ಧಾರವಾಡದಲ್ಲಿ ಫುಟ್​ಪಾತ್​ ಅತಿಕ್ರಮಣ 
ಧಾರವಾಡ

ಫುಟ್​ಪಾತ್​ ನುಂಗಣ್ಣರ ಹಾವಳಿ

ಮಂಜುನಾಥ ಅಂಗಡಿ
ಧಾರವಾಡ: ನಗರದಲ್ಲಿ ವಾಹನಗಳ ಸಂಖ್ಯೆ ದಿನೇದಿನೇ ಹೆಚ್ಚುತ್ತಲೇ ಇದೆ. ಇದರೊಂದಿಗೆ ಬೀದಿಬದಿ ವ್ಯಾಪಾರಸ್ಥರ ಸಂಖ್ಯೆಯೂ ಏರುತ್ತಿದೆ. ಪರಿಣಾಮ ನಗರದ ಕೆಲವೆಡೆ ವಾಹನ ಸವಾರರು, ಮತ್ತೆ ಕೆಲವೆಡೆ ಬೀದಿಬದಿ ವ್ಯಾಪಾರಸ್ಥರುಫುಟ್​ಪಾತ್​ ಅತಿಕ್ರಮಣ ಮಾಡುತ್ತಿದ್ದಾರೆ. ಅನೇಕ ಕಡೆಫುಟ್​ಪಾತ್​ಗಳಲ್ಲಿ ಪಾದಚಾರಿಗಳು ನಡೆದಾಡಲೂ ದಾರಿ ಇಲ್ಲದೆ ರಸ್ತೆಯಲ್ಲಿ ಸಂಚರಿಸಬೇಕಾದ ಅನಿವಾರ್ಯತೆ ಇದೆ.
ಧಾರವಾಡ ವಿಜಯಾ ರಸ್ತೆಯ ಸಿಬಿಟಿ ಸುತ್ತಮುತ್ತ ರಸ್ತೆ ಪಕ್ಕದ ಫುಟ್​ಪಾತ್​ ನುಂಗಣ್ಣರ ಪಾಲಾಗಿದೆ. ಅಂಗಡಿಕಾರರು ತಾವು ಮಾರಾಟ ಮಾಡುವ ಸಾಮಗ್ರಿಗಳನ್ನು ಫುಟ್​ಪಾತ್​ ಮೇಲಿಡುತ್ತಿದ್ದಾರೆ. ಹೀಗೆ ಫುಟ್​ಪಾತ್​ ಅತಿಕ್ರಮಣವಾದರೂ ಪಾಲಿಕೆ ಅಧಿಕಾರಿಗಳು ಕಣ್ಣು ಬಿಟ್ಟು ನೋಡುತ್ತಿಲ್ಲ. ಇಂಥ ಅಂಗಡಿಕಾರರ ಮೇಲೆ ಕ್ರಮ ಜರುಗಿಸಿ ದಂಡ ವಿಧಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯ.
ಮತ್ತೊಂದೆಡೆ ಸುಭಾಸ ರಸ್ತೆಯ ಫುಟ್​ಪಾತ್​ಗಳಂತೂ ನಡೆದಾಡಲು ಜಾಗವಿಲ್ಲದಂತೆ ಅತಿಕ್ರಮಣವಾಗಿವೆ. ಹಣ್ಣಿನ ವ್ಯಾಪಾರಸ್ಥರು ರಸ್ತೆ ಬದಿ ಹಾಕಿ ವ್ಯಾಪಾರ ಮಾಡುತ್ತಿದ್ದಾರೆ. ಅಷ್ಟಿಷ್ಟು ಉಳಿದ ಫುಟ್​ಪಾತ್​ ಮೇಲೆ ತಮ್ಮ ಸಾಮಗ್ರಿಗಳನ್ನು ಇಟ್ಟು ಅಂಗಡಿಗಳನ್ನು ಕೂಡುತ್ತಿದ್ದಾರೆ.
ಮತ್ತೊಂದೆಡೆ ಎನ್​ಎಂಆರ್​ ಸ್ಕಾನ್​ ಸೆಂಟರ್​ನಿಂದ ಸಿವಿಲ್​ ಕೋರ್ಟ್​ ವೃತ್ತದವರೆಗಿನ ಎರಡೂ ಬದಿಯಲ್ಲಿ ವಾಹನ ಸವಾರರ ಹಾವಳಿ ಹೆಚ್ಚು. ರಸ್ತೆ ಬದಿಯ ುಟ್​ಪಾತ್​ ಅತಿಕ್ರಮಿಸಿರುವ ಬೈಕ್​ಗಳು ಇಲ್ಲಿ ಸಾಮಾನ್ಯ. ಇಲ್ಲಿನ ಬಹುತೇಕ ವಾಣಿಜ್ಯ ಕಟ್ಟಡಗಳಿಗೆ ಪಾಕಿರ್ಂಗ್​ ವ್ಯವಸ್ಥೆ ಇಲ್ಲ. ಸಂಜೆಯಾದರೆ ರಸ್ತೆಯ ಆಚೀಚೆ ಕಾರ್​ಗಳನ್ನು ನಿಲ್ಲಿಸಲಾಗುತ್ತದೆ. ಕೆಲವೊಮ್ಮೆ ುಟ್​ಪಾತ್​ಗಳಲ್ಲೇ ಕಾರ್​ ಪಾಕಿರ್ಂಗ್​ ಮಾಡಲಾಗುತ್ತದೆ.
ನಗರದ ಮಾರುಕಟ್ಟೆ ಪ್ರದೇಶದ ರಸ್ತೆಗಳನ್ನು ಅತಿಕ್ರಮಿಸುವ ಬೀದಿಬದಿ ವ್ಯಾಪಾರಸ್ಥರ ವಿರುದ್ಧ ಪಾಲಿಕೆ ಆಯುಕ್ತರಾಗಿದ್ದ ಮೇಜರ್​ ಸಿದ್ದಲಿಂಗಯ್ಯ ಹಿರೇಮಠ ಕ್ರಮ ಜರುಗಿಸಿದ್ದರು. ರಸ್ತೆ ಅತಿಕ್ರಮಿಸಿದ್ದ ತಳ್ಳುವ ಗಾಡಿಗಳನ್ನು ಹಿಂದಕ್ಕೆ ಸರಿಸಿ ಬಿಳಿ ಪಟ್ಟಿಯಿಂದ ಗುರುತು ಮಾಡಿದ್ದರು. ಅದಾದ ನಂತರ ಪಾಲಿಕೆಯಿಂದ ಈ ರೀತಿಯ ಕ್ರಮವಾಗಿಲ್ಲ.