ಹುಬ್ಬಳ್ಳಿಯಲ್ಲಿ ಆಯೋಜಿಸಿದ್ದ (Football) ಅಚೀವರ್ ಫ್ರೀಡಂ ಟ್ರೋಫಿ-ಕರ್ನಾಟಕ ರಾಜ್ಯ ಆಹ್ವಾನಿತ ಫುಟಬಾಲ್ ಪಂದ್ಯಾವಳಿಯಲ್ಲಿ ಚಾಂಪಿಯನ್ ಆದ ಹುಬ್ಬಳ್ಳಿಯ ಸಿ.ಆರ್-7 ಫುಟಬಾಲ್ ಕ್ಲಬ್ ತಂಡದ ಆಟಗಾರರು. 
ಧಾರವಾಡ

ಸಿ.ಆರ್-7 ಎಫ್​ಸಿ (Football) ಚಾಂಪಿಯನ್

ಸಂತೋಷ ವೈದ್ಯ

ಹುಬ್ಬಳ್ಳಿ: ನಗರದ ನೆಹರು ಮೈದಾನದಲ್ಲಿ

(Football)

ಆಯೋಜಿಸಿದ್ದ ಅಚೀವರ್ ಫ್ರೀಡಂ ಟ್ರೋಫಿ-ಕರ್ನಾಟಕ ರಾಜ್ಯ ಆಹ್ವಾನಿತ ಫುಟಬಾಲ್ ಪಂದ್ಯಾವಳಿಯಲ್ಲಿ ಹುಬ್ಬಳ್ಳಿಯ ಸಿ.ಆರ್-7 ಫುಟಬಾಲ್ ಕ್ಲಬ್ ಚಾಂಪಿಯನ್ ಆಗಿದೆ.

ಭಾನುವಾರ ಅಂತಿಮ ಪಂದ್ಯದಲ್ಲಿ ಸಿ.ಆರ್-7 ಎಫ್​ಸಿ, ಹುಬ್ಬಳ್ಳಿಯ ಪರ್ಪಲ್ ಎಫ್​ಸಿ ವಿರುದ್ಧ 1-0 ಗೋಲುಗಳ ಅಂತರದಿಂದ ಗೆಲುವು ಸಾಧಿಸಿ ಟ್ರೋಫಿ ತನ್ನದಾಗಿಸಿಕೊಂಡಿತು. ಪಂದ್ಯದ 30ನೇ ನಿಮಿಷದಲ್ಲಿ ಮೆಹಬೂಬ್ ಅವರು ಗೆಲುವಿನ ಗೋಲು ಗಳಿಸಿದರು. ಇವರು ಪಂದ್ಯದ ಆಟಗಾರ ಪ್ರಶಸ್ತಿ ಪಡೆದರು.
ಇಂದೇ ನಡೆದ ಮೊದಲ ಸೆಮಿಫೈನಲ್​ನಲ್ಲಿ ಸಿ.ಆರ್-7 ಎಫ್​ಸಿ, ದಾವಣಗೆರೆಯ ಕರುನಾಡು ಎಫ್​ಸಿ ತಂಡವನ್ನು ಟೈ-ಬ್ರೇಕರ್ (ಸಡನ್ ಡೆತ್) ಹಂತದಲ್ಲಿ 5-4 ಗೋಲುಗಳ ಅಂತರದಿಂದ ಸೋಲಿಸಿತು. ವಿಜೇತ ತಂಡಕ್ಕಾಗಿ ಆನಂದ, ಮಂಜು, ರಾಹುಲ್, ಮೆಹಬೂಬ್ ಮತ್ತು ಅಶೋಕ್ ತಲಾ ಒಂದೊಂದು ಗೋಲು ಗಳಿಸಿದರು. ದಾವಣಗೆರೆ ತಂಡಕ್ಕಾಗಿ ಶ್ರೇಯಸ್, ವೇದಾಂತ, ಓಂ ಮತ್ತು ಅಯಾನ್ ಗೋಲು ಬಾರಿಸಿದರು.
ಎರಡನೇ ಸೆಮಿಫೈನಲ್​ನಲ್ಲಿ ಪರ್ಪಲ್ ಎಫ್​ಸಿ, ಧಾರವಾಡದ ಮಿನಿಟ್ಸ್​ಮೆನ್ ಎಫ್​ಸಿ ತಂಡವನ್ನು ಟೈ-ಬ್ರೇಕರ್​ನಲ್ಲಿ 4-2 ಗೋಲುಗಳ ಅಂತರದಿಂದ ಸೋಲಿಸಿತು. ಪರ್ಪಲ್ ಎಫ್​ಸಿ ಪರವಾಗಿ ಇಮ್ಯಾನುಯೆಲ್, ರಾಜೇಶ, ಶೆದ್ರಾಕ್ ಮತ್ತು ಮುಲಾಲ್ ಗೋಲು ಗಳಿಸಿದರು. ಮಿನಿಟ್ಸ್​ಮೆನ್ ಎಫ್​ಸಿ ತಂಡಕ್ಕಾಗಿ ಆಕಾಶ ಮತ್ತು ವಿನೋದ ಗೋಲು ಬಾರಿಸಿದರು.
ಮೂರು ಮತ್ತು ನಾಲ್ಕನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಮಿನಿಟ್ಸ್​ಮೆನ್ ಎಫ್​ಸಿ ತಂಡವು ಕರುನಾಡು ಎಫ್​ಸಿ ತಂಡವನ್ನು ನಿಗದಿತ ಅವಧಿಯಲ್ಲಿ 2-0 ಗೋಲುಗಳ ಅಂತರದಿಂದ ಸೋಲಿಸಿ 3ನೇ ಸ್ಥಾನ ಗಳಿಸಿತು.
ವೈಯಕ್ತಿಕ ಪ್ರಶಸ್ತಿಗಳು:: ಗೋಲ್ಡನ್ ಗ್ಲೌಸ್: ಅಜಯ (ಮಿನಿಟ್ಸ್​ಮೆನ್ ಎಫ್​ಸಿ ಧಾರವಾಡ), ಗೋಲ್ಡನ್ ಬೂಟ್: ರಾಜೇಶ (ಪರ್ಪಲ್ ಎಫ್​ಸಿ ಹುಬ್ಬಳ್ಳಿ), ಗೋಲ್ಡನ್ ಬಾಲ್: ಮೆಹಬೂಬ್ (ಸಿ.ಆರ್-7 ಎಫ್​ಸಿ ಹುಬ್ಬಳ್ಳಿ).
ಸ್ಟುಡೆಂಟ್ ಫುಟಬಾಲ್ ಅಸೋಸಿಯೇಷನ್ ಆಫ್ ಕರ್ನಾಟಕ, ಸ್ಟುಡೆಂಟ್ ಒಲಿಂಪಿಕ್ ಅಸೋಸಿಯೇಷನ್ ಆಫ್ ಕರ್ನಾಟಕ ಮತ್ತು ಕರ್ನಾಟಕ 7 ಎ ಸೈಡ್ ಫುಟಬಾಲ್ ಅಸೋಸಿಯೇಷನ್, ಅಚೀವರ್ ಸ್ಪೋರ್ಟ್ಸ್ ಡಾಟ್​ಕಾಮ್ ಸಹಯೋಗದೊಂದಿಗೆ ಸಂಘಿಟಿಸಿದ್ದ 3 ದಿನಗಳ ಪಂದ್ಯಾವಳಿಯಲ್ಲಿ ಹುಬ್ಬಳ್ಳಿ, ಧಾರವಾಡ, ದಾವಣಗೆರೆ, ಕಲಘಟಗಿ, ಕುಂದಗೋಳ ಸೇರಿ 12 ತಂಡಗಳು ಭಾಗವಹಿಸಿದ್ದವು.