film songs ಕಾರ್ಯಕ್ರಮದ ಬ್ಯಾನರ್ ಬಿಡುಗಡೆ ಮಾಡಿದ ಶಿವಾನಂದ ಮುತ್ತಣ್ಣವರ ಹಾಗೂ ಇತರರು. 
ಧಾರವಾಡ

film songs ಅಯೋಗ್ಯ 2 ಧ್ವನಿಸುರುಳಿ ಬಿಡುಗಡೆ

ಪ್ರಮುಖ ಮುಖ್ಯಾಂಶಗಳು

  • ನೀನಾಸಂ ಸತೀಶ, ರಚಿತಾ ರಾಮ್​ಗೆ ಅದ್ದೂರಿ ಸ್ವಾಗತ
  • ಪೊಲೀಸ್​ ಆಯುಕ್ತ ಎನ್​. ಶಶಿಕುಮಾರ ಅವರಿಂದ ಉದ್ಘಾಟನೆ
ಹುಬ್ಬಳ್ಳಿ: film songs ಖ್ಯಾತ ನಟ ನೀನಾಸಂ ಸತೀಶ ಹಾಗೂ ನಟಿ ರಚಿತಾ ರಾಮ್​ ಅವರ ಅಭಿನಯದ ಅಯೋಗ್ಯ-2 ಚಿತ್ರದ ಧ್ವನಿಸುರುಳಿ ಬಿಡುಗಡೆ ದೇಶಪಾಂಡೆನಗರದ ಸವಾಯಿ ಗಂಧರ್ವ ಹಾಲ್​ನಲ್ಲಿ ಜುಲೈ 19ರಂದು ಆಯೋಜಿಸಲಾಗಿದೆ ಎಂದು ಸಿಬಿಎಫ್​ಸಿ ಮಾಜಿ ನಿರ್ದೇಶಕ ಶಿವಾನಂದ ಮುತ್ತಣ್ಣವರ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಮಧ್ಯಾಹ್ನ 2ಗಂಟೆಗೆ ದೇಶಪಾಂಡೆ ನಗರದ ಶಾರದಾ ಹೋಟೆಲ್​ ಮುಂಭಾಗದಿಂದ ಚಿತ್ರ ತಂಡ ಹಾಗೂ ನಟರನ್ನು ಸಾರೋಟದಲ್ಲಿ ವಿವಿಧ ಜಾನಪದ ಕಲಾತಂಡಗಳೊಂದಿಗೆ ಅದ್ದೂರಿಯಾಗಿ ಸ್ವಾಗತಿಸಲಾಗುವುದು. ಮೆರವಣಿಗೆ ನಡೆಸಲಾಗುವುದು. ವಿವಿಧ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಭಾಗವಹಿಸಲಿದ್ದಾರೆ ಎಂದರು.
ಚಿತ್ರದ ಧ್ವನಿಸುರುಳಿ ಬಿಡುಗಡೆ ಸಮಾರಂಭವನ್ನು ಪೊಲೀಸ್​ ಆಯುಕ್ತ ಎನ್​. ಶಶಿಕುಮಾರ ಅವರು ಉದ್ಘಾಟಿಸುವರು. ನಿರ್ಮಾಪಕ ಎಂ. ಮುನೇಗೌಡ, ನಿರ್ದೇಶಕ ಎಸ್​. ಮಹೇಶಕುಮಾರ ಸೇರಿದಂತೆ ಚಿತ್ರತಂಡದ ಅನೇಕರು ಭಾಗವಹಿಸುವರು ಎಂದರು.
ಅತಿಥಿಗಳಾಗಿ ಕರ್ನಾಟಕ ರಾಜ್ಯ ಐದು ವಿಮಾನ ನಿಲ್ದಾಣಗಳ ನಾಮಕರಣ ಸಮಿತಿಯ ಯುವ ಅಧ್ಯಕ್ಷ ಶ್ರೀಗಂಧ ಶೇಟ್​, ಮುಖಂಡರಾದ ಅನಿಲಕುಮಾರ ಪಾಟೀಲ, ಚಂದ್ರಶೇಖರ ಜುಟ್ಟಲ್​, ಅಡಿವೆಪ್ಪ ಶಿವಳ್ಳಿ, ವಿದ್ಯಾ ಶೆಟ್ಟಿ, ಮಲ್ಲಿಕಾರ್ಜುನ ಕುನ್ನೂರ ಭಾಗವಹಿಸುವರು.
ಸಮಾರಂಭದ ಅಂಗವಾಗಿ ಗುರು ಚಲವಾದಿ ಅವರ ತಂಡದಿಂದ ಸಂಗೀತ ಕಾರ್ಯಕ್ರಮವೂ ನಡೆಯಲಿದೆ. ಸಾರ್ವಜನಿಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ ಎಂದು ಹೇಳಿದರು.
ದ್ಯಾಮಣ್ಣ ಡೋಂಗಿ, ಗುರು ಚಲವಾದಿ, ಮಲ್ಲಿಕಾರ್ಜುನ ತಾಲೂರ, ಚಂದ್ರಶೇಖರ ಹೊಸಳ್ಳಿ, ರಾಜು ಜೋಸೆಫ್​, ಆನಂದ ಡೋಂಗಿ ಗೋಷ್ಠಿಯಲ್ಲಿದ್ದರು.