26 ಸಾವಿರ ರೂಪಾಯಿ ಭರಿಸಿದ ತಂದೆ  
ಧಾರವಾಡ

ಅಪ್ತಾಪ್ತನಿಗೆ ಬೈಕ್​ ಕೊಟ್ಟ ತಂದೆಗೆ 26 ಸಾವಿರ ರೂ. ದಂಡ

ಧಾರವಾಡ: ಅಪ್ರಾಪ್ತ ಮಗನಿಗೆ ಬೈಕ್​ ಚಲಾಯಿಸಲು ಕೊಟ್ಟ ತಪ್ಪಿಗೆ ತಂದೆ 26 ಸಾವಿರ ರೂಪಾಯಿ ಭರಿಸಿದ್ದಾರೆ! ನಗರದ ಮೈನುದ್ದೀನ್​ ಜಲಾಲದಾರ ದಂಡ ಭರಿಸಿದವರು.
ಇವರ ಅಪ್ರಾಪ್ತ ಮಗ ಬೈಕ್​ ಚಲಾಯಿಸುವಾಗ ಪೊಲೀಸರಿಗೆ ಸಿಕ್ಕು ಬಿದ್ದಿದ್ದ. ನಂತರ ಪೊಲೀಸರು ಸಂಚಾರಿ ನಿಯಮಾನುಸಾರ ದಂಡ ವಿಧಿಸಿದ್ದರು. ನಗರದ ಹಿರಿಯ ದಿವಾಣಿ ನ್ಯಾಯಾಲಯದಲ್ಲಿ ಪಾಲಕರು ಬುಧವಾರ 26 ಸಾವಿರ ರೂಪಾಯಿ ದಂಡ ಪಾವತಿಸಿದ್ದಾರೆ. ಅವರನ್ನು ಠಾಣೆಗೆ ಕರೆಸಿದ ಪೊಲೀಸರು ಸಂಚಾರಿ ನಿಯಮಗಳ ತಿಳಿವಳಿಕೆ ನೀಡಿ ಕಳುಹಿಸಿದ್ದಾರೆ.
ಸಂಚಾರಿ ಠಾಣೆ ಇನ್​ಸ್ಪೆಕ್ಟರ್​ ಶ್ರೀನಿವಾಸ ಮೇಟಿ ಅವರ ಮಾರ್ಗದರ್ಶನದಲ್ಲಿ ಪಿಎಸ್​ಐ ವಿ.ಐ. ಬಳ್ಳಾರಿ ಮತ್ತು ಕಾನ್ಸ್​ಟೇಬಲ್​ ಆಶ್ಪಕ್​ ಬಡಕಾಶಪ್ಪನವರ ಕ್ರಮ ಕೈಕೊಂಡಿದ್ದರು.