ ಗಣಪತಿ ದೇವರ ganapati devaru 25ನೇ ವರ್ಷದ ವಾರ್ಷಿಕೋತ್ಸವವನ್ನು ಶುಕ್ರವಾರ ಅದ್ದೂರಿಯಾಗಿ ಆಚರಿಸಲಾಯಿತು.
ದೇವಸ್ಥಾನದಲ್ಲಿ ಬೆಳಗ್ಗೆಯಿಂದ ಗಣಹೋಮ, ಪಂಚಾಮೃತ ಅಭಿಷೇಕ, ಮಹಾಗಣಪತಿ ಪೂಜೆ, ಅಲಂಕಾರ ಸೇವೆ, ವಿಶೇಷ ಆರತಿ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ನಂತರ ಭಕ್ತರಿಗೆ ತೀರ್ಥ, ಪ್ರಸಾದ ಹಾಗೂ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು. ಭಕ್ತರು ಸರತಿ ಸಾಲಿನಲ್ಲಿ ನಿಂತು ಗಣಪತಿ ದೇವರ ದರ್ಶನ ಪಡೆದರು.
ಡಿಎಲ್ಆರ್‌ಎಂ ಫೌಂಡೇಷನ್ ಅಧ್ಯಕ್ಷ ರಮೇಶ ಮಹಾದೇವಪ್ಪನವರ, ಅರ್ಚಕರು, ನಿವಾಸಿಗಳು ಭಾಗವಹಿಸಿದ್ದರು.