ಕಲಘಟಗಿ ಪಟ್ಟಣದಲ್ಲಿ ಆಲಿಕಲ್ಲು ಮಳೆ ಬಿದ್ದ ಕಾರಣ ರಸ್ತೆ, ಹೊಲಗಳ ತುಂಬ ಮಂಜುಗಡ್ಡೆ ಆವರಿಸಿದಂತಾಗಿತ್ತು. Kishmir
ಧಾರವಾಡ
ಕಲಘಟಗಿ ಹೆದ್ದಾರಿಯಲ್ಲಿ ಕಾಶ್ಮೀರದ ಫೀಲಿಂಗ್! Kashmir
ಕಲಘಟಗಿ: ಮಂಗಳವಾರ ಸಂಜೆ ಏಕಾಏಕಿ ಬಿರುಗಾಳಿ ಸಹಿತ ಆಲಿಕಲ್ಲು ಮಳೆಯಾಗಿದ್ದು, ಕಲಘಟಗಿ ಪಟ್ಟಣ ಹಾಗೂ ಕೆಲವು ಗ್ರಾಮಗಳು ಅಕ್ಷರಃ ಕಾಶ್ಮೀರದಂತೆ Kashmir ಕಂಡುಬಂದಿತು.
ಮಳೆ ಮುಗಿಯುವುದರೊಳಗೆ ಆಲಿಕಲ್ಲುಗಳು: ಕಲಘಟಗಿ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಮಂಗಳವಾರ ಭಾರಿ ಪ್ರಮಾಣದಲ್ಲಿ ಬಿರುಗಾಳಿ ಸಹಿತ ಅಲಿಕಲ್ಲು ಮಳೆಯಾಗಿದೆ.
ಮನೆಯ ಛಾವಣಿ, ಮನೆ ಮುಂದೆ ನಿಲ್ಲಿಸಿದ್ದ ವಾಹನಗಳು, ದನಕರುಗಳು, ರಸ್ತೆ ಬದಿಯ ಗಿಡಮರಗಳು, ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ. ಗೃಹಬಳಕೆ ವಸ್ತುಗಳೆಲ್ಲವೂ ತೊಪ್ಪೆಯಾಗಿದ್ದವು. ರೈತರು, ಸಾರ್ವಜನಿಕರು ಹಾಗೂ ವಾಹನ ಸವಾರರು ಬಹಳ ಸಮಯ ಪರದಾಡಿದರು.
ಸಂಚಾರ ಸ್ಥಗಿತ
ಭಾರಿ ಪ್ರಮಾಣದ ಆಲಿಕಲ್ಲು ಮಳೆಯಾಗಿದ್ದರಿಂದ ಕಲಘಟಗಿಯಿಂದ ಮಾಚಾಪುರ ಮಾರ್ಗವಾಗಿ ಸಂಚರಿಸುವ ರಸ್ತೆಯ ತುಂಬ ಕಣ್ಣು ಹಾಯಿಸಿದಷ್ಟು ಆಲಿಕಲ್ಲು(ಮಂಜುಗಡ್ಡೆ ) ತುಂಬಿದ್ದರಿಂದ ವಾಹನ ಸಂಚಾರ ಕೆಲಕಾಲ ಸ್ಥಗಿತಗೊಂಡಿತ್ತು.
ಘಟನಾ ಸ್ಥಳಕ್ಕೆ ಸಚಿವ ಸಂತೋಷ ಲಾಡ್ ಅವರ ಆಪ್ತ ಕಾರ್ಯದರ್ಶಿಗಳ ತಂಡ ಭೇಟಿ ನೀಡಿ, ಜೆಸಿಬಿಯಿಂದ ರಸ್ತೆ ಮೇಲೆ ಬಿದ್ದ ಮಂಜುಗಡ್ಡೆ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಯಿತು.
ಕಾರಿನ ಗ್ಲಾಸ್ ಚೂರು: ಬಿರುಸಿನಿಂದ ಬಿದ್ದ ಆಲಿಕಲ್ಲುಗಳ ಹೊಡೆತಕ್ಕೆ ಮಾಚಾಪುರ ಗ್ರಾಮದಲ್ಲಿನ ಬಹುತೇಕ ಮನೆಯ ಮೇಲಿನ ಹಂಚುಗಳು ಮುರಿದು ಬಿದ್ದಿವೆ. ಜಗದೀಶ ಹಿರೇಮಠ ಎಂಬುವರ ಮನೆ ಹೊರಗಡೆ ನಿಲ್ಲಿಸಿದ ಕಾರಿನ ಗ್ಲಾಸ್‌ಗಳು ಪುಡಿಯಾಗಿವೆ.
ಅಲಿಕಲ್ಲು ಮಳೆಗೆ ಮನೆಗಳು ಹಾನಿ
ಅಕಾಲಿಕ ಮಳೆಯಿಂದಾಗಿ ಕಲಘಟಗಿ ಪಟ್ಟಣ ಹಾಗೂ ಮಚ್ಚಾಪುರ ಗ್ರಾಮಗಳಲ್ಲಿನ ಮನೆಗಳು ಹಾಗೂ ಮನೆಯಲ್ಲಿ ದಿನೋಪಯೋಗಿ ವಸ್ತುಗಳೆಲ್ಲವೂ ಹನಿಯಾಗಿವೆ. ಮನೆಯೊಳಗೇ ನೀರು ನುಗ್ಗಿ ಮಕ್ಕಳು, ಹಿರಿಯರು ಹಾಗೂ ಮಹಿಳೆಯರು ಪರದಾಡುವಂತಯಿತು.
ಮಂಜುಗಡ್ಡೆ ಅವರಿಸಿದ್ದಕ್ಕೆ ಹೆಚ್ಚಾದ ಚಳಿ
ರಸ್ತೆ ಮನೆ ಹೊಲ ಗದ್ದೆಗಳಲ್ಲಿ ಎಲ್ಲೆಂದರಲ್ಲಿ ಅಲಿಕಲ್ಲು ಪ್ರಮಾಣ ಹೆಚ್ಚಾಗಿ ಕಂಡು ಬಂದಿರುವುದರಿಂದ ಗ್ರಾಮದಲ್ಲಿನ ಜನ ಜಾನುವಾರುಗಳೆಲ್ಲವೂ ಚಳಿಯಿಂದ ತೊಂದರೆ ಅನುಭವಿಸುವಂತಾಯಿತು. ಅತಿಯಾದ ಚಳಿಗೆ ಜನರು ಕಂಗಲಾಗಿ ಮೈತುಂಬು ಉಣ್ಣಿಬಟ್ಟೆ (ಸ್ವೇಟರ್) ಧರಿಸುವಂತಾಯಿತು.