ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನ ದಳದೊಂದಿಗೆ ಪೊಲೀಸರ ತಪಾಸಣೆ
ಧಾರವಾಡ: ಜಿಲ್ಲಾ ನ್ಯಾಯಾಲಯಕ್ಕೆ ಗುರುವಾರ ಮತ್ತೆ ಹುಸಿ ಬಾಂಬ್ ಬೆದರಿಕೆ ಸಂದೇಶ ಇ- ಮೇಲ್ ಬಂದಿದೆ. ಜೂ. 19ರಂದು ಇದೇ ನ್ಯಾಯಾಲಯಕ್ಕೆ ಬಾಂಬ್ ಸ್ಫೋಟಿಸುವ ಬೆದರಿಕೆ ಇ- ಮೇಲ್ ಸಂದೇಶ ಬಂದಿತ್ತು. ಇದಕ್ಕೂ ಮುಂಚೆ 2 ಬಾರಿ ಬಾಂಬ್ ಬೆದರಿಕೆ ಸಂದೇಶ ಬಂದಿತ್ತು.
ಗುರುವಾರ ಬೆಳಗ್ಗೆ ಜೆನ್ ಜಿ ಡಿಎಂಕೆ ನಾಯಕ ಎಂದು ಹೆಸಸಿರುವ ವ್ಯಕ್ತಿ ಪಿಡಿಜೆ ಧಾರವಾಡ ಐಡಿಗೆ ಮೇಲ್ ಮಾಡಿದ್ದ. ಅದನ್ನು ಗಮನಿಸಿದ ಕೋರ್ಟ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಕೂಡಲೇ ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನ ದಳದೊಂದಿಗೆ ಸ್ಥಳಕ್ಕೆ ಧಾವಿಸಿದ ಪೊಲೀಸರು ತಪಾಸಣೆ ನಡೆಸಿದರು. ನ್ಯಾಯಾಲಯದಲ್ಲಿ ಸ್ಫೋಟಕ ಪತ್ತೆಯಾಗದ ಹಿನ್ನೆಲೆಯಲ್ಲಿ ಇದು ಹುಸಿ ಬೆದರಿಕೆ ಸಂದೇಶ ಎಂದು ಖಚಿತಪಡಿಸಿಕೊಳ್ಳಲಾಯಿತು.