ಹುಬ್ಬಳ್ಳಿ ಮಂಟೂರ ರಸ್ತೆ ಕಲ್ಬುರ್ಗಿ (Eye test)ಮಠದಲ್ಲಿ ಶುಕ್ರವಾರ ಉಚಿತ ಕಣ್ಣಿನ ಪೊರೆ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸೆ ಶಿಬಿರ ಏರ್ಪಡಿಸಲಾಗಿತ್ತು. ಶ್ರೀ ಬಸವಲಿಂಗ ಸ್ವಾಮೀಜಿ, ಶ್ರೀ ಚರಲಿಂಗ ಸ್ವಾಮೀಜಿ, ಮಲ್ಲಿಕಾರ್ಜುನ ಸಾವಕಾರ, ಗಜಾನನ ನೀಲಾಕರಿ, ಎಸ್. ವಿ. ಅಂಗಡಿ, ಮುರುಗೇಶ ಯಕಲಾಸಪುರ, ಮಹಾಂತೇಶ ಗಿರಿಮಠ, ಇತರರು ಇದ್ದರು. 
ಧಾರವಾಡ

25 ಜನರ (Eye test)ಶಸ್ತ್ರಚಿಕಿತ್ಸೆಗೆ ವ್ಯವಸ್ಥೆ

ಸಂತೋಷ ವೈದ್ಯ
ಹುಬ್ಬಳ್ಳಿ: ಮಂಟೂರ ರಸ್ತೆ ಕಲ್ಬುರ್ಗಿ ಮಠದಲ್ಲಿ (Eye test)ಕರ್ನಾಟಕ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ದಿ ಸಂಘದ ಹುಬ್ಬಳ್ಳಿ ತಾಲೂಕು ಮತ್ತು ಶಹರ ಘಟಕದಿಂದ ಶ್ರೀ ಧನ್ವಂತರಿ ಸೇವಾ ಸಂಸ್ಥೆ ಸಹಯೋಗದಲ್ಲಿ ಶುಕ್ರವಾರ ಉಚಿತ ಕಣ್ಣಿನ ಪೊರೆ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸೆ ಶಿಬಿರ ಏರ್ಪಡಿಸಲಾಗಿತ್ತು.
ನೂರಕ್ಕಿಂತ ಹೆಚ್ಚು ಜನರ ನೇತ್ರ ತಪಾಸಣೆ ನಡೆಸಿ 25 ಜನರ ಶಸ್ತ್ರಚಿಕಿತ್ಸೆಗೆ ಹುಬ್ಬಳ್ಳಿಯ ಜಯಪ್ರಿಯ ಆಸ್ಪತ್ರೆಯಲ್ಲಿ ವ್ಯವಸ್ಥೆ ಮಾಡಲಾಯಿತು.
ರುದ್ರಾಕ್ಷಿ ಮಠದ ಶ್ರೀ ಬಸವಲಿಂಗ ಸ್ವಾಮೀಜಿ ಉದ್ಘಾಟಿಸಿ, ಇಂತಹ ಸಮಾಜಮುಖಿ ಹಾಗೂ ವಿಧಾಯಕ ಕಾರ್ಯಕ್ರಮಗಳ ಮೂಲಕ ಕಲಬುರ್ಗಿ ಮಠವು ಬಡ ಜನತೆಗೆ ಅನುಕೂಲ ಮಾಡುತ್ತಿರುವುದು ತುಂಬಾ ಸಂತೋಷದ ವಿಷಯ. ಈ ಶಿಬಿರದ ಉಪಯೋಗವನ್ನು ಬಡ ಜನತೆ ಪಡೆದುಕೊಳ್ಳಬೇಕು. ಇಂದು ಒಂದು ಕಣ್ಣಿನ ಶಸ್ತ್ರಚಿಕಿತ್ಸೆಗೆ 10ರಿಂದ 50 ಸಾವಿರ ರೂ. ವರೆಗೆ ಖರ್ಚು ಆಗುತ್ತಿದ್ದು ಅದನ್ನು ಸಂಪೂರ್ಣವಾಗಿ ಉಚಿತವಾಗಿ ಮಾಡುತ್ತಿರುವುದು ಪ್ರಶಂಸನೀಯ ಎಂದರು.
ಶ್ರೀ ಚರಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವಾಕರಸಾ ಸಂಸ್ಥೆ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಸಾವಕಾರ ಅಧ್ಯಕ್ಷತೆ ವಹಿಸಿದ್ದರು. ಲೆಕ್ಕ ಪರಿಶೋಧಕ ಗಜಾನನ ನೀಲಾಕರಿ, ಎಸ್. ವಿ. ಅಂಗಡಿ, ಮುರುಗೇಶ ಯಕಲಾಸಪುರ, ಮಹಾಂತೇಶ ಗಿರಿಮಠ, ಶ್ರೀಶೈಲ ಶಿವಮಠ, ಸದಾಶಿವ ಚೌಶೆಟ್ಟಿ, ಬಸವರಾಜ ಹೊಸಮನಿ, ಆನಂದ ಉಪ್ಪಿನ, ಅಜ್ಜಪ್ಪ ಬೆಂಡಿಗೇರಿ, ವಿರೂಪಾಕ್ಷ ಬಿಸರಳ್ಳಿ, ಶಿವಾನಂದ ಉದಪುಡಿ, ಇತರರು ಇದ್ದರು.
ಡಾ. ಸುರೇಶ ಮೆಣಸಗಿ, ಡಾ. ಎಂ.ಜೆ. ಜೀವಣ್ಣವರ್, ಡಾ. ಗೀತಾ ಮೆಹರವಾಡೆ ನೇತ್ರ ತಪಾಸಣೆ ನಡೆಸಿದರು.