ಕಲಘಟಗಿ ಪಟ್ಟಣ ಪಂಚಾಯಿತಿ ಸಭಾಭವನದಲ್ಲಿ ಗ್ರಾಮದೇವಿ ಜಾತ್ರಾ ಮಹೋತ್ಸವದ ಪೂರ್ವಭಾವಿಯ ಸಭೆಯಲ್ಲಿ ಸಚಿವ ಸಂತೋಷ್ ಲಾಡ್ ಮಾತನಾಡಿದರು. ತಹಸೀಲ್ದಾರ್ ಬಸವರಾಜ ಹೊಂಕಣದವರ, ತಾ.ಪಂ ಇಒ ಪಿ.ವೈ. ಸಾವಂತ ಇತರರಿದ್ದರು. 
ಧಾರವಾಡ

Kalaghatagi Gramadevi Jatre: ಗ್ರಾಮದೇವಿ ಜಾತ್ರೆ ಯಶಸ್ವಿಗೆ ಸಹಕಾರ

ಮಂಜುನಾಥ ಗದಗಿನ
ವಿಜಯವಾಣಿ ಸುದ್ದಿಜಾಲ ಕಲಘಟಗಿ
ಉತ್ತರ ಕರ್ನಾಟಕದ ಪ್ರಮುಖ ಜಾತ್ರೆಗಳಲ್ಲಿ ಕಲಘಟಗಿ ಗ್ರಾಮದೇವಿ ಜಾತ್ರೆಯೂ ಒಂದು. ಈಗಾಗಲೇ ಜಾತ್ರೆಯ ಪೂರ್ವ ತಯಾರಿ ಜರುಗಿದೆ. ಜಾತ್ರೆ ಯಶಸ್ಸಿಗೆ ಪ್ರತಿಯೊಬ್ಬರು ಕೈಜೋಡಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.
ಪಟ್ಟಣ ಪಂಚಾಯತಿ ಕಾರ್ಯಾಲಯದಲ್ಲಿ ಮಂಗಳವಾರ ಕಲಘಟಗಿ ಗ್ರಾಮದೇವಿ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಅವರ ಮಾತನಾಡಿ, ದರ್ಶನಕ್ಕೆ ಬಂದಂತ ಭಕ್ತರ ಭದ್ರೆತೆಗಾಗ ಹೆಚ್ಚಿನ ಪೊಲೀಸ್ ಸಿಬ್ಬಂದಿ ಹಾಗೂ ಸಿಸಿ ಕ್ಯಾಮರಾ ಅಳವಡಿಕೆಯೂ ಮಾಡಲಾಗುವುದು. ಸರ್ಕಾರದಿಂದ ಇತರ ಸಕಲ ಸೌಲಭ್ಯ ಒದಗಿಸುತ್ತೇವೆ ಎಂದರು.
ಸಾರ್ವಜನಿಕರ ತುರ್ತು ಸೇವೆಗಾಗಿ ಲಾಡ್ ಫೌಂಡೇಶನ್ ವತಿಯಿಂದ ಆಂಬುಲೆನ್ಸ್ ಸೇವೆ ಒದಗಿಸಲಾಗುತ್ತದೆ. ಪ್ರತಿ ಮೂರು ವರ್ಷಗಳಿಗೊಮ್ಮೆ ನಡೆಯುವ ಕಲಘಟಗಿ ಜಾತ್ರೆಯು ಈ ಬಾರಿ ಫೆಬ್ರವರಿ 25 ರಿಂದ ಮಾರ್ಚ್ 5 ರವರೆಗೆ 9 ದಿನಗಳ ಕಾಲ ನಡೆಯಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಬಸವರಾಜ ಹೊಂಕಣದವರ, ತಾ.ಪಂ ಇಒ ಪಿ.ವೈ. ಸಾವಂತ, ಪ.ಪಂ ಮುಖ್ಯಾಧಿಕಾರಿ ಚಂದ್ರಶೇಖರ್ ಬಿ, ಸಿಪಿಐ ಶ್ರೀಶೈಲ್ ಕೌಜಲಗಿ, ಗ್ರಾಮದೇವವಿ ಟ್ರಸ್ಟ್ ಕಮಿಟಿ ಅಧ್ಯಕ್ಷ ಶ್ರೀಕಾಂತ ಖಟಾವಕರ, ಪ್ರಧಾನ ಕಾರ್ಯದರ್ಶಿ ರಾಕೇಶ ಅಳಗವಾಡಿ, ಬ್ಲಾಕ್ ಕಾಂಗ್ರೆಸ್ ತಾಲೂಕು ಅಧ್ಯಕ್ಷ ಮಂಜುನಾಥಗೌಡ ಮುರಳ್ಳಿ, ಬಾಬಣ್ಣ ಅಂಚಟಗೇರಿ, ಕುಮಾರ ಖಂಡೇಡೆಕರ್, ನಿತಿನ್ ಶೆವಡೆ, ಗಂಗಪ್ಪ ಗೌಳಿ, ಉತ್ಸವ, ಬಾಳು ಖಾನಾಪುರ ಋಷಬೇಂದ್ರ ಪಟ್ಟಣಶೆಟ್ಟಿ, ರಾಘವೇಂದ್ರ ಹುಲಿಹೊಂಡ ಇತರರಿದ್ದರು.