ಧಾರವಾಡ: ಕಿತ್ತೂರು ರಾಣಿ ಚೆನ್ನಮ್ಮ ಹೆಣ್ಣು ಮಕ್ಕಳ ಸೈನಿಕ ವಸತಿ ಶಾಲೆಯ 2026- 27ನೇ ಸಾಲಿಗೆ ನಡೆದ ಪ್ರವೇಶ ಪರೀಕ್ಷೆಯಲ್ಲಿ ಇಲ್ಲಿನ ಭಾರತಿನಗರದ ಎಕ್ಸಲೆಂಟ್ ಕೋಚಿಂಗ್ ಕ್ಲಾಸಿಸ್ನ ವಿದ್ಯಾಥಿರ್ನಿಯರು ಅಮೋಘ ಸಾಧನೆ ಮಾಡಿದ್ದಾರೆ. ಒಟ್ಟು 40 ವಿದ್ಯಾಥಿರ್ನಿಯರಲ್ಲಿ 18 ವಿದ್ಯಾಥಿರ್ನಿಯರು ಅರ್ಹತೆ ಪಡೆದಿದ್ದಾರೆ.
ಪ್ರತೀಕ್ಷಾ ಬಿ., ಲೈಬಾ ಅಶದುಲ್ ಮುಸ್ಲಿಮಾ , ಗಾನವಿ ಭರತರಾಜ್ , ಸಾನ್ವಿ ಶಿರೋಳ, ವೈಷ್ಣವಿ ಕಲ್ಲಾಪುರ, ತೇಜಶ್ರೀ ಮುಳಗಿ, ರಶ್ಮಿತಾ ಕಲ್ಬುಗಿರ್, ಶ್ರದ್ಧಾ ಭಾವಿ, ಸಮೃದ್ಧಿ ಜುಂಜಾಲಿ, ಪೃಥ್ವಿ ಪಟಗೊಂದಿ, ಪ್ರಗತಿ ಕಮಡೋಳ್ಳಿ, ಪಾವನಿ ಟಿ., ನವ್ಯಾಕೃತಿ ಪಿ.ಎಂ., ಮಾನಸಾ ಶೇಗುಣಸಿ, ಕರಿಷ್ಮಾ ಡಿ., ಭೂಮಿಕಾ ಪಾಟೀಲ, ಆರೋಹಿ ಕಟ್ಟಿ, ಪ್ರಗತಿ ಹಿರೇಮಠ ಆಯ್ಕೆಯಾಗಿದ್ದಾರೆ. ಸಾಧಕ ವಿದ್ಯಾಥಿರ್ನಿಯರನ್ನು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಬಸವರಾಜ ಕೌಲಗಿ ಹಾಗೂ ಸಂಸ್ಥಾಪಕ ನಿರ್ದೇಶಕ ಪ್ರವಿಣ ಗಿರಿಯಪ್ಪನವರ ಮತ್ತು ಸಂಸ್ಥೆಯ ಕಾರ್ಯದಶಿರ್ ಭುವನ್ ಕೌಲಗಿ ಮತ್ತು ಬೋಧಕರು ಅಭಿನಂದಿಸಿದ್ದಾರೆ.