ಹುಬ್ಬಳ್ಳಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ (Farmer Service Center)ಸಮರ್ಥ ಬಯೋಟೆಕ್ ಲಿಮಿಟೆಡ್ನ ಚೇರ್ಮನ್ ಮಂಜುನಾಥ ಸಾನು ಮಾತನಾಡಿದರು.
ಹುಬ್ಬಳ್ಳಿ: ಮಣ್ಣು ಮತ್ತು ನೀರಿನ ಗುಣಧರ್ಮ ಪರೀಕ್ಷೆ, (Farmer Service Center) ಜೈವಿಕ ಗೊಬ್ಬರ, ಸೂಕ್ಷ್ಮ ಪೋಷಕಾಂಶ, ಸಾವಯವ ಗೊಬ್ಬರ ಹಾಗೂ ಕೀಟನಾಶಕವನ್ನು ರೈತರಿಗೆ ರಿಯಾಯಿತಿ ದರದಲ್ಲಿ ಒದಗಿಸುವ ಉದ್ದೇಶದಿಂದ ನಗರದ ನೀಲಿಜಿನ್ ರಸ್ತೆ ಲಕ್ಷೀ ಕಾಂಪ್ಲೆಕ್ಸ್ನಲ್ಲಿ ಸಮರ್ಥ ಭಾರತ ರೈತ ಸೇವಾ ಕೇಂದ್ರ ತೆರೆಯಲಾಗಿದೆ. ಇದರ ಉದ್ಘಾಟನಾ ಸಮಾರಂಭ ಫೆ. 18ರಂದು ಬೆಳಗ್ಗೆ 11 ಗಂಟೆಗೆ ಗೋಕುಲ ರಸ್ತೆ ಹೆಬಸೂರ ಭವನದಲ್ಲಿ ನಡೆಯಲಿದೆ ಎಂದು ಸಮರ್ಥ ಬಯೋಟೆಕ್ ಲಿಮಿಟೆಡ್ನ ಚೇರ್ಮನ್ ಮಂಜುನಾಥ ಸಾನು ತಿಳಿಸಿದರು.
ಹುಬ್ಬಳ್ಳಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಕಂಪನಿಯ ಉತ್ಪನ್ನ ಹಾಗೂ ಸೇವೆಯನ್ನು ನೇರವಾಗಿ ರೈತರಿಗೆ ತಲುಪಿಸುವುದರಿಂದ ರಿಯಾಯಿತಿ ದರದಲ್ಲಿ ನೀಡಲಾಗುತ್ತಿದೆ. ಕಡಿಮೆ ಖರ್ಚಿನಲ್ಲಿ ಒಕ್ಕಲುತನ ಮಾಡಿದರೆ ಮಾತ್ರ ರೈತ ಶ್ರೀಮಂತನಾಗಲು ಸಾಧ್ಯ. ಜೈವಿರ ಗೊಬ್ಬರ ಬಳಕೆ ಮಾಡಿದರೆ ಹೆಚ್ಚು ಅನುಕೂಲ ಎಂದು ಹೇಳಿದರು.
ಉದ್ಘಾಟನಾ ಸಮಾರಂಭದಲ್ಲಿ ಮಾಜಿ ಲೋಕಾಯುಕ್ತ ಸಂತೋಷ ಹೆಗ್ಡೆ, ವಿಆರ್ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಧಾರವಾಡ ಕೃಷಿ ವಿವಿ ವಿಶ್ರಾಂತ ಕುಲಪತಿ ಡಾ. ಜೆ.ಎಚ್. ಕುಲಕರ್ಣಿ, ಪತ್ರಕರ್ತ ಅರುಣಕುಮಾರ ಹಬ್ಬು, ಮಂಗಳೂರು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಮಂಜುನಾಥ ರೇವಣಕರ್ ಪಾಲ್ಗೊಳ್ಳುವರು ಎಂದರು.
ನಾನು ಕೃಷಿ ಉದ್ಯಮಿಯಾಗಿದ್ದು, ರಾಷ್ಟ್ರ ಮಟ್ಟದ ಪ್ರಶಸ್ತಿ ಪಡೆದಿದ್ದೇನೆ. ನನ್ನ 30 ವರ್ಷದ ವೃತ್ತಿ ಜೀವನದ ಕುರಿತು ‘ನಮಗೆ ನಾವೇ ಮಾದರಿ’ ಎಂಬ ಆತ್ಮಚರಿತ್ರೆಯನ್ನು ಕನ್ನಡ ಮತ್ತು ಇಂಗ್ಲಿಷ್ (ಐಡಲಾಯಿಸ್ ಯುವರಸೆಲ್ಪ್) ಭಾಷೆಯಲ್ಲಿ ಹೊರ ತರಲಾಗಿದ್ದು, ಅದರ ಲೋಕಾರ್ಪಣೆ ಸಹ ಇದೇ ಕಾರ್ಯಕ್ರಮದಲ್ಲಿ ನಡೆಯಲಿದೆ. ಜೋಡೆತ್ತಿ ಕೃಷಿ, ಸಾವಯವ ಪದ್ಧತಿ, ರೈತರ ಆತ್ಮಹತ್ಯೆ ತಡೆ, ಇತ್ಯಾದಿ ವಿಷಯಗಳ ಕುರಿತು ಬರೆಯಲಾಗಿದೆ. ಪತ್ರಕರ್ತ ಅರುಣಕುಮಾರ ಹಬ್ಬು ನಿರೂಪಣೆ ಮಾಡಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ರಿತೇಶ ಸಾನು ಹಾಗೂ ಅರುಣಕುಮಾರ ಹಬ್ಬು ಇದ್ದರು.