pallava ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕೇಂದ್ರದ ಅಧ್ಯಕ್ಷ ಪ್ರದೀಪ ಭಟ್ಟ.
- ತಿಲ್ಲಾನ ನೃತ್ಯ ಬಂಧಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಲಿದ್ದಾರೆ.
- ವಿಶೇಷ ನೃತ್ಯ ರೂಪಕ ಮೂಡಿಬರಲಿದೆ.
- ನೃತ್ಯಗುರು ಡಾ. ಸಹನಾ ಭಟ್ಟ ಅವರಿಗೆ ಗುರುವಂದನೆ ಸಲ್ಲಿಸಲಾಗುವುದು
ಹುಬ್ಬಳ್ಳಿ :
ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕೇಂದ್ರದ ಅಧ್ಯಕ್ಷ ಪ್ರದೀಪ ಭಟ್ಟ ಅವರು, ಅನಘಾ ಕುಲಕರ್ಣಿ, ಟಿ. ವೈಷ್ಣವಿ ಸಿಂಗ್, ಭುವನಾ ಹಿರೇಮಠ, ರಾಘವಿ ಪತ್ತೇಪುರ ಹಾಗೂ ಸಾನಿಧ್ಯ ಬಿಳ್ಳೂರ ಅವರು ಭರತನಾಟ್ಯ ನೃತ್ಯ ಪ್ರದರ್ಶನ ನೀಡಲಿದ್ದಾರೆ ಎಂದರು.
ಭರತನಾಟ್ಯ ಕಲಿಕೆ ಆರಂಭದ ಕೆಲ ವರ್ಷಗಳ ನಂತರ ಪ್ರಥಮ ಪಲ್ಲವ ಕಾರ್ಯಕ್ರಮ ನಡೆಸಲಾಗುತ್ತದೆ. ಈ ಕಾರ್ಯಕ್ರಮದಲ್ಲಿ ದಾಶರಥಿ ಎಂಬ ವಿಶೇಷ ನೃತ್ಯ ರೂಪಕ ಮೂಡಿಬರಲಿದ್ದು, ಅದನ್ನು ತಾವೇ ರಚನೆ ಮಾಡಿರುವುದಾಗಿ ತಿಳಿಸಿದರು.
ಪುಷ್ಪಾಂಜಿ, ಜತಿಸ್ವರ, ಕೃತಿ, ಶಿವಸ್ತುತಿ, ದೇವರ ನಾಮ, ತಿಲ್ಲಾನ ನೃತ್ಯ ಬಂಧಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಲಿದ್ದಾರೆ.
ನೃತ್ಯಗುರು ಡಾ. ಸಹನಾ ಭಟ್ಟ ಅವರಿಗೆ ಗುರುವಂದನೆಯನ್ನು ಇದೇ ಸಂದರ್ಭದಲ್ಲಿ ಸಲ್ಲಿಸಲಾಗುವುದು ಎಂದು ಹೇಳಿದರು.
ಅಭ್ಯಾಗತರಾಗಿ ಡಾ. ಶಿವರಾಮ ಕೆ.ವಿ. ಹಾಗೂ ವನಿತಾ ಆರ್. ಪಾಲ್ಗೊಳ್ಳುವರು. ಹಿಮ್ಮೇಳದಲ್ಲಿ ಡಾ. ಸಹನಾ ಭಟ್ಟ, ವಿನಯ ಮನ್ಯಾ, ಪಂಚಮ ಉಪಾಧ್ಯಾಯ, ದೀಪಕ ಹೆಬ್ಬಾರ, ಗೋಪಾಲಕೃಷ್ಣ ಸಾಥ್ ನೀಡಲಿದ್ದಾರೆ ಎಂದರು.
ನೃತ್ಯ ಗುರು ಡಾ. ಸಹನಾ ಭಟ್ಟ, ಕಿರಣ ಹಿರೇಮಠ, ರವಿ ಬಿಳ್ಳೂರ. ಡಾ. ವಿಶಾಲಾಕ್ಷ್ಮಿ ಕುಲಕರ್ಣಿ ಸುದ್ದಿಗೋಷ್ಠಿಯಲ್ಲಿ ಇದ್ದರು.