(Home Minister.) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ. 
ಧಾರವಾಡ

ಗೃಹ ಸಚಿವರನ್ನು ವಜಾಗೊಳಿಸಿ Home Minister

ಪ್ರಮುಖ ಮುಖ್ಯಾಂಶಗಳು

  • ಸರ್ಕಾರವನ್ನು ಒತ್ತಾಯಿಸಿದ ಗೋವಿಂದ ಕಾರಜೋಳ, ಛಲವಾದಿ ನಾರಾಯಣಸ್ವಾಮಿ
  • ಹೊಸ ಕಾನೂನು ಹುಟ್ಟುಹಾಕುವ ಅವಶ್ಯಕತೆ ಇಲ್ಲ.
  • ವಿವೇಕಾನಂದನಿಗೆ ಸರ್ಕಾರಿ ಉದ್ಯೋಗ ನೀಡಬೇಕು.
ಶನಿವಾರದಂದು ಇನಾಂ ವೀರಾಪೂರ ಗ್ರಾಮಕ್ಕೆ ಭೇಟಿ ನೀಡಿ, ಹತ್ಯೆಗೀಡಾದ ಮಾನ್ಯಳ ಪತಿ ಹಾಗೂ ಕುಟುಂಬದವರಿಗೆ ಸಾಂತ್ವನ ಹೇಳಿದ ನಂತರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಕೊಲೆ, ಅತ್ಯಾಚಾರ, ಸುಲಿಗೆಯಂತಹ ಘಟನೆಗಳು ಹೆಚ್ಚುತ್ತಲೇ ಇವೆ. ದಲಿತರಿಗೆ, ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ. ಬಸವ, ಬುದ್ಧ, ಅಂಬೇಡ್ಕರ್ ಅವರ ತತ್ವ, ಆದರ್ಶಗಳ ಬಗ್ಗೆ ಮಾತನಾಡುವ ಜನರ ಮಧ್ಯದಲ್ಲಿರುವವರು ಇಂತಹ ಹತ್ಯೆ ಮಾಡುತ್ತಾರೆಂದರೆ ನಂಬಲು ಅಸಾಧ್ಯ ಎಂದರು.
ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ತಡೆಯಲು ಮಾನ್ಯಳ ಹೆಸರಿನಲ್ಲಿ ಕಾನೂನು ರೂಪಿಸುವುದಾಗಿ ಗೃಹ ಸಚಿವರು ಹೇಳಿದ್ದಾರೆ. ಹೊಸ ಕಾನೂನು ಹುಟ್ಟುಹಾಕುವ ಅವಶ್ಯಕತೆ ಇಲ್ಲ. ಇರುವ ಕಾನೂನುಗಳನ್ನೇ ಕಟ್ಟುನಿಟ್ಟಾಗಿ ಪಾಲಿಸಬೇಕಾಗಿದೆ. ಆದರೆ, ಕಾಂಗ್ರೆಸ್ ಸರ್ಕಾರದ ಮೃಧು ಧೋರಣೆಯಿಂದಾಗಿ ಆರೋಪಿಗಳಿಗೆ ಕಾನೂನಿನ ಭಯ ಇಲ್ಲದಂತಾಗಿದೆ ಎಂದು ಹೇಳಿದರು.
ಮಾನ್ಯಳ ಪತಿ ವಿವೇಕಾನಂದ ಹಾಗೂ ಕುಟುಂಬದವರಿಗೆ ಹುಬ್ಬಳ್ಳಿಯಲ್ಲಿ ಸೂಕ್ತ ನಿವೇಶನ ನೀಡಬೇಕು. ಅವರನ್ನು ಹುಬ್ಬಳ್ಳಿಗೆ ಸ್ಥಳಾಂತರಿಸಬೇಕು. ವಿವೇಕಾನಂದನಿಗೆ ಸರ್ಕಾರಿ ಉದ್ಯೋಗ ನೀಡಬೇಕು. ಕಾಂಗ್ರೆಸ್ ಸರ್ಕಾರದ ಸಚಿವರು ಮತ್ತು ಕಾಂಗ್ರೆಸ್ ಮುಖಂಡರಿಗೆ ಹೃದಯವೂ ಇಲ್ಲ, ಚರ್ಮವೂ ಇಲ್ಲ. ಹಲವಾರು ಕೊಲೆಗಳು ನಡೆಯುತ್ತಿದ್ದರೂ ಕಾನೂನು ಸುವ್ಯವಸ್ಥೆ ಸುಧಾರಿಸಲು ಈ ಸರ್ಕಾರಕ್ಕೆ ಆಗುತ್ತಿಲ್ಲ ಎಂದು ದೂರಿದರು.
ಸಂಸದ ಗೋವಿಂದ ಕಾರಜೋಳ ಮಾತನಾಡಿ, ಬುದ್ಧಿಜೀವಿಗಳೆಂದು ಕರೆಯಿಸಿ ಕೊಳ್ಳುವವರು, ಅಹಿಂದ ನಾಯಕರೆಂದು ಹೇಳಿಕೊಳ್ಳುವವರು ಮಾನ್ಯಳ ಕೊಲೆ ಬಗ್ಗೆ ಮಾತನಾಡದಿರುವುದು ಬೇಸರ ಮೂಡಿಸಿದೆ. ಸ್ವತಃ ದಲಿತರಾಗಿರುವ ಗೃಹ ಸಚಿವರು ಮತ್ತು ಸಮಾಜ ಕಲ್ಯಾಣ ಇಲಾಖೆ ಸಚಿವರು ಹತ್ಯೆ ನಡೆದು ಹಲವು ದಿನಗಳು ಕಳೆದರೂ ಇನಾಂ ವೀರಾಪೂರ ಗ್ರಾಮಕ್ಕೆ ಭೇಟಿ ನೀಡಿರಲಿಲ್ಲ. ಬಿಜೆಪಿ ಮುಖಂಡರ ಒತ್ತಾಯದ ನಂತರ ಸರ್ಕಾರ ಎಚ್ಚೆತ್ತಿದೆ ಎಂದರು.
ಬಿಜೆಪಿಯ ಮಹೇಂದ್ರ ಕೌತಾಳ, ವಸಂತ ನಾಡಜೋಶಿ, ಇತರರು ಸುದ್ದಿಗೋಷ್ಠಿಯಲ್ಲಿ ಇದ್ದರು.