ಕಲಘಟಗಿ ಪೊಲೀಸರು ಕಳ್ಳರಿಂದ ವಶಪಡಿಸಿಕೊಂಡ ಚಿನ್ನಾಭರಣಗಳು. separate theft cases ಸಿಪಿಐ ಶ್ರೀಶೈಲ ಕೌಜಲಗಿ ನೇತೃತ್ವದಲ್ಲಿ ಮಹಾಂತೇಶ ಪಿ.ಐ, ಪಿಎಸ್‌ಐ ಸಿ.ಎನ್. ಕರವೀರಪ್ಪನವರ, ಎ.ಎಂ. ನವಲೂರು, ಶಂಕರ ಮುತ್ತಲಗೇರಿ, ಲೋಕೇಶ ಬೆಂಡಿಕಾಯಿ, ಮಹಾಂತೇಶ ಎನ್. ಇದ್ದರು. 
ಧಾರವಾಡ

ಮೂರು ಪ್ರತ್ಯೇಕ ಕಳವು ಪ್ರಕರಣ ನಾಲ್ವರ ಬಂಧನ

ಬಸವರಾಜ ವೀರಪ್ಪ ಗರಗ

ಪ್ರಮುಖ ಮುಖ್ಯಾಂಶಗಳು

  • ಕಲಘಟಗಿ ಠಾಣೆ ಪೊಲೀಸರ ಯಶಸ್ವಿ ಕಾರ್ಯಾಚರಣೆ
ಕಲಘಟಗಿ: ತಾಲೂಕು ಹಾಗೂ ಧಾರವಾಡ ಜಿಲ್ಲೆಯ ವಿವಿಧೆಡೆ ಚಿನ್ನಾಭರಣ ಹಾಗೂ ನಗದು ಕಳುವಿನ ಪ್ರಕರಣಗಳನ್ನು separate theft cases ಭೇದಿಸುವಲ್ಲಿ ಕಲಘಟಗಿ ಪೊಲೀಸರು ಯಶಸ್ವಿಯಾಗಿದ್ದಾರೆ. 
ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ನಾಲ್ವರನ್ನು ಬಂಧಿಸಿ ಅವರಿಂದ 85 ಗ್ರಾಂ ಬಂಗಾರ ಹಾಗೂ 200 ಗ್ರಾಂ ತೂಕದ ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ. 
ಮೊದಲ ಪ್ರಕರಣದಲ್ಲಿ 62 ಗ್ರಾಂ ತೂಕದ 4,75,000 ರೂ. ಕಿಮ್ಮತ್ತಿನ ಚಿನ್ನಾಭರಣ ಮತ್ತು 270 ಗ್ರಾಂ ತೂಕದ 18,500 ರೂ, ಮೌಲ್ಯದ  ಬೆಳ್ಳಿ ಆಭರಣಗಳು ಹಾಗೂ 8,500 ರೂ. ನಗದು ವಶಕ್ಕೆ ಪಡೆಯಲಾಗಿದೆ. 
ಎರಡನೆಯ ಪ್ರಕರಣದಲ್ಲಿ 10 ಗ್ರಾಂ ತೂಕದ 59,000 ಮೌಲ್ಯದ ಬಂಗಾರದ ನೆಕ್ಲೆಸ್, 2 ಗ್ರಾಂ ಬಂಗಾರದ 25,000 ಮೌಲ್ಯದ ಉಂಗುರ, 10,000 ಮೌಲ್ಯದ 2 ಗ್ರಾಂ ತೂಕದ ಒಂದು ಜೊತೆ ಬಂಗಾರದ ಕಿವಿಯೋಲೆ, 32,500 ರೂ. 6.5 ಗ್ರಾಂ ತೂಕದ ಕೊರಳಲ್ಲಿ ಹಾಕುವ ಬಂಗಾರದ ಚೈನ್, 4 ಗ್ರಾಂ ತೂಕದ 20,000 ಮೌಲ್ಯದ ಬಂಗಾರದ ಉಂಗುರ ಹಾಗೂ 11000 ರೂ. ನಗದು ವಶಕ್ಕೆ ಪಡೆಯಲಾಗಿದೆ. 
