Drama ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಗತಿ ಕಲಾವೃಂದದ ಅಧ್ಯಕ್ಷ ಅನಿಲ ಕವಿಶೆಟ್ಟಿ. 
ಧಾರವಾಡ

ಬೇಲಿ ಮತ್ತು ಹೊಲ ನಾಟಕ ಪ್ರದರ್ಶನ 28ಕ್ಕೆ Drama

ಆನಂದಕುಮಾರ ಅಂಗಡಿ
ಹುಬ್ಬಳ್ಳಿ:
ಕುಂ. ವೀರಭದ್ರಪ್ಪನವರ ಕಿರು ಕಾದಂಬರಿ ಆಧಾರಿತ ನಾಟಕ ಇದಾಗಿದ್ದು, ಜಿ.ಎಚ್. ರಾಘವೇಂದ್ರ ಅವರು ರಂಗರೂಪ ನೀಡಿದ್ದಾರೆ. 25 ಕಲಾವಿದರು ಅಭಿನಯಿಸಿದ್ದಾರೆ ಎಂದು ಹೇಳಿದರು.
ಸರ್ವಧರ್ಮ ಸಮಾಜ ಸೇವಕ ಡಾ. ರಮೇಶ ಮಹಾದೇವಪ್ಪನವರ ಉದ್ಘಾಟಿಸುವರು. ವಿಧಾನ ಪರಿಷತ್ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ ಅಧ್ಯಕ್ಷತೆ ವಹಿಸುವರು ಎಂದು ತಿಳಿಸಿದರು.
ಬೆಳಗಾವಿ ಸಂಸದ ಜಗದೀಶ ಶೆಟ್ಟರ್, ಶ್ರೀ ದತ್ತ ಇನ್​ಫ್ರಾಸ್ಟ್ರಕ್ಚರ್​ನ ಮಾಲೀಕರಾದ ಪ್ರಕಾಶ ಜೋಶಿ, ಕೆಎಲ್​ಇ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಮುಖ್ಯಸ್ಥರಾದ ಡಾ. ಎಂ.ಜಿ. ಹಿರೇಮಠ, ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ, ಬೆಂಗಳೂರಿನ ಕೆಎಸ್​ಎಲ್​ಇಸಿಎ ಮಾಜಿ ಅಧ್ಯಕ್ಷ ವಿಜಕುಮಾರ ಗುಡ್ಡದ, ವ್ಯಾಪಾರಸ್ಥರಾದ ಶಂಕರ ಕೋಳಿವಾಡ, ಪತ್ರಕರ್ತ ಗಣಪತಿ ಗಂಗೊಳ್ಳಿ ಹಾಗೂ ನಿವೃತ್ತ ಪ್ರಾಧ್ಯಾಪಕ ಮಧುಕರ ಎಕ್ಕುಂಡಿ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ಹೇಳಿದರು.
ಮನೆಯೊಂದರಲ್ಲಿ ಕಳ್ಳತನ ನಡೆದ ನಂತರ ಮನೆ ಮಾಲೀಕ ಪೊಲೀಸ್ ಠಾಣೆಗೆ ದೂರು ನೀಡಿದ ಘಟನೆಯನ್ನು ಆಧರಿಸಿ, ವ್ಯವಸ್ಥೆಯ ವಿವಿಧ ಮುಖಗಳ ಮೇಲೆ ಈ ನಾಟಕದ ಮೂಲಕ ಬೆಳಕು ಚೆಲ್ಲಲಾಗಿದೆ ಎಂದು ತಿಳಿಸಿದರು.
ಅನುರಾಗ ಸಂಗಮ ಸಂಗೀತ ಸಂಸ್ಥೆಯ ಅಧ್ಯಕ್ಷ ಬಸವರಾಜ ಸಜ್ಜನ, ಸುಭಾಷ ಮೆಹರವಾಡೆ, ಸಿದ್ದಪ್ಪ ಅಂಗಡಿ ಸುದ್ದಿಗೋಷ್ಠಿಯಲ್ಲಿ ಇದ್ದರು.