ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಧಾನಸಭೆ ವಿರೋಧ ಪಕ್ಷದ ಉಪ ನಾಯಕ ಅರವಿಂದ ಬೆಲ್ಲದ. fight 
ಧಾರವಾಡ

ಅಕ್ರಮ ನಿವಾಸಿಗಳಿಗೆ ಪುನರ್ವಸತಿ ಕಲ್ಪಿಸಿದರೆ ಹೋರಾಟ fight

ಪ್ರಮುಖ ಮುಖ್ಯಾಂಶಗಳು

  • ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ ಅರವಿಂದ ಬೆಲ್ಲದ.
  • ನುಸುಳುಕೋರರಿಂದ ಆಗುತ್ತಿರುವ ಹಾನಿಯ ಬಗ್ಗೆ ತಲೆಕೆಡಿಸಿಕೊಳ್ಳದ ಕಾಂಗ್ರೆಸ್ ಸರ್ಕಾರ.
  • ಕೇರಳದ ಪರವಾಗಿ ಕೆಲಸ ಮಾಡಬಾರದು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಕ್ರಮ ನಿವಾಸಿಗಳನ್ನು ಭೇಟಿಯಾಗಿರುವ ಸಚಿವ ಜಮೀರ್ ಅಹ್ಮದ್ ಖಾನ್ ಅವರು 24 ತಾಸುಗಳಲ್ಲಿ ಸಿಹಿ ಸುದ್ದಿ ನೀಡುವ ಭರವಸೆ ನೀಡಿರುವುದನ್ನು ಗಮನಿಸಿದರೆ ರಾಜ್ಯ ಕಾಂಗ್ರೆಸ್ ಸರ್ಕಾರ ನುಸುಳುಕೋರರಿಗೆ ಪುನರ್ವಸತಿ ಕಲ್ಪಿಸುತ್ತಿರುವುದು ಬಹಿರಂಗಗೊಂಡಂತಾಗಿದೆ ಎಂದರು.
ನುಸುಳುಕೋರರಿಂದ ಆಗುತ್ತಿರುವ ಹಾನಿಯ ಬಗ್ಗೆ ತಲೆಕೆಡಿಸಿಕೊಳ್ಳದ ಕಾಂಗ್ರೆಸ್ ಸರ್ಕಾರ, ಅವರಿಗೆ ಪುನರ್ವಸತಿ ಕಲ್ಪಿಸಿಕೊಡುವ ಮೂಲಕ ತಮ್ಮ ಪಕ್ಷದ ದೆಹಲಿ ನಾಯಕರ ಓಲೈಕೆಗೆ ಮುಂದಾಗಿದೆ. ಕಾಂಗ್ರೆಸ್ ಹೈಕಮಾಂಡ್ ಸೂಚನೆ ಮೇರೆಗೆ ಸಚಿವ ಜಮೀರ್ ಅಹ್ಮದ್ ನುಸುಳುಕೋರರಿಗೆ ಇಲ್ಲಸಲ್ಲದ ಭರವಸೆ ನೀಡುತ್ತಿದ್ದಾರೆ. ರಾಜ್ಯದ ಜನರ ಪರವಾಗಿ ಸರ್ಕಾರ ಕೆಲಸ ಮಾಡಬೇಕು. ಅದನ್ನು ಬಿಟ್ಟು ಕೇರಳದ ಪರವಾಗಿ ಕೆಲಸ ಮಾಡಬಾರದು ಎಂದು ಒತ್ತಾಯಿಸಿದರು.
ರಾಜ್ಯದಲ್ಲಿರುವ ಮಾದಕ ವಸ್ತುಗಳ ತಯಾರಿಕೆ ಘಟಕಗಳ ಮೇಲೆ ಅನ್ಯ ರಾಜ್ಯಗಳ ಪೊಲೀಸರು ದಾಳಿ ಮಾಡುತ್ತಿದ್ದರೂ, ನಮ್ಮ ಪೊಲೀಸರು, ಗುಪ್ತಚರ ಇಲಾಖೆ ಹಾಗೂ ಗೃಹ ಸಚಿವರು ಏನು ಮಾಡುತ್ತಿದ್ದಾರೆ ? ಮಾದಕ ವಸ್ತುಗಳ ತಯಾರಿಕೆ ಘಟಕ, ಮಾರಾಟದಲ್ಲಿ ಕರ್ನಾಟಕವು ಪಂಜಾಬ್ ಮಾದರಿ ಅನುಸರಿಸುತ್ತಿರುವುದು ಆತಂಕ ಮೂಡಿಸಿದೆ. ಕೆಲ ಸಚಿವರ ಪುತ್ರರು ಹಾಗೂ ಸಂಬಂಧಿಕರು ಈ ದಂಧೆಯಲ್ಲಿದ್ದಾರೆಂದು ಹೇಳಲಾಗುತ್ತಿದೆ. ಅದೆಲ್ಲ ತನಿಖೆ ಮೂಲಕ ಬಹಿರಂಗಗೊಳ್ಳಬೇಕಿದೆ ಎಂದರು.
ಮಾಜಿ ಸಚಿವ ಎನ್. ಮಹೇಶ, ಬಿಜೆಪಿ ಮುಖಂಡ ಡಾ. ಕ್ರಾಂತಿಕಿರಣ ಸುದ್ದಿಗೋಷ್ಠಿಯಲ್ಲಿ ಇದ್ದರು.