ಮೂರನೇ ಪ್ರಕರಣದಲ್ಲಿ 5 ಗ್ರಾಂ ಬಂಗಾರದ 55,000 ರೂ. ಮೌಲ್ಯದ ಸುತ್ತುಂಗುರ, 2 ಗ್ರಾಂ ಬಂಗಾರದ 25,000 ರೂ. ಮೌಲ್ಯದ ಉಂಗುರ, ಕೆಂಪು ಹರಳಿನ 5,000 ರೂ. ಮೌಲ್ಯದ ಉಂಗುರವನ್ನು ವಶಪಡಿಸಿಕೊಳ್ಳಲಾಗಿದೆ. 
ಈ ಮೂರು ಪ್ರಕರಣಗಳಲ್ಲಿ ಆರೋಪಿಗಳಾದ ವಿಕ್ರಂ(ರಾಜು) ಕಿತ್ತೂರಕರ, ಪ್ರೇಮ ಬದ್ದಿ, ಪವನ ಮೆರವಾಡ, ಮಂಜುನಾಥ ಇದ್ದಿಕಾರ ಎಂಬುವವರ ಕೃತ್ಯವನ್ನು ಪತ್ತೆ ಹಚ್ಚಿ ಅವರಿಂದ 85 ಗ್ರಾಂ ಬಂಗಾರ ಮತ್ತು 200 ಗ್ರಾಂ ತೂಕದ ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. 
ಜಿಲ್ಲಾ ಎಸ್ಪಿ ಗುಂಜನ ಆರ್ಯ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಶಿವಾನಂದ ಕಟಗಿ, ಪೊಲೀಸ್ ಉಪಾಧೀಕ್ಷಕರು ವಿನೋದ ಮುಕ್ತದಾರ ಮಾರ್ಗದರ್ಶನದಲ್ಲಿ ಕಲಘಟಗಿ ಸಿಪಿಐ ಶ್ರೀಶೈಲ ಕೌಜಲಗಿ ನೇತೃತ್ವದಲ್ಲಿ, ಮಹಾಂತೇಶ ಪಿ.ಐ., ಪಿಎಸ್‌ಐ ಸಿ.ಎನ್. ಕರವೀರಪ್ಪನವರ, ಎ.ಎಮ್. ನವಲೂರು, ಶಂಕರ ಮುತ್ತಲಗೇರಿ, ಲೋಕೇಶ ಬೆಂಡಿಕಾಯಿ, ಮಹಾಂತೇಶ ಎನ್., ಮಹಮ್ಮದಹುಸೇನ್ ಯಲಿಗಾರ, ಮಲ್ಲಿಕಾರ್ಜುನ ಎಂ., ಗೋಪಾಲ ಪಿರಗಿ, ಪ್ರಕಾಶ ಘೋಳಪ್ಪಗೌಡ್ರ, ಯಶವಂತ ಹಂಚಿನಮನಿ, ಮಹಾಂತೇಶ ಹಡಪದ, ರಮೇಶ ನೇಕಾರ, ಜಾವೀದ್ ಇಟಗಿ, ಆರೀಫ್ ಗೋಲಂದಾಜ, ವಿಟ್ಟಲ ಡಂಗನವರ ಕಾರ್ಯಚರಣೆಯಲ್ಲಿದ್ದರು. 
ಎಲ್ಲ ಪ್ರಕರಣಗಳ ಆರೋಪಿಗಳನ್ನು ಪತ್ತೆ ಮಾಡಿದ ಎಲ್ಲಾ ಅಧಿಕಾರಿ ಹಾಗೂ ಸಿಬ್ಬಂದಿಯವರಿಗೆ ಪೊಲೀಸ್ ಅಧೀಕ್ಷಕರು ಶ್ಲಾಘಿಸಿದ್ದಾರೆ.