meditation ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಹಜ ಯೋಗ ಧ್ಯಾನ ಸಂಸ್ಥೆಯ ಸಂಚಾಲಕಿ ಡಾ. ಪುಷ್ಪಾ ಪಾಣಿಗಟ್ಟಿ.
- ರಷ್ಯಾದ ಸಹಜ ಯೋಗಿಗಳಿಂದ ಆತ್ಮಾನುಭವ ಸಂಗೀತ ನೃತ್ಯ ಕಾರ್ಯಕ್ರಮ.
- ಕಲಘಟಗಿಗೆ ಭೇಟಿ ನೀಡುವ ರಷ್ಯಾದ ಯೋಗಿಗಳು.
- ಪ್ರತಿವಾರ ಉಚಿತ ಧ್ಯಾನ ಶಿಬಿರಗಳನ್ನು ಆಯೋಜಿಸಲಾಗುವುದು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸಂಸ್ಥೆಯ ಸಂಚಾಲಕಿ ಡಾ. ಪುಷ್ಪಾ ಪಾಣಿಗಟ್ಟಿ, ರಷ್ಯಾದ ಅಂದಾಜು 40 ಯೋಗಿಗಳು ಜನರಲ್ಲಿ ಸಹಜಯೋಗದ ಬಗ್ಗೆ ಜಾಗೃತಿ ಮೂಡಿಸುವುದಕ್ಕಾಗಿ ದೇಶಾದ್ಯಂತ ಪ್ರವಾಸ ಕೈಗೊಂಡಿದ್ದಾರೆ ಎಂದರು.
ಡಿ. 18ರಂದು ಕಲಘಟಗಿಗೆ ಭೇಟಿ ನೀಡುವ ರಷ್ಯಾದ ಯೋಗಿಗಳು, ಅಲ್ಲಿಯೂ ಧ್ಯಾನ, ಸಂಗೀತ ಹಾಗೂ ನೃತ್ಯ ಕಾರ್ಯಕ್ರಮ ನೀಡುವರು. ಹುಬ್ಬಳ್ಳಿ ಹಾಗೂ ಧಾರವಾಡದ ವಿವಿಧೆಡೆ ಪ್ರತಿವಾರ ಉಚಿತ ಧ್ಯಾನ ಶಿಬಿರಗಳನ್ನು ಆಯೋಜಿಸಲಾಗುವುದು ಎಂದರು.
ರಾಜು ಮಂಗಳವಾಡಿ, ರವಿ ನಾಯಕ, ಪಂಚಾಕ್ಷರಿ ಮಠದ, ಶಿವು ನಂದಿಗೇರಿ ಸುದ್ದಿಗೋಷ್ಠಿಯಲ್ಲಿ ಇದ್ದರು.