flute music ಪಂ. ಪ್ರವೀಣ ಗೋಡ್ಖಿಂಡಿ  
ಧಾರವಾಡ

flute music ಪಂ. ಪ್ರವೀಣ ಗೋಡ್ಖಿಂಡಿ ಕೊಳಲು ವಾದನ

ಬಸವರಾಜ ಎಸ್. ಇದ್ಲಿ

ಪ್ರಮುಖ ಮುಖ್ಯಾಂಶಗಳು

  • 14ರಂದು ಕೃಷ್ಣಾ ಹಾನಗಲ್​ ರಾಷ್ಟ್ರೀಯ ಪುರಸ್ಕಾರ ಪ್ರದಾನ
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಖ್ಯಾತ ಹಿಂದುಸ್ತಾನಿ ಕಲಾವಿದೆ, ವಿದುಷಿ ಕೃಷ್ಣಾ ಹಾನಗಲ್​ ಅವರ ಸ್ಮರಣೆಯಲ್ಲಿ ಪ್ರತಿ ವರ್ಷ ಪ್ರಬುದ್ಧ ಕಲಾವಿದರೊಬ್ಬರಿಗೆ ಪುರಸ್ಕಾರ ನೀಡುತ್ತ ಬರಲಾಗಿದೆ. ಪ್ರಶಸ್ತಿಯು 50 ಸಾವಿರ ರೂ. ನಗದು, ಫಲಕಗಳನ್ನು ಒಳಗೊಂಡಿದೆ. ಜ. 14ರಂದು ಸಂಜೆ 5ಕ್ಕೆ ಇಲ್ಲಿಯ ಸವಾಯಿ ಗಂಧರ್ವ ಹಾಲ್​ನಲ್ಲಿ ಏರ್ಪಡಿಸಿರುವ ಕಾರ್ಯಕ್ರಮದಲ್ಲಿ ಪದ್ಮಶ್ರೀ ಪಂ. ವೆಂಕಟೇಶಕುಮಾರ ಅವರು ಪ್ರಶಸ್ತಿ ಪ್ರದಾನ ಮಾಡುವರು ಎಂದರು.
ಸಿಂಫನಿ ಇನ್​ಸ್ಟಿಟ್ಯೂಟ್​ ಆಫ ಮ್ಯೂಸಿಕ್​ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಪಂ. ಪ್ರವಿಣ ಗೋಡ್ಖಿಂಡಿ ಅವರ ಕೊಳಲು ವಾದನ ಇರಲಿದೆ. ಆರಂಭದಲ್ಲಿ ಕೋಮಲ್​ ನಾಡಿಗೇರ ಗಾಯನದೊಂದಿಗೆ ಸಂಗೀತ ಕಚೇರಿ ಆರಂಭವಾಗಲಿದೆ. ಹೇಮಂತ ಜೋಶಿ, ಬಸವರಾಜ ಹಿರೇಮಠ ಅವರು ತಬಲಾ, ಚಿದಂಬರ ಜೋಶಿ ಹಾಮೋರ್ನಿಯಂ ಸಾಥ್​ ನೀಡುವರು.
ಸಂಗೀತ ವಿದ್ಯಾಲಯದ ವೈಷ್ಣವಿ ಹಾನಗಲ್​ ಮಾತನಾಡಿ, ಗಂಗೂಬಾಯಿ ಹಾನಗಲ್​ ಅವರು ವಾಸವಾಗಿದ್ದ ದೇಶಪಾಂಡೆನಗರದ ಮನೆಯಲ್ಲಿ ಸಂಗೀತ ತರಬೇತಿ ನಡೆಸಲಾಗುತ್ತಿದೆ. ಅವರು ಬಳಕೆ ಮಾಡುತ್ತಿದ್ದ ಸಂಗೀತ ಪರಿಕರ, ಅವರಿಗೆ ಸಂದ ಗೌರವ, ಸನ್ಮಾನ, ಬಿರುದುಗಳ ಮ್ಯೂಸಿಯಂ ಮಾಡಲಾಗಿದ್ದು, ಅನೇಕರು ಭೇಟಿ ನೀಡಿ ವೀಕ್ಷಣೆ ಮಾಡುತ್ತಿದ್ದಾರೆ. ಮಕ್ಕಳು, ಸಂಗೀತಾಸಕ್ತರು ಭೇಟಿ ನೀಡಬಹುದು ಎಂದರು.