Fashion sho ಹುಬ್ಬಳ್ಳಿಯಲ್ಲಿ ಮಾಹಿತಿ ನೀಡಿದ ಸಂಸ್ಥೆ ಅಧ್ಯಕ್ಷೆ ಅವನಿಕ.
ಮಹಿಳೆಯರ ಆತ್ಮವಿಶ್ವಾಸ ಹೆಚ್ಚಿಸುವ ಜತೆಗೆ ಸಂಸ್ಕೃತಿ ಮತ್ತು ಸಾಂಪ್ರದಾಯಿಕ ಉಡುಗೆಯನ್ನು ಎಲ್ಲೆಡೆ ಪರಿಚಯಿಸುವ ಉದ್ದೇಶದಿಂದ ಅವನಿ ಫ್ಯಾಷನ್ ಶೋ ಸಾರಿ ಸ್ಪರ್ಧೆಯನ್ನು ನಗರದಲ್ಲಿ ಆಯೋಜಿಸಲಾಗುತ್ತಿದೆ ಎಂದು ಬೆಂಗಳೂರಿನ ಶ್ರೀ ಮಹಿಳಾ ಮತ್ತು ಮಕ್ಕಳ ರಕ್ಷಣೆ ಹಾಗೂ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷೆ ಅವನಿಕ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಎಲ್ಲ ವಯೋಮಾನದವರು ಭಾಗವಹಿಸಬಹುದಾದ ಉಚಿತ ಶೋದಲ್ಲಿ ಆಸಕ್ತ ಮಹಿಳೆಯರಿಗೆ ತರಬೇತಿ, ಅಗತ್ಯ ಮಾಹಿತಿ ನೀಡಲಾಗುತ್ತದೆ. ಉತ್ತಮ ಪ್ರದರ್ಶನ ನೀಡುವ ಮಹಿಳೆಯರಿಗೆ ಬಹುಮಾನ ನೀಡಲಾಗುತ್ತಿದೆ ಎಂದರು.
ವಿಜೇತ ಮೂವರಿಗೆ ಹುಬ್ಬಳ್ಳಿ ಸೂಪರ್ ಆಫ್ ಫೇಮ್ 2026 ಕಿರೀಟ ತೊಡಿಸಿ ಸನ್ಮಾನಿಸಲಾಗುವುದು. ಇದೊಂದು ಸೌಂದರ್ಯ, ಸಂಸ್ಕೃತಿ ಮತ್ತು ಆತ್ಮವಿಶ್ವಾಸದ ಅದ್ಭುತ ಸಂಭ್ರಮಾಚರಣೆ ಆಗಲಿದೆ ಎಂದರು.
ಗೃಹಿಣಿಯರು, ಮಹಿಳೆಯರು ಹಾಗೂ ವಿದ್ಯಾರ್ಥಿನಿಯರಿಗೆ ಇದೊಂದು ಉತ್ತಮ ಅವಕಾಶವಾಗಿದೆ. 50ಕ್ಕೂ ಹೆಚ್ಚು ಜನರು ಭಾಗವಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಬೈಲಪ್ಪನವರ ನಗರ ಗಣಪತಿ ದೇವಸ್ಥಾನ ಹತ್ತಿರ ವಿನಾಯಕ ಕಾಂಪ್ಲೆಕ್ಸ್ನಲ್ಲಿ ಆರಂಭಿಸಿರುವ ಕಚೇರಿಯಲ್ಲಿ ಪಡೆಯಬಹುದು.
ಧನುಶ್ರೀ, ಶೃತಿ, ಸೌಮ್ಯ, ದೀಪಾ, ಕಾಂಚನ ಇತರರು ಇದ್ದರು.