ಕರ್ನಾಟಕ ವಿದ್ಯಾವರ್ಧಕ ಸಂಘದಿಂದ ಉಪನ್ಯಾಸ ಕಾರ್ಯಕ್ರಮ ಉದ್ಘಾಟನೆ 
ಧಾರವಾಡ

ರಂಗಭೂಮಿಗೆ ಜಾನಪದವೇ ಮೂಲ

ಜಗದೀಶ ಹೊಂಬಳಿ
ಧಾರವಾಡ: ಗ್ರೀಸ್ ದೇಶದಲ್ಲಿ ಕ್ರಿ.ಪೂ ಆರನೇಯ ಶತಮಾನದಲ್ಲಿಯೇ ನಾಟಕ ಪರಂಪರೆ ಪ್ರಾರಂಭವಾಯಿತು. ರಂಗಭೂಮಿಗೆ ಜಾನಪದವೇ ಮೂಲ ಎಂದು ಹುಬ್ಬಳ್ಳಿ ಜೀವಿ ಕಲಾ ಬಳಗದ ಅಧ್ಯಕ್ಷ ಗದಿಗೆಯ್ಯ ಹಿರೇಮಠ ಅಭಿಪ್ರಾಯಪಟ್ಟರು.
ಹುಬ್ಬಳ್ಳಿ ವಿದ್ಯಾನಗರದ ಕನಕದಾಸ ಶಿಕ್ಷಣ ಸಮಿತಿಯಲ್ಲಿ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಕಲಾ ಮತ್ತು ಜಾನಪದ ಮಂಟಪದ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಉಪನ್ಯಾಸ ಹಾಗೂ ಜಾನಪದ ಹಾಡುಗಾರಿಕೆ ಕಾರ್ಯಕ್ರಮದಲ್ಲಿ `ರಂಗಭೂಮಿ ನಡೆದುಬಂದ ದಾರಿ' ವಿಷಯ ಕುರಿತು ಉಪನ್ಯಾಸ ನೀಡಿದರು.
ರಂಗಭೂಮಿಗೆ ಸುಧೀರ್ಘ ಇತಿಹಾಸವಿದೆ. ಎಲ್ಲ ಸಾಹಿತ್ಯ ಪ್ರಕಾರಗಳಲ್ಲಿ ನಾಟಕಗಳೇ ರಮ್ಯ ಹಾಗೂ ಆಕರ್ಷಣೀಯ ಎಂದು ಕಾಳಿದಾಸರು ಹೇಳಿದ್ದಾರೆ. ಪ್ರಾರಂಭದಲ್ಲಿ ಜಾನಪದ ರಂಗಭೂಮಿ ಉದಯವಾದ ನಂತರ ವೃತ್ತಿ ರಂಗಭೂಮಿ ಅಸ್ತಿತ್ವಕ್ಕೆ ಬಂದಿತು. ವೃತ್ತಿ ರಂಗಭೂಮಿ ಕಲಾವಿದರಿಗೆ ಬದುಕು ಕಟ್ಟಿಕೊಳ್ಳಲು ಸಹಾಯವಾದರೆ, ಹವ್ಯಾಸಿ ರಂಗಭೂಮಿ ಸಮಾಜದ ಅಂಕು-ಡೊAಕು ತಿದ್ದಲು ಪ್ರಮುಖ ಪಾತ್ರ ವಹಿಸಿದವು ಎಂದರು.
ರಂಗಭೂಮಿ ದೇಶದ ಸ್ವಾತಂತ್ರ‍್ಯ ಹೋರಾಟದಲ್ಲೂ ಪ್ರಮುಖ ಪಾತ್ರ ವಹಿಸಿತ್ತು. ನಾಟಕಗಳು ಕೇವಲ ಮನರಂಜನೆ ಮಾಧ್ಯಮವಲ್ಲ. ಸಮಾಜಕ್ಕೆ ಒಳ್ಳೆ ಮಾರ್ಗದರ್ಶನ ಸಂದೇಶ ನೀಡುವುದಾಗಿದೆ ಎಂದರು.
ಹುಬ್ಬಳ್ಳಿ ವಿಜಯನಗರ ಪ.ಪೂ ಕಾಲೇಜಿನ ಪ್ರಾಚಾರ್ಯ ಪ್ರೊ. ಸಂದೀಪ ಬೂದಿಹಾಳ ಮಾತನಾಡಿ, ಕ.ವಿ.ವ. ಸಂಘ ಈ ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿಕ ಶ್ರೀಮಂತಿಕೆ ಹೆಚ್ಚಿಸಲು ನಿರಂತರವಾಗಿ ಶ್ರಮಿಸುತ್ತ ಬಂದಿದೆ ಎಂದು ಶ್ಲಾಘಿಸಿದರು.
ಹುಬ್ಬಳ್ಳಿಯ ಕನಕದಾಸ ಶಿಕ್ಷಣ ಸಮಿತಿ ಉಪಾಧ್ಯಕ್ಷ ಶಾಂತಣ್ಣ ಕಡಿವಾಲ ಅಧ್ಯಕ್ಷತೆ ವಹಿಸಿದ್ದರು. ಜಾನಪದ ವಿದ್ವಾಂಸ ಡಾ. ರಾಮು ಮೂಲಗಿ ಜಾನಪದದಲ್ಲಿರುವ ಜೀವನ ಮೌಲ್ಯಗಳ ಹಾಡುಗಳನ್ನು ಹಾಡಿ ಪ್ರೇಕ್ಷಕರನ್ನು ರಂಜಿಸಿದರು. ಶಿವರಾಜ ಹಿರೇಮಠ ಹಾರ್ಮೋನಿಯಂ ಸಾಥ್, ನಾಗಲಿಂಗ ಮುರಗಿ ತಬಲಾ ಸಾಥ್ ನೀಡಿದರು. ರವೀಂದ್ರ ದಂಡಿನ, ವಿ.ಜಿ. ಪಾಟೀಲ, ಸಿ.ಜಿ. ಧಾರವಾಡಶೆಟ್ಟರ ವೇದಿಕೆಯಲ್ಲಿದ್ದರು.
ಆರ್.ಎಸ್.ಬಾಳನಗೌಡರ, ಲಾಲಸಾಬ ಬೂದಿಹಾಳ, ಬಸವರಾಜ ಸುಳ್ಳದ, ಗುರು ಕಲ್ಮಠ, ಎಂ. ಪಿ. ಮಟ್ಟಿ, ಶಿವಣ್ಣ ಬೆಟಗೇರಿ, ಡಾ. ಸುರೇಶ ಹೊರಕೇರಿ ಇತರರು ಉಪಸ್ಥಿತರಿದ್ದರು.
ಮಹೇಶ ಹೊರಕೇರಿ ಪರಿಚಯಿಸಿದರು. ಶಿವಾನಂದ ಭಾವಿಕಟ್ಟಿ ಪ್ರಸ್ತಾವಿಕವಾಗಿ ಮಾತನಾಡಿದರು. ವೀರಣ್ಣ ಒಡ್ಡೀನ ನಿರೂಪಿಸಿದರು. ಭೀಮಣ್ಣ ಖಟಾವಿ ವಂದಿಸಿದರು.