fest celebration ಹುಬ್ಬಳ್ಳಿಯ ಶ್ರೀ ಕುಮಾರೇಶ್ವರ ಸಿದ್ಧಿವಿನಾಯಕ ವೃದ್ಧಾಶ್ರಮದಲ್ಲಿ ಶ್ರೀಗಣೇಶೋತ್ಸವ ಸಮಿತಿಗಳ ಮಹಾಮಂಡಳದಿಂದ ರಕ್ಷಾ ಬಂಧನ ಆಚರಿಸಲಾಯಿತು. ವಿದ್ಯಾ ಪಾಟೀಲ, ಡಾ. ಎಂ.ಎಂ. ನುಚ್ಚಿ, ಅನಿತಾ ಜಡಿ, ಈರಣ್ಣ ಪಾಳೇದ, ಮಹೇಶ ಶೇಟ, ಎಸ್.ಎಸ್. ಕಮಡೊಳ್ಳಿಶೆಟ್ರು, ರಾಜು ಕರಕಣ್ಣವರ, ಅಮರೇಶ ಹಿಪ್ಪರಗಿ ಇತರರು ಉಪಸ್ಥಿತರಿದ್ದರು.
ಹುಬ್ಬಳ್ಳಿ: fest celebration ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಗಳ ಮಹಾಮಂಡಳ ವತಿಯಿಂದ ಇಲ್ಲಿಯ ಬಸವ ವನ ಹತ್ತಿರದ ಶ್ರೀ ಕುಮಾರೇಶ್ವರ ಸಿದ್ಧಿವಿನಾಯಕ ಅನಾಥಾಶ್ರಮ, ವೃದ್ಧಾಶ್ರಮದಲ್ಲಿ ರಕ್ಷಾ ಬಂಧನ ಆಚರಿಸಲಾಯಿತು.
ವೃದ್ಧರು ಹಾಗೂ ಆಶ್ರಮದ ಎಲ್ಲ ನಿವಾಸಿಗಳಿಗೆ ಶ್ರೀರಕ್ಷೆ ಕಟ್ಟಲಾಯಿತು. ಸಿಹಿ ತಿನ್ನಿಸಿ ಆರತಿ ಬೆಳಗಿ ಸಂಭ್ರಮ ಹಂಚಿಕೊಂಡರು.
ಸಮಾಜ ಸೇವಕಿ ವಿದ್ಯಾ ಪಾಟೀಲ ಮಾತನಾಡಿ, ರಕ್ಷಾ ಬಂಧನವು ಮಹಿಳೆಯರಿಗೆ ಪವಿತ್ರವಾದ ಹಬ್ಬವಾಗಿದೆ. ಇದರಿಂದ ಸಹೋದರತ್ವ ಮನೋಭಾವನೆ ಇಮ್ಮಡಿಯಾಗುತ್ತದೆ ಎಂದರು.
ರಂಗಭೂಮಿ ಕಲಾವಿದ ಈರಣ್ಣ ಪಾಳೇದ, ಸಮಾಜ ಸೇವಕ ಮಹೇಶ ಶೇಟ, ಶ್ರೀಧರ ಪೂಜಾರ, ಎಸ್.ಎಸ್. ಕಮಡೊಳ್ಳಿಶೆಟ್ರು, ರಾಜು ಕರಕಣ್ಣವರ, ಇತರರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಮಹಾಮಂಡಳದ ಮಹಿಳಾ ವಿಭಾಗದ ಮುಖ್ಯಸ್ಥೆ ಅನಿತಾ ಜಡಿ, ಅಣ್ಣ- ತಂಗಿಯರ ಬಾಂಧವ್ಯ ದೇವರ ಆಶೀರ್ವಾದದಿಂದ ಬಂದಿದೆ. ಇದನ್ನು ಗಟ್ಟಿಗೊಳಿಸುವ ಹಬ್ಬ ಇದಾಗಿದೆ ಎಂದರು.
ಸುಷ್ಮಾ ಕೊಂಗಿ, ಸಂಗೀತಾ ಇಜಾರದ, ಸರಸ್ವತಿ ಮೆಹರವಾಡೆ, ಅಕ್ಕಮ್ಮ ಕಂಬಳಿ, ಸಂಗೀತಾ ಜಡಿ, ಡಾ. ಮಂಜುಳಾ ಹತ್ತಿಮತ್ತೂರ, ಸಂಗೀತಾ ದೇವದಾಸ, ಸುವರ್ಣ ಹಳಿಜೋಳ, ಗೀತಾ ಕಾಟಿಗರ, ಅಮರೇಶ ಹಿಪ್ಪರಗಿ, ಚಂದ್ರಶೇಖರ ಗಾಣಿಗೇರ, ರವೀಂದ್ರ ಹಳಿಜೋಳ, ಸಂತೋಷ ಕಟ್ಟಿ ಇತರರು ಉಪಸ್ಥಿತರಿದ್ದರು.
ರೇಖಾ ಆಪ್ಟೆ ಸ್ವಾಗತಿಸಿದರು. ಸರೋಜಾ ಛಬ್ಬಿ ಕಾರ್ಯಕ್ರಮ ನಿರೂಪಿಸಿದರು.