ಸೃಷ್ಟಿ ಹಂಚಾಟೆ ಅನುಷಾ ಮುರ್ನಾಳ್ 
ಧಾರವಾಡ

ಪಿಯು ಮರುಮೌಲ್ಯಮಾಪನದಲ್ಲಿ ಹೆಚ್ಚುವರಿ ಅಂಕ

ಮಂಜುನಾಥ ಅಂಗಡಿ
ಧಾರವಾಡ: ನಗರದ ಶ್ರೀಮತಿ ವಿದ್ಯಾ ಪಿ. ಹಂಚಿನಮನಿ ಸ್ವತಂತ್ರ ಪಿಯು ವಿಜ್ಞಾನ ಮಹಾವಿದ್ಯಾಲಯದ ಇಬ್ಬರು ವಿದ್ಯಾರ್ಥಿಗಳು ದ್ವೀತಿಯ ಪಿಯುಸಿ ಪರೀಕ್ಷೆಯ ಮರುಮೌಲ್ಯಮಾಪನದ ಬಳಿಕ ರಾಜ್ಯಕ್ಕೆ 4 ಮತ್ತು 10ನೇ ್ಕರ್ಯಾಂಕ್​ ಗಳಿಸಿದ್ದಾರೆ.
ಸೃಷ್ಟಿ ಹಂಚಾಟೆ ಶೇ. 99.33 (ರಾಜ್ಯಕ್ಕೆ 4ನೇ ರ್ಯಾಂಕ್​) ಹಾಗೂ ಅನುಷಾ ಮುರ್ನಾಳ್​ ಶೇ. 98.33 (ರಾಜ್ಯಕ್ಕೆ 10ನೇ ರ್ಯಾಂಕ್​) ಅಂಕ ಪಡೆದಿದ್ದಾರೆ. ಈ ಮೂಲಕ ಹಂಚಿನಮನಿ ಕಾಲೇಜು ರಾಜ್ಯಕ್ಕೆ 4, 8, 9 ಮತ್ತು 10ನೇ ರ್ಯಾಂಕ್​ ಗಳಿಸಿದೆ.