ಜಿಲ್ಲಾಧಿಕಾರಿ ಆರ್. ಸ್ನೇಹಲ್
ಧಾರವಾಡ: ಜಿಲ್ಲಾಧಿಕಾರಿ ಆರ್. ಸ್ನೇಹಲ್ ಅವರ ವಾಟ್ಸಾಪ್ನ ನಕಲಿ ಅಕೌಂಟ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಬೇರೆ ನಂಬರ್ಗೆ ಡಿಸಿ ಅವರ ಫೋಟೋ ಇಟ್ಟಿರುವ ಕಿಡಿಗೇಡಿಗಳು ವಾಟ್ಸಾಪ್ ಮೂಲಕ ಮೆಸೇಜ್ ಮಾಡಿ ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ. ಇತರರಿಂದ ಈ ಸುದ್ದಿ ತಿಳಿದ ಜಿಲ್ಲಾಧಿಕಾರಿ, ಸೈಬರ್ ಠಾಣೆಗೆ ದೂರು ನೀಡಿದ್ದಾರೆ. ಯಾರೂ ಈ ರೀತಿಯ ಸಂದೇಶಕ್ಕೆ ಸ್ಪಂದಿಸಬೇಡಿ ಎಂದು ವಾಟ್ಸಾ ್ಯಪ್ ಸ್ಟೇಟಸ್ ಹಾಕಿ ಮನವಿ ಮಾಡಿದ್ದಾರೆ